ETV Bharat / international

'ನಮಗೆ ಭಾರತ ಎಮರ್ಜೆನ್ಸಿ ಕರೆ ಇದ್ದ ಹಾಗೆ, ಟೀಕಿಸಿದ ಸಚಿವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ' - Lakshadweep

ಪ್ರಧಾನಿ ಮೋದಿ ಮತ್ತು ಭಾರತವನ್ನು ನಿಂದಿಸಿ ಮಾಲ್ಡೀವ್ಸ್ ಪೇಚಿಗೆ ಸಿಲುಕಿದೆ. ಭಾರತದ ಮನವೊಲಿಸಲು ನಾನಾ ಕಸರತ್ತು ಮಾಡುತ್ತಿದೆ. ಅಲ್ಲಿನ ಸಂಸದರು, ಮಾಜಿ ಸಚಿವರು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಮಾಲ್ಡೀವ್ಸ್
ಮಾಲ್ಡೀವ್ಸ್
author img

By ETV Bharat Karnataka Team

Published : Jan 9, 2024, 7:01 AM IST

Updated : Jan 9, 2024, 9:28 AM IST

ಮಾಲೆ (ಮಾಲ್ಡೀವ್ಸ್​) : ಪ್ರಧಾನಿ ಮೋದಿ ಮತ್ತು ಭಾರತವನ್ನು ಟೀಕಿಸಿದ ಮಾಲ್ಡೀವ್ಸ್​ ಸಚಿವರ ವಿರುದ್ಧ ಕ್ರಮಕ್ಕೆ ಅಲ್ಲಿನ ಸಂಸದರೇ ಆಗ್ರಹಿಸಿದ್ದಾರೆ. ಭಾರತ ಯಾವಾಗಲೂ ನಮಗೆ 911 ಕಾಲ್ ​(ತುರ್ತು ಪರಿಸ್ಥಿತಿ) ಇದ್ದ ಹಾಗೆ. ದೀರ್ಘಕಾಲದ ಸಂಬಂಧವನ್ನು ಹಾಳು ಮಾಡಿಕೊಳ್ಳುವುದು ಸರಿಯಲ್ಲ ಎಂದು ರಕ್ಷಣಾ ಇಲಾಖೆ ಮಾಜಿ ಸಚಿವೆ ಮರಿಯಾ ಅಹ್ಮದ್ ದೀದಿ ಸಲಹೆ ನೀಡಿದ್ದಾರೆ.

ಪ್ರಧಾನಿ ಮೋದಿ ಅವರ ವಿರುದ್ಧದ ಸಚಿವರ ಹೇಳಿಕೆಗಳು ಮಾಲ್ಡೀವ್ಸ್ ಸರ್ಕಾರದ ದೂರದೃಷ್ಟಿಯನ್ನು ಪ್ರದರ್ಶಿಸುತ್ತವೆ. ಭಾರತ ಎಂದಿಗೂ ವಿಶ್ವಾಸಾರ್ಹ ಮಿತ್ರರಾಷ್ಟ್ರ. ರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಾಯ ಒದಗಿಸಿದೆ. ಇಂತಹ ದೀರ್ಘಕಾಲದ ಸಂಬಂಧವನ್ನು ಹಾಳುಮಾಡುವ ಯಾವುದೇ ಪ್ರಯತ್ನ ಒಳಿತಲ್ಲ. ಮಾಲ್ಡೀವ್ಸ್​ಗೆ, ಭಾರತ 911 ಕರೆ ಇದ್ದ ಹಾಗೆ. ತುರ್ತು ಪರಿಸ್ಥಿತಿಯಲ್ಲಿ ನೆರವು ನೀಡುವ ಮಿತ್ರದೇಶ ಎಂದು ಬಣ್ಣಿಸಿದ್ದಾರೆ.

  • #WATCH | Male: On the row over Maldives MP's post on Prime Minister Narendra Modi, Former Maldives Defence Minister Mariya Ahmed Didi says, "I would think as close friends, as neighbours, as part of the global community, and we would keep our international commitments and… pic.twitter.com/8LipQWAprF

    — ANI (@ANI) January 8, 2024 " class="align-text-top noRightClick twitterSection" data=" ">

ದೇಶಕ್ಕೆ ಅಗತ್ಯವಿರುವ ವೇಳೆ ಭಾರತ ರಕ್ಷಣೆಗೆ ಬಂದಿದೆ. ಮೇಲಾಗಿ ನಾವು ಗಡಿಯನ್ನು ಹಂಚಿಕೊಂಡಿದ್ದೇವೆ. ರಕ್ಷಣಾ ಕ್ಷೇತ್ರದಲ್ಲಿ ಮಾಲ್ಡೀವ್ಸ್​ ಸ್ವಾವಲಂಬಿಯನ್ನಾಗಿ ಮಾಡಲು ಭಾರತ ಉಪಕರಣಗಳನ್ನು ಒದಗಿಸಿದೆ. ಪ್ರಜಾಪ್ರಭುತ್ವದ ವಿಚಾರದಲ್ಲಿ ಮಾಲ್ಡೀವ್ಸ್ ಮತ್ತು ಭಾರತ ಸಮಾನ ಮನಸ್ಕ ರಾಷ್ಟ್ರಗಳಾಗಿವೆ. ಕೋವಿಡ್​ ಸಾಂಕ್ರಾಮಿಕದ ವೇಳೆ ಲಸಿಕೆಗಳನ್ನು ನೀಡಿ ಇಲ್ಲಿನ ಜನರನ್ನು ಕಾಪಾಡಿದೆ ಎಂದು ಮರಿಯಾ ಅಹ್ಮದ್ ದೀದಿ ನೆನಪಿಸಿದ್ದಾರೆ.

ಸಚಿವರ ವಿರುದ್ಧ ಕ್ರಮಕ್ಕೆ ಆಗ್ರಹ: ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಲ್ಡೀವ್ಸ್​ ಸಚಿವರು ಇತ್ತೀಚಿಗೆ ನೀಡಿದ ಆಕ್ಷೇಪಾರ್ಹ ಹೇಳಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಲ್ಲಿನ ಸಂಸದ ಮಿಕೈಲ್ ನಸೀಮ್ ಸಂಸತ್ತಿಗೆ ಕರೆ ನೀಡಿದ್ದಾರೆ.

ಭಾರತವು ಮಾಲ್ಡೀವ್ಸ್​ಗೆ ಬಹಿಷ್ಕಾರ ಹಾಕಿದೆ. ಇದು ದೇಶಕ್ಕೆ ಒಳಿತಲ್ಲ. ಸರ್ಕಾರ ಕೂಡ ಈ ವಿಚಾರದಲ್ಲಿ ನಿರ್ಲಕ್ಷ್ಯತೆ ವಹಿಸಿದೆ. ಸಚಿವರ ಉತ್ತರದಾಯಿತ್ವ ಮತ್ತು ಕ್ರಮ ಕೈಗೊಳ್ಳಿ ಎಂದು ಸಂಸದ ಮಿಕೈಲ್ ವಿದೇಶಾಂಗ ಸಚಿವ, ಸಂಸದೀಯ ಸಮಿತಿಗೆ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ಮನವಿ ಮಾಡಿದ್ದಾರೆ.

  • Have formally requested the Parliament to summon the Foreign Minister for questioning following the inaction & lack of urgency shown by GoM regarding derogatory remarks against PM Modi by its senior officials. Request also sent to summon said officials to parliamentary committee. pic.twitter.com/LHji5y29d5

    — Meekail Naseem 🎈 (@MickailNaseem) January 8, 2024 " class="align-text-top noRightClick twitterSection" data=" ">

ಏನಿದು ವಿವಾದ: ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪದ ಬೀಚ್​ವೊಂದಕ್ಕೆ ಭೇಟಿ ನೀಡಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಬಣ್ಣಿಸಿ ಕೆಲ ಚಿತ್ರ, ವಿಡಿಯೋವನ್ನು ಹಂಚಿಕೊಂಡಿದ್ದರು. ಸುಂದರ ಲಕ್ಷದ್ವೀಪವು ಮಾಲ್ಡೀವ್ಸ್​​ಗಿಂತಲೂ ಅದ್ಭುತವಾಗಿದೆ ಎಂಬ ಭಾವನೆ ಮೂಡಿಸಿದ್ದರು. ಇದರ ವಿರುದ್ಧ ಮಾಲ್ಡೀವ್ಸ್​ನ ಮೂವರು ಸಚಿವರು ಖಾರವಾಗಿ ಟೀಕಿಸಿದ್ದರು. ವಿವಾದಿತ ಹೇಳಿಕೆಯಿಂದಾಗಿ ಆ ಸಚಿವರನ್ನು ಅಲ್ಲಿನ ಸರ್ಕಾರ ಅಮಾನತು ಮಾಡಿದೆ. ಸ್ಥಳೀಯ ನಾಗರಿಕರು ಸೇರಿದಂತೆ ಸರ್ಕಾರ ಕೂಡ ಇದನ್ನು ಖಂಡಿಸಿದೆ.

ಇದನ್ನೂ ಓದಿ: ಮಾಲ್ಡೀವ್ಸ್​ಗೆ ಇಸ್ರೇಲ್​ ಟಕ್ಕರ್​: ಲಕ್ಷದ್ವೀಪ ವಿಶ್ವತಾಣವಾಗಿ ಅಭಿವೃದ್ಧಿ ಮಾಡುವ ​ಘೋಷಣೆ

Last Updated : Jan 9, 2024, 9:28 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.