Christmas Celebration In Space: ಕೆಲ ತಿಂಗಳುಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್) ದಲ್ಲಿರುವ ಸುನೀತಾ ಅವರ ಆರೋಗ್ಯದ ಬಗ್ಗೆ ಜನರು ತುಂಬಾ ಚಿಂತಿತರಾಗಿದ್ದರು. ಆದರೆ, ಸುನೀತಾ ವಿಲಿಯಮ್ಸ್ ತುಂಬ ಉತ್ಸಾಹದಲ್ಲಿ ಕಾಣಿಸಿಕೊಂಡಿದ್ದು, ಇದೀಗ ತಮ್ಮ ಸ್ನೇಹಿತರೊಂದಿಗೆ ಕ್ರಿಸ್ಮಸ್ ಆಚರಣೆಯ ತಯಾರಿಯಲ್ಲಿ ನಿರತರಾಗಿದ್ದಾರೆ.
ನಾಸಾದ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಕೆಲ ತಿಂಗಳುಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ದಲ್ಲಿರುವ ಸುನೀತಾ ಅವರ ಆರೋಗ್ಯದ ಕ್ಷೇಮವಾಗಿದೆ ಎಂದು ಹೇಳಬಹುದು. ಇದೀಗ ಸುನಿತಾ ವಿಲಿಯಮ್ಸ್ ತುಂಬ ಉತ್ಸಾಹದಲ್ಲಿ ಕಾಣಿಸಿಕೊಂಡಿದ್ದು, ಕ್ರಿಸ್‌ಮಸ್‌ಗಾಗಿ ಭರ್ಜರಿ ತಯಾರಿಯಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಕ್ಯಾಪ್ಸುಲ್ ಮೂಲಕ ಅಗತ್ಯ ವಸ್ತುಗಳು ಮತ್ತು ವಿಶೇಷ ಉಡುಗೊರೆಗಳನ್ನು ನಿಲ್ದಾಣಕ್ಕೆ ತಲುಪಿಸಲಾಗಿರುವುದು ಗಮನಾರ್ಹ.
Another day, another sleigh ⛄️❄️@NASA_Astronauts Don Pettit and Suni Williams pose for a fun holiday season portrait while speaking on a ham radio inside the @Space_Station's Columbus laboratory module. pic.twitter.com/C1PtjkUk7P
— NASA's Johnson Space Center (@NASA_Johnson) December 16, 2024
ಕ್ರಿಸ್ಮಸ್ ಹಬ್ಬದ ತಯಾರಿಯಲ್ಲಿರುವ ಸುನೀತಾ ವಿಲಿಯಮ್ಸ್ ಅವರ ಫೋಟೋವನ್ನು ನಾಸಾ ತನ್ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಅದರಲ್ಲಿ ಸುನಿತಾ ಅವರು ಸಾಂಟಾ ಕ್ಯಾಪ್ ಧರಿಸಿ ಮಿಂಚಿದ್ದಾರೆ.
ಇನ್ನೊಂದು ದಿನ, ಮತ್ತೊಂದು ಸ್ಲೆಜ್: ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಐಎಸ್ಎಸ್ನ ಕೊಲಂಬಸ್ ಮಾಡ್ಯೂಲ್‌ನಲ್ಲಿ ಹ್ಯಾಮ್ ರೇಡಿಯೊದಲ್ಲಿ ಮಾತನಾಡಿ,. ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಅನ್ನು ವಿಶೇಷವಾಗಿಸಲು, ನಮ್ಮ ತಂಡವು ಭೂಮಿಯಿಂದ ಕಳುಹಿಸಲಾದ ಆಹಾರವನ್ನು ಸೇವಿಸುವ ಮೂಲಕ ಎಂಜಾಯ್ ಮಾಡುತ್ತಿದ್ದೇವೆ ಎಂದು ಹೇಳಿದರು.
ಸುನೀತಾ ವಿಲಿಯಮ್ಸ್ ಮತ್ತು ಅವರ ಪಾಲುದಾರ ಬುಚ್ ವಿಲ್ಮೋರ್ ಕಳೆದ ಆರು ತಿಂಗಳಿನಿಂದ ISS ನಲ್ಲಿ ಸಿಲುಕಿಕೊಂಡಿರುವ ವಿಷಯ ಎಲ್ಲರಿಗೂ ತಿಳಿದಿದೆ. ಈ ಗಗನಯಾತ್ರಿಗಳು ಫೆಬ್ರವರಿಯಲ್ಲಿ ಭೂಮಿಗೆ ಮರಳುವ ಸಾಧ್ಯತೆಯಿದೆ. ಅವರ ಕಾರ್ಯಾಚರಣೆ ಜೂನ್‌ನಲ್ಲಿ ಎಂಟು ದಿನಗಳವರೆಗೆ ಮಾತ್ರ ನಡೆಯಬೇಕಾಗಿದ್ದರೂ, ತಾಂತ್ರಿಕ ದೋಷದಿಂದಾಗಿ ಅವರ ವಾಪಸಾತಿ ವಿಳಂಬವಾಯಿತು. ಕಳೆದ ತಿಂಗಳು, ಸುನೀತಾ ಸಂದರ್ಶನವೊಂದರಲ್ಲಿ ನನ್ನ ಬಳಿ ಸಾಕಷ್ಟು ಆಹಾರ ಪದಾರ್ಥಗಳಿವೆ ಎಂದು ಹೇಳಿದ್ದರು.
ಇತ್ತೀಚೆಗೆ ಅವರ ಮುಖವು ಸ್ವಲ್ಪ ತೆಳುವಾಗಿ ಕಾಣುವ ಅವರ ಫೋಟೋ ವೈರಲ್ ಆಗಿತ್ತು. ಈ ಚಿತ್ರವನ್ನು ನೋಡಿದ ನಂತರ ಜನರು ತುಂಬಾ ಚಿಂತಿತರಾಗಿದ್ದರು. ಅವರ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಉಂಟುಮಾಡಿತ್ತು. ಕಾರ್ಯಾಚರಣೆಯ ವಿಸ್ತರಣೆಯಿಂದಾಗಿ ಅವರು ಆಹಾರ ಮತ್ತು ನೀರು ಪಡೆಯಲು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬ ವದಂತಿಗಳು ಹರಡಲು ಪ್ರಾರಂಭಿಸಿದವು. ಆದರೆ, ಸುನೀತಾ ಈ ಎಲ್ಲ ಸಂಗತಿಗಳನ್ನು ಖಂಡಿಸಿದ್ದರು. ಶೂನ್ಯ ಗುರುತ್ವಾಕರ್ಷಣೆಯಲ್ಲಿ ತೂಕದ ಪರಿವರ್ತನೆಯಿಂದ ನಾನು ಈ ರೀತಿ ಕಾಣುತ್ತಿದ್ದೇನೆ ಎಂದು ಹೇಳಿದರು. ಭೂಮಿಯ ಮೇಲೆ ಅವರ ಆರೋಗ್ಯದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದರೂ ಸುನೀತಾ ಬಾಹ್ಯಾಕಾಶದಲ್ಲಿ ಸಾಂಟಾ ಆಗಿ ತಮ್ಮ ತಂಡದೊಂದಿಗೆ ಸಂತೋಷವಾಗಿರುವುದು ಗಮನಾರ್ಹ.