ETV Bharat / state

ವಿಲ್ ನೋಂದಣಿ ಕಾಯಿದೆಗಳಿಗೆ ಅಗತ್ಯ ತಿದ್ದುಪಡಿ ತನ್ನಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ - HIGH COURT

ವಿಲ್ (ಉಯಿಲು)​ ನೋಂದಣಿ ಮಾಡಿಸುವ ಸಂಬಂಧ ಇರುವ ಕಾಯಿದೆಗಳಿಗೆ ಅಗತ್ಯ ತಿದ್ದುಪಡಿ ತರುವಂತೆ ಹೈಕೋರ್ಟ್​ ಸೂಚಿಸಿದೆ.

high court
ಹೈಕೋರ್ಟ್ (ETV Bharat)
author img

By ETV Bharat Karnataka Team

Published : Dec 18, 2024, 6:57 AM IST

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಉಯಿಲು (ವಿಲ್) ಉಲ್ಲಂಘನೆ ಪ್ರಕರಣಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್​​, ಅಕ್ರಮ ನಿಯಂತ್ರಿಸಲು ಉಯಿಲು ಮಾಡುವ ಸಂದರ್ಭದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ನೋಂದಣಿ ಮಾಡಿಸುವ ಕುರಿತು ಕಾಯಿದೆಗಳಿಗೆ ಅಗತ್ಯ ತಿದ್ದುಪಡಿ ತರಬೇಕು ಎಂದು ಸೂಚನೆ ನೀಡಿದೆ.

ಬಳ್ಳಾರಿ ಜಿಲ್ಲೆಯ ಕುಡಿತಿನಿ ಗ್ರಾಮದ ಕುಟುಂಬವೊಂದರ ವಿಲ್ ವ್ಯಾಜ್ಯದ ವಿಚಾರಣೆಯನ್ನು ಧಾರವಾಡ ಪೀಠದಲ್ಲಿ ನಡೆಸಿದ ನ್ಯಾ.ಅನಂತರಾಮ ಹೆಗಡೆ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೇ, ವಿಲ್ ಮಾಡುವವರು ಸಾಕ್ಷಿಗಳ ಹೇಳಿಕೆ ಸೇರಿ ಇಡೀ ಉಯಿಲು ನೋಂದಣಿ ಪ್ರಕ್ರಿಯೆಯನ್ನು ವಿಡಿಯೋಗ್ರಫಿ ಮಾಡಬೇಕು. ಅಲ್ಲದೆ, ವಿಲ್ ದಾಖಲು ಪ್ರಕ್ರಿಯೆಯು ಸಂಪೂರ್ಣವಾಗಿ ಬದಲಾವಣೆಯಾಗಬೇಕು. ಆ ನಿಟ್ಟಿನಲ್ಲಿಸರ್ಕಾರ ಕಾಯಿದೆಗಳಿಗೆ ಸೂಕ್ತ ತಿದ್ದುಪಡಿ ಮಾಡಬೇಕು ಎಂದು ಸೂಚನೆ ನೀಡಿತು.

ವಿಲ್‌ಗಳ ಜಾರಿಗೆ ಸಂಬಂಧಿಸಿದಂತೆ ವ್ಯಾಜ್ಯಗಳು ಏರ್ಪಟ್ಟಾಗ ಉಯಿಲು ಸರಿ ಇದೆ, ಇಲ್ಲ ಎಂಬುದನ್ನು ಸಾಬೀತು ಮಾಡಲು ವಿಲ್ ಮಾಡಿದವರು ಬದುಕಿರುವುದಿಲ್ಲ. ಹಾಗಾಗಿ, ವಿಲ್ ಜಾರಿ ಸಂದರ್ಭದಲ್ಲಿ ಅದರ ನೈಜತೆ ಸಾಬೀತುಪಡಿಸುವಾಗ ಯಾವುದೇ ಗೊಂದಲಗಳಿಲ್ಲ, ನಂಬಲರ್ಹವಾಗಿದೆ ಮತ್ತು ಕ್ಲಿಂಚಿಂಗ್ ದಾಖಲೆ ಇವೆ ಎಂಬುದನ್ನು ದೃಢಪಡಿಸಲು ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾಗಿದೆ ಎಂದು ಪೀಠ ಹೇಳಿತು.

ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಿ: ಅಲ್ಲದೇ, ಪರೀಕ್ಷಕನ (ಟೆಸ್ಟರ್) ಕೊನೆಯ ಆಸೆ ಒಳಗೊಂಡಿರುವ ಉಯಿಲು ಅವನ ಇಚ್ಛೆಯಂತೆ ಉಳಿಯಬೇಕು ಮತ್ತು ಸಾಕ್ಷ್ಯಾಧಾರದ ಸಂಕೀರ್ಣ ಕಾರ್ಯವಿಧಾನದಲ್ಲಿ ಕಳೆದು ಹೋಗಬಾರದು. ಅಲ್ಲಿ ಪರೀಕ್ಷಕನಿಗೆ ಧ್ವನಿಯಿಲ್ಲದಿರುವಾಗ ಮತ್ತು ವಿಲ್‌ನ ಪುರಾವೆಯು ಸಾಕ್ಷಿಗಳು ಅಥವಾ ಕಾನೂನಿನಡಿ ಗುರುತಿಸಲ್ಪಟ್ಟ ಇತರ ಸಾಕ್ಷಿಗಳ ದೃಢೀಕರಣವನ್ನು ಅವಲಂಬಿಸಿರುತ್ತದೆ. ಹಾಗಾಗಿ, ನ್ಯಾಯಾಲಯವು ಪರೀಕ್ಷಕರು ಮತ್ತು ದೃಢೀಕರಿಸುವ ಸಾಕ್ಷಿಗಳು ನ್ಯಾಯಾಲಯದಲ್ಲಿ ನೀಡುವ ಹೇಳಿಕೆಯನ್ನು ದಾಖಲಿಸಲು (ವಿಡಿಯೋಗ್ರಫಿ ಮೂಲಕ) ಕಾನೂನಿನಲ್ಲಿಸೂಕ್ತವಾದ ನಿಬಂಧನೆಯನ್ನು ಸೇರ್ಪಡೆ ಮಾಡುವಂತೆ ಸೂಚಿಸುತ್ತದೆ. ಇದರಿಂದ ವಿಲ್ ಮಾಡುವುದು ಸುಗಮವಾಗುವುದಲ್ಲದೇ, ಅದರ ಗೌಪ್ಯತೆ ಖಚಿತಪಡಿಸಿಕೊಳ್ಳಲು ಅಗತ್ಯವಾದ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಇದರಿಂದ ವಿಲ್‌ಗಳ ಕುರಿತಂತೆ ಎದುರಾಗುವ ವ್ಯಾಜ್ಯ ನಿರ್ವಹಿಸಲು ನ್ಯಾಯಾಲಯಗಳಿಗೆ ಸಹಾಯಕವಾಗುತ್ತದೆ ಎಂದು ಪೀಠ ತಿಳಿಸಿತು.

ಪ್ರಕರಣದ ಹಿನ್ನೆಲೆ: ಬಳ್ಳಾರಿ ಜಿಲ್ಲೆಯ ಕುಡಿತಿನಿ ಗ್ರಾಮದ ಕರಿಬಸಪ್ಪ ಅಲಿಯಾಸ್ ವಡ್ಡಟ್ಟಿ ಬಸಪ್ಪ ತನಗೆ 85 ವರ್ಷವಾಗಿದ್ದಾಗ 2005ರ ಮೇ 9ರಂದು ತಮ್ಮ ಆಸ್ತಿಯ ಮೂಲ ವಿಲ್ (ಉಯಿಲು) ಬರೆಸಿದ್ದರು. ಅವರು 2009ರಲ್ಲಿ ನಿಧನರಾಗಿದ್ದರು. ವಿಲ್ ಜಾರಿ ವಿಚಾರ ಬಂದಾಗ ಸಾಕ್ಷಿದಾರರೊಬ್ಬರು ತನ್ನ ಸಮಕ್ಷಮದಲ್ಲೇ ವಿಲ್ ಮಾಡಲಾಗಿತ್ತು. ಅದಕ್ಕೆ ತಾನೇ ಸಾಕ್ಷಿ ಎಂದು ಹೇಳಿದ್ದರು. ಆದರೆ, ವಿಲ್ ಪರೀಕ್ಷಕರು, ವಡಟ್ಟಿ ಬಸಪ್ಪ ವಿಲ್ ಮೇಲೆ ಮಾಡಿದ್ದ ಸಹಿಯನ್ನೂ ಪರಿಶೀಲಿಸಿ, ಸಹಿ ಅವರದ್ದೇ ಎಂದು ಹೇಳಿದ್ದರು. ಆದರೆ ಮತ್ತೊಬ್ಬ ಸಾಕ್ಷಿ ತನಗೆ ವಿಲ್ ಬಗ್ಗೆ ಏನೂ ಗೊತ್ತಿಲ್ಲ ಎಂದಿದ್ದರು. ಹಾಗಾಗಿ, ವಿಲ್‌ನಲ್ಲಿ ಬರೆದಿದ್ದಂತೆ ಆಸ್ತಿ ಹಂಚಿಕೆ ಸಂಬಂಧ ವ್ಯಾಜ್ಯ ಏರ್ಪಟ್ಟಾಗ ಅರ್ಜಿದಾರರು ಅಧೀನ ನ್ಯಾಯಾಲಯದ ಮೊರೆ ಹೋಗಿದ್ದರು. ಜಿಲ್ಲಾ ನ್ಯಾಯಾಲಯ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಚಾಮುಂಡೇಶ್ವರಿ ಸೀರೆ ಮಾರಾಟ ಕ್ಷಮಿಸಲಾರದ ಕೃತ್ಯ ಎಂದ ಹೈಕೋರ್ಟ್: ಸ್ನೇಹಮಯಿ ಕೃಷ್ಣ ವಿರುದ್ಧ ತನಿಖೆಗೆ ತಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.