ಬೀಜಿಂಗ್ (ಚೀನಾ): ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಕಾಂಗ್ರೆಸ್‌ನ ಸಮಾರೋಪ ಸಮಾರಂಭದಲ್ಲಿ ಚೀನಾದ ಮಾಜಿ ಅಧ್ಯಕ್ಷ ಹು ಜಿಂಟಾವೊ ಅವರನ್ನು ಶನಿವಾರ ಬೀಜಿಂಗ್‌ನ 'ಗ್ರೇಟ್ ಹಾಲ್ ಆಫ್ ದಿ ಪೀಪಲ್' ನಿಂದ ಅನಿರೀಕ್ಷಿತವಾಗಿ ಹೊರಕ್ಕೆ ಕರೆದೊಯ್ಯಲಾಯಿತು.
ಐದು ವರ್ಷಗಳಿಗೊಮ್ಮೆ ನಡೆಯುವ ಕಾಂಗ್ರೆಸ್‌ನ ಸಮಾರೋಪ ಸಮಾರಂಭದಲ್ಲಿ 79 ವರ್ಷದ ಮಾಜಿ ಅಧ್ಯಕ್ಷ ಹೂ ಜಿಂಟಾವೊ ಅವರನ್ನು ಚೀನಾ ಕಮ್ಯುನಿಸ್ಟ್ ಪಾರ್ಟಿ (CCP) ಏಜೆಂಟ್‌ಗಳು ನಿಗೂಢವಾಗಿ ಸಭೆಯಿಂದ ಹೊರಹಾಕಿದರು.
ಚೀನಾದ ನಾಯಕನನ್ನು ಏಕೆ ಸಭೆಯಿಂದ ಹೊರ ಹಾಕಲಾಯಿತು ಎಂಬುದಕ್ಕೆ ಕಾರಣ ತಿಳಿದುಬಂದಿಲ್ಲ. ಈ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಆದಾಗ್ಯೂ, ಇಂತಹ ಘಟನೆಗಳ ಬಗ್ಗೆ ಚೀನಾ ಮಾಹಿತಿ ಬಹಿರಂಗಪಡಿಸುವುದು ಅಪರೂಪ ಎನ್ನಲಾಗಿದೆ.
ಇದನ್ನೂ ಓದಿ: ಚೀನಾದಲ್ಲಿ ಅದ್ಧೂರಿ ಸಾಂಪ್ರದಾಯಿಕ ಹೊಸ ವರ್ಷಾಚರಣೆ.. ಜನತೆಗೆ ಶುಭಕೋರಿದ ಕ್ಸಿ ಜಿನ್‌ಪಿಂಗ್
ಹು ಜಿಂಟಾವೊ ಅವರನ್ನು ಏಜೆಂಟ್‌ಗಳು ಹೊರಗೆ ಕರೆದೊಯ್ಯಲು ಬಂದಾಗ ಮಾಜಿ ನಾಯಕ, ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ನತ್ತ ನೋಡಿದರು. ಆದ್ರೆ, ಕ್ಸಿ ಜಿನ್‌ಪಿಂಗ್ ಯಾವುದೇ ಸಂಭಾಷಣೆ ನಡೆಸದೇ, ಪ್ರತಿಕ್ರಿಯೆ ನೀಡದ ದೃಶ್ಯ ಕ್ಯಾಮರಾಗಳಲ್ಲಿ ಸೆರೆಯಾಗಿದೆ.