ವಾಷಿಂಗ್ಟನ್ (ಅಮೆರಿಕ): ಇಸ್ರೇಲ್‌ಗೆ ಬೆಂಬಲ ನೀಡಲು ಪೂರ್ವ ಮೆಡಿಟರೇನಿಯನ್ ಪ್ರದೇಶಕ್ಕೆ ವಿಮಾನವಾಹಕ ನೌಕೆ ಕಳುಹಿಸಲು ಅಮೆರಿಕ ನಿರ್ಧರಿಸಿದೆ. ಫೋರ್ಡ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್ ಅನ್ನು ಭಾನುವಾರ ಆ ಸ್ಥಳಕ್ಕೆ ತೆರಳಲು ಪೆಂಟಗನ್ ಆದೇಶಿಸಿದೆ ಎಂದು ಇಬ್ಬರು ಅಮೆರಿಕ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
5 ಸಾವಿರ ನಾವಿಕರು, ಯುದ್ಧವಿಮಾನಗಳು, ಕ್ರೂಸರ್‌ಗಳು ಮತ್ತು ವಿಧ್ವಂಸಕ ನೌಕೆಗಳೊಂದಿಗೆ ಯುಎಸ್‌ಎಸ್ ಜೆರಾಲ್ಡ್ ಆರ್.ಫೋರ್ಡ್ ವಾಹಕವನ್ನು ಕಳುಹಿಸಲಾಗುವುದು. ಇದು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸುತ್ತದೆ ಮತ್ತು ಹಮಾಸ್‌ಗೆ ಹೆಚ್ಚುವರಿ ಶಸ್ತ್ರಾಸ್ತ್ರಗಳನ್ನು ಪೂರೈಸುವವರ ಮೇಲೆಯೂ ಕಣ್ಣಿಡುತ್ತದೆ. ವರ್ಜೀನಿಯಾ ಮೂಲದ ವಿಮಾನವಾಹಕ ನೌಕೆ ಪ್ರಸ್ತುತ ಮೆಡಿಟರೇನಿಯನ್ ಸಮುದ್ರದಲ್ಲಿದೆ. ನೌಕಾ ಕವಾಯತಿಗಾಗಿ ಈ ಪ್ರದೇಶಕ್ಕೆ ಬಂದಿದೆ.
1,000ಕ್ಕೂ ಹೆಚ್ಚು ಜನರು ಬಲಿ: ''ಹಮಾಸ್ ದಾಳಿಯ ನಂತರ, ಎರಡೂ ಕಡೆಗಳಲ್ಲಿ 1,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಇಸ್ರೇಲ್‌ಗೆ ಸಹಾಯ ಮಾಡಲು ಪೂರ್ವ ಮೆಡಿಟರೇನಿಯನ್‌ಗೆ ನೌಕಾಯಾನ ಮಾಡಲು ಸಿದ್ಧವಾಗುವಂತೆ ಫೋರ್ಡ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್‌ಗೆ ಭಾನುವಾರ ಆದೇಶ ನೀಡಿಲಾಗಿದೆ'' ಎಂದು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ. ದಾಳಿ ವೇಳೆ, ಕೊಲ್ಲಲ್ಪಟ್ಟವರು ಮತ್ತು ಕಾಣೆಯಾದವರಲ್ಲಿ ಅಮೆರಿಕನ್ನರು ಸೇರಿದ್ದಾರೆ ಎಂದು ವರದಿಯಾಗಿದೆ.
ಇಸ್ರೇಲಿನಿಂದ ನಿನ್ನೆ ಔಪಚಾರಿಕವಾಗಿ ಯುದ್ಧ ಘೋಷಣೆ: ದೊಡ್ಡ ನೌಕೆ ನಿಯೋಜನೆಯು ಸಂಘರ್ಷದ ಯಾವುದೇ ಪ್ರಾದೇಶಿಕ ವಿಸ್ತರಣೆಯನ್ನು ತಡೆಯುವ US ಬಯಕೆಯನ್ನು ಪ್ರತಿಬಿಂಬಿಸುತ್ತದೆ. ಆದರೆ, ಇಸ್ರೇಲಿ ಸರ್ಕಾರವು ಔಪಚಾರಿಕವಾಗಿ ಯುದ್ಧವನ್ನು ಭಾನುವಾರ ಘೋಷಿಸಿತು. ಹಮಾಸ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮಹತ್ವದ ಮಿಲಿಟರಿ ಕ್ರಮಗಳಿಗೆ ಹಸಿರು ನಿಶಾನೆ ತೋರಿಸಿತು. ಪ್ರಾಥಮಿಕ ವರದಿಗಳು ದಾಳಿಯಲ್ಲಿ ಕನಿಷ್ಠ ನಾಲ್ವರು ಅಮೇರಿಕನ್ ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಹೆಚ್ಚುವರಿ ಏಳು ಮಂದಿ ಕಾಣೆಯಾಗಿದ್ದಾರೆ. ಮತ್ತು ಸರಿಯಾದ ಲೆಕ್ಕವಿಲ್ಲ ಎಂದು ಯುಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೆರುಸಲೆಮ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯಿಂದ ಪಡೆದ ಆರಂಭಿಕ ವರದಿಗಳ ಕುರಿತು ಮಾತನಾಡಿದ ಅಧಿಕಾರಿಯ ಪ್ರಕಾರ, ದಾಳಿ ಸಮಯದಲ್ಲಿ ಮೃತಪಟ್ಟವರು, ಕಾಣೆಯಾಗಿರುವವರಲ್ಲಿ ಹೆಚ್ಚಿನವರು ಯುಎಸ್-ಇಸ್ರೇಲಿ ಉಭಯ ನಾಗರಿಕರು ಎಂದು ಅವರು ಹೇಳಿದರು.
''ಈ ಗುಂಪಿನಲ್ಲಿ ಯುಎಸ್ ಕ್ರೂಸರ್, ಯುಎಸ್‌ಎಸ್ ನಾರ್ಮಂಡಿ, ವಿಧ್ವಂಸಕವಾದ ಯುಎಸ್‌ಎಸ್ ಥಾಮಸ್ ಹಡ್ನರ್, USS ರಾಂಪೇಜ್, USS ಕಾರ್ನಿ, USS ರೂಸ್‌ವೆಲ್ಟ್ ಜೊತೆಗೆ F-35, F-15, F-16 ಮತ್ತು A-10 ಫೈಟರ್ ಜೆಟ್‌ಗಳು ಸೇರಿವೆ. ಪ್ರದೇಶದಲ್ಲಿ 10 ಯುದ್ಧ ವಿಮಾನ ಸ್ಕ್ವಾಡ್ರನ್‌ಗಳು, ಅಗತ್ಯವಿದ್ದರೆ ಮತ್ತಷ್ಟು ಬಲಪಡಿಸಲು ಯುಎಸ್ ಜಾಗತಿಕ ಸಿದ್ಧ ಪಡೆಗಳನ್ನು ಕಾರ್ಯನಿರ್ವಹಿಸಲಿದೆ ಎಂದು ಆಸ್ಟಿನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕ್ಯಾರಿಯರ್ ಸ್ಟ್ರೈಕ್ ಗ್ರೂಪ್: ಹೆಚ್ಚುವರಿಯಾಗಿ, ಬೈಡನ್ ಆಡಳಿತವು ಇಸ್ರೇಲ್ ರಕ್ಷಣಾ ಪಡೆಗಳಿಗೆ ಯುದ್ಧಸಾಮಗ್ರಿಗಳನ್ನು ಒಳಗೊಂಡಂತೆ ಹೆಚ್ಚುವರಿ ಉಪಕರಣಗಳು ಮತ್ತು ಸಂಪನ್ಮೂಲಗಳನ್ನು ತ್ವರಿತವಾಗಿ ಒದಗಿಸುತ್ತದೆ. ನಾರ್ಫೋಕ್, ವರ್ಜೀನಿಯಾ ಮೂಲದ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್ (ಈಗಾಗಲೇ ಮೆಡಿಟರೇನಿಯನ್‌ನಲ್ಲಿದೆ). ಕಳೆದ ವಾರ ಅದು ಇಟಲಿಯೊಂದಿಗೆ ಅಯೋನಿಯನ್ ಸಮುದ್ರದಲ್ಲಿ ನೌಕಾ ಸಮರಾಭ್ಯಾಸ ನಡೆಸುತ್ತಿದೆ.
ಜೋ ಬೈಡನ್- ಬೆಂಜಮಿನ್ ನೆತನ್ಯಾಹು ಮಾತುಕತೆ: ಅಧ್ಯಕ್ಷ ಜೋ ಬೈಡನ್ ಮತ್ತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ದೂರವಾಣಿ ಕರೆ ಮಾಡಿ, ''ಇಡೀ ಕುಟುಂಬಗಳು, ವೃದ್ಧರು ಮತ್ತು ಚಿಕ್ಕ ಮಕ್ಕಳು ಸೇರಿದಂತೆ ಹಲವರನ್ನು ಹಮಾಸ್ ಭಯೋತ್ಪಾದಕರು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವ ಬಗ್ಗೆ ಚರ್ಚಿಸಿದ್ದಾರೆ'' ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ. ''ಇಂತಹ ಕ್ರೂರ ದೌರ್ಜನ್ಯಗಳನ್ನು ಎದುರಿಸಲು ಎಲ್ಲ ದೇಶಗಳು ಒಗ್ಗಟ್ಟಾಗಿ ನಿಲ್ಲಬೇಕು'' ಎಂದು ಅಮೆರಿಕ ಅಧ್ಯಕ್ಷರು ಒತ್ತಿ ಹೇಳಿದ್ದಾರೆ.
ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯುವ ಯುಎಸ್ ಪ್ರಯತ್ನದ ಭಾಗವಾಗಿ, ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು, ಸೌದಿ ಅರೇಬಿಯಾ, ಟರ್ಕಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನ ತಮ್ಮ ಸಹವರ್ತಿಗಳೊಂದಿಗೆ ಭಾನುವಾರ ಮಾತನಾಡಿದರು. ಹಮಾಸ್‌ನ ದಾಳಿಯನ್ನು ನಿಲ್ಲಿಸಲು ಮತ್ತು ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಲ್ಲಿ ಯುನೈಟೆಡ್ ಸ್ಟೇಟ್ಸ್‌ನ ನಿರ್ಧಾರವನ್ನು ಎತ್ತಿ ತೋರಿಸಿದರು ಎಂದು ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಪ್ರತ್ಯೇಕ ಹೇಳಿಕೆಗಳಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ಯಾಲೆಸ್ತೀನ್‌ನಲ್ಲಿ ಸಿಲುಕಿದ್ದ ಮೇಘಾಲಯದ 27 ಯಾತ್ರಿಕರು ಈಜಿಪ್ಟ್‌ಗೆ ತೆರಳಿದ್ದಾರೆ: ಸಿಎಂ ಕಾನ್ರಾಡ್ ಕೆ ಸಂಗ್ಮಾ