ETV Bharat / international

ಫ್ಲೋರಿಡಾ ಕೌಂಟಿಯಲ್ಲಿ ಇನ್ಮುಂದೆ ನವೆಂಬರ್​ ಅನ್ನು ಹಿಂದೂ ಪಾರಂಪರಿಕ ಮಾಸವಾಗಿ ಆಚರಣೆ

author img

By ETV Bharat Karnataka Team

Published : Sep 12, 2023, 11:36 AM IST

ಹಿಂದೂ ಧರ್ಮದ ಕೊಡುಗೆ, ಶ್ರೀಮಂತ್ರಿಕೆ ಪರಿಗಣಿಸಿ ಈ ನಿರ್ಧಾರವನ್ನು ನಡೆಸಲಾಗಿದೆ. ಅಲ್ಲದೆ, ಈ ಮಾಸ ದೀಪಾವಳಿ ಹಬ್ಬ ಬರುವ ಹಿನ್ನಲೆ ಇದಕ್ಕೆ ಹೆಚ್ಚಿನ ಮನ್ನಣೆ ನೀಡಲಾಗಿದೆ.

Florida County Ready to Celebrate November is the Hindu Heritage Month

ನ್ಯೂಯಾರ್ಕ್​: ಹಿಂದೂ ಧರ್ಮ ಜಗತ್ತಿನ ದೊಡ್ಡ ಮತ್ತು ಪುರಾತನ ಧರ್ಮವಾಗಿದ್ದು, ಸಮುದಾಯಕ್ಕೆ ಇದರ ಕೊಡುಗೆಯನ್ನು ಗುರುತಿಸಿ ಅಮೆರಿಕದ ಫ್ಲೋರಿಡಾ ರಾಜ್ಯ ನವೆಂಬರ್​ ಅನ್ನು ಹೊಂದು ಪರಂಪರೆಯ ಮಾಸ ಎಂದು ಗುರುತಿಸಿದೆ.

ಬ್ರೋವರ್ಡ್ ಕೌಂಟಿಯು ಹಿಂದೂ ಪರಂಪರೆ, ಸಂಸ್ಕೃತಿ, ಮೌಲ್ಯಗಳು ಮತ್ತು ಸಂಪ್ರದಾಯಗಳನ್ನು ಸ್ಮರಿಸಲು ಜಾರ್ಜಿಯಾ, ಟೆಕ್ಸಾಸ್, ಓಹಿಯೋ, ಮ್ಯಾಸಚೂಸೆಟ್ಸ್, ಮಿನ್ನೇಸೋಟ, ವರ್ಜೀನಿಯಾ ಸೇರಿದಂತೆ ಹಲವು ರಾಜ್ಯಗಳ ಪಟ್ಟಿಯನ್ನು ಇದು ಸೇರಿದೆ.

ನವೆಂಬರ್ ದೀಪಗಳ ಹಬ್ಬವಾದ ದೀಪಾವಳಿಯನ್ನು ಆಚರಿಸು ಮೂಲಕ ​ ಹಿಂದೂ ಧರ್ಮದಲ್ಲಿ ಇದು ಮಹತ್ವದ ಮಾಸವಾಗಿದೆ. ಈ ವರ್ಷ ನವೆಂಬರ್​ 12ರಂದು ದೀಪಾವಳಿ ಆಚರಿಸಲಾಗುತ್ತಿದೆ.

ಅಮೆರಿಕದ ಮಿಲಿಯಾಂತರ ಜನರು ಈ ಹಬ್ಬವನ್ನು ಪ್ರತಿ ವರ್ಷ ಆಚರಿಸುತ್ತಿದ್ದು, ಇದರಲ್ಲಿ ಈ ಕೌಂಟಿಗಳು ಸೇರಿದೆ. ಅಮೆರಿಕದಲ್ಲಿ ನವೆಂಬರ್​ ತಿಂಗಳು ದೀಪಾವಳಿ ಮಾಸ ಎಂಬ ನಿರ್ಣಯವನ್ನು ನಡೆಸಲಾಗಿದೆ. ಈ ದಿನವೂ ಶಾಂತಿ ಮತ್ತು ಸಂಭ್ರಮದ ಸಮಯವಾಗಿದ್ದು, ಎಲ್ಲಾ ವಯೋಮಾನದವರ ಹೊಸ ಆರಂಭದ ದಿನ ಅದರಲ್ಲೂ ಮಕ್ಕಳ ದೀಪವನ್ನು ಹಚ್ಚಿ ಪಟಾಕಿ ಹೊಡೆದು, ಸಿಹಿ ಹಂಚಿ ಸಂಭ್ರಮಿಸುವ ದಿನವಾಗಿದೆ.

ಫ್ಲೋರಿಡಾದ ಈ ನಡೆಯನ್ನು ಸ್ವಾಗತಿಸಿರುವ ಅಮೆರಿಕದ ಹಿಂದೂ ವಕೀಲರ ಗುಂಪು, ಹಿಂದೂ ಧರ್ಮ ವಿಶಾಲ ಮತ್ತು ಪುರಾತನ ಧರ್ಮ ಎಂಬುದನ್ನು ಈ ನಿರ್ಣಯವೇ ತಿಳಿಸುತ್ತದೆ. ವಿವಿಧ ಸಂಪ್ರದಾಯಗಳ ಜೊತೆಗೆ ಒಟ್ಟಾರೆಯಾಗಿ ಸನಾತನ ಧರ್ಮ ಎಂದು ಕರೆಯಲಾಗುತ್ತದೆ. ಸ್ವೀಕಾರ, ಪರಸ್ಪರ ಗೌರವ, ಸ್ವಾತಂತ್ರ್ಯ ಮತ್ತು ಶಾಂತಿಯ ಪ್ರಮುಖ ಮೌಲ್ಯಗಳನ್ನು ಹಿಂದೂ ಧರ್ಮ ಒಳಗೊಂಡಿದೆ ಎಂದರು.

ಈ ನಿರ್ಣಯವೂ ಯೋಗ ಆಯುರ್ವೇದ, ಧ್ಯಾನ, ಆಹಾರ, ಸಂಗೀತ, ಕಲೆಗಳು ಇತ್ಯಾದಿಗಳಿಗೆ ಸಮುದಾಯದ ಕೊಡುಗೆಗಳನ್ನು ಅಂಗೀಕರಿಸಿದೆ. ಸಾಂಸ್ಕೃತಿಕತೆಯನ್ನು ಶ್ರೀಮಂತತಗೊಳಿಸಿದೆ. ಅಮೆರಿಕದ ಸಮುದಾಯಗಳು ಹಿಂದೂ ಧರ್ಮವನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳುತ್ತಿದೆ.

ಹಿಂದೂ ತತ್ವ ವೇದಾಂತ ಮತ್ತು ಸ್ವಾರ್ಥರಹಿತ ಸೇವೆ, ಅಹಿಂಸೆಯಂತಹ ಹಲವು ಅಂಶಗಳು ಅಮೆರಿಕ ಬುದ್ದಿಜೀವಿ ಮತ್ತು ಮಾರ್ಟಿನ್​ ಲೂಥರ್​ ಕಿಂಗ್​, ಜಾನ್​ ಡಿ, ರಾಕ್​ಫೆಲ್ಲರ್​​, ಹೆನ್ರಿ ಡೇವಿಡ್​ ಥೊರೆಹು ಸೇರಿದಂತೆ ನಾಯಕರನ್ನು ಪ್ರೇರೇಪಿಸುತ್ತಿದೆ. ಫ್ಲೋರಿಡಾದಲ್ಲಿ ವಾಸಿಸುತ್ತಿರುವ ಏಷ್ಯಾನ್ ಜನರಲ್ಲಿ ಭಾರತೀಯರು ಹೆಚ್ಚಿದ್ದಾರೆ. ಇತ್ತೀಚಿನ ಅಂದಾಜಿನ ಪ್ರಕಾರ ಇಲ್ಲಿ 1,53,968 ಭಾರತೀಯರಿದ್ದಾರೆ.

ಇತ್ತೀಚೆಗೆ ಜಾರ್ಜಿಯಾ ಗರ್ವನರ್​ ಬ್ರಿಯನ್​ ಕೆಂಪ್​ ಅಕ್ಟೋಬರ್​ ಅನ್ನು ರಾಜ್ಯದಲ್ಲಿ ಹಿಂದೂ ಪರಂಪರೆ ಮಾಸವಾಗಿ ಘೋಷಣೆ ​ ಮಾಡಿದ್ದರು. ಅಷ್ಟೇ ಅಲ್ಲದೇ, ಅಮೆರಿಕದಲ್ಲಿ ದೀಪಾವಳಿಯ ದಿನದಂದು ಸಾರ್ವತ್ರಿಕ ರಜೆಯನ್ನು ಕೂಡ ಘೋಷಣೆ ಮಾಡಲಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: ಸೆ.3 ರಂದು 'ಸನಾತನ ಧರ್ಮ ದಿನ' ಆಚರಣೆ; ಭಾರತದಲ್ಲಿ ಅಲ್ಲ, ಇದು ಅಮೆರಿಕದಲ್ಲಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.