ETV Bharat / international

ಅಮೆರಿಕದಲ್ಲಿ ತಾಂತ್ರಿಕ ದೋಷದಿಂದ 5,400 ವಿಮಾನ ಹಾರಾಟದಲ್ಲಿ ವ್ಯತ್ಯಯ: ವ್ಯವಸ್ಥೆ ವಿರುದ್ಧ ಹರಿಹಾಯ್ದ ಪ್ರಯಾಣಿಕರು - ನೆಟ್ಟಿಗರಿಂದ ಟೀಕೆ

ಅಮೆರಿಕದ ವೈಮಾನಿಕ ಹಾರಾಟದಲ್ಲಿ ವ್ಯತ್ಯಯ - 5,400ಕ್ಕೂ ಹೆಚ್ಚಿನ ವಿಮಾನ ಹಾರಾಟ ಸ್ಥಗಿತ - ನೆಟ್ಟಿಗರಿಂದ ವ್ಯವಸ್ಥೆಯ ಬಗ್ಗೆ ತೀವ್ರ ಟೀಕೆ.

flights across us grounded after massive system failure
ಅಮೆರಿಕಾದಲ್ಲಿ ತಾಂತ್ರಿಕ ದೋಷದಿಂದ ವಿಮಾನ ಹಾರಾಟದಲ್ಲಿ ವ್ಯತ್ಯಯ
author img

By

Published : Jan 11, 2023, 8:10 PM IST

Updated : Jan 11, 2023, 11:03 PM IST

ನ್ಯೂಯಾರ್ಕ್​: ಅಮೆರಿಕದಲ್ಲಿ ವಿಮಾನಯಾನದಲ್ಲಿ ವ್ಯತ್ಯಯ ಉಂಟಾಗಿದೆ. ತಾಂತ್ರಕ ದೋಷದ ಹಿನ್ನೆಲೆಯಲ್ಲಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಫೆಡರಲ್​ ಏವಿಯೇಷನ್ ಆಡ್ಮಿನಿಸ್ಟ್ರೇಷನ್​ನ ಕಂಪ್ಯೂಟರ್​ಗಳಲ್ಲಿ ಕಂಡು ಬಂದ ದೋಷದಿಂದಾಗಿ ಈ ಸಮಸ್ಯೆ ಉದ್ಭವಿಸಿದೆ ಎನ್ನಲಾಗಿದೆ. ಇಂದು ಮುಂಜಾನೆ 5:13 ರಿಂದ ಈ ಸಮಸ್ಯೆ ಎದುರಾಗಿದ್ದು, ಈ ಸಮಯದ ನಂತರ ನಾಗರಿಕ ವಿಮಾನಯಾನ ತಂತ್ರಾಂಶದಲ್ಲಿ ಯಾವುದೇ ಅಪ್ಡೇಟ್​ಗಳು ಆಗಿಲ್ಲ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಫೆಡರಲ್​ ಏವಿಯೇಷನ್ ಆಡ್ಮಿನಿಸ್ಟ್ರೇಷನ್​ನ (ಎಫ್​ಎಎ) ದೋಷದಿಂದಾಗಿ ಅಮೆರಿಕದಾದ್ಯಂತ ಎಲ್ಲ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಎಫ್‌ಎಎನ ತಾಂತ್ರಿಕ ದೋಷದ ಹಿನ್ನೆಲೆ ಪೈಲಟ್‌ಗಳು ವಿಮಾನ ನಿಲ್ದಾಣದ ಸಂಪರ್ಕ ಸಮಸ್ಯೆ ಆಗಿದೆ. ಅಲ್ಲದೇ ವಿಮಾನ ನಿಲ್ದಾಣದ ಸೌಲಭ್ಯದ ಬಗ್ಗೆ ಮತ್ತು ಕಾರ್ಯ ವಿಧಾನದ ಬಗ್ಗೆ ಯಾವುದೇ ಮಾಹಿತಿ ಮುಂಜಾನೆಯಿಂದ ಲಭ್ಯವಾಗದ ಕಾರಣ ವಿಮಾನಯಾನ ಸ್ಥಗಿತಗೊಂಡಿದೆ.

  • The FAA is working to restore its Notice to Air Missions System. We are performing final validation checks and reloading the system now.

    Operations across the National Airspace System are affected.

    We will provide frequent updates as we make progress.

    — The FAA ✈️ (@FAANews) January 11, 2023 " class="align-text-top noRightClick twitterSection" data=" ">

ಸೈಬರ್ ದಾಳಿಗೆ ಯಾವುದೇ ಪುರಾವೆಗಳಿಲ್ಲ ಎಂದು ವೈಟ್ ಹೌಸ್: ಶ್ವೇತಭವನ ನೀಡಿರುವ ಮಾಹಿತಿಯಂತೆ, ಸೈಬರ್ ದಾಳಿಯ ಯಾವುದೇ ಪುರಾವೆಗಳಿಲ್ಲ. ಅಧ್ಯಕ್ಷ ಜೋ ಬೈಡನ್​ ಸಾರಿಗೆ ಕಾರ್ಯದರ್ಶಿ ಪೀಟ್ ಬುಟ್ಟಿಗೀಗ್ ಜೊತೆ ಸಭೆ ನಡೆಸಿದ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಸಾರಿಗೆ ಕಾರ್ಯದರ್ಶಿ ಅವರಿಗೂ ಸಮಸ್ಯೆಯ ಬಗ್ಗೆ ಸಂಪೂರ್ಣ ಮಾಹಿತಿ ದೊರೆತಿಲ್ಲ. ಸುಮಾರು 5,400ಕ್ಕೂ ಹೆಚ್ಚಿನ ವಿಮಾನ ಹಾರಾಟ ಮಾಡಿಲ್ಲ ಎಂಬ ಮಾಹಿತಿ ಇದೆ. ಸಾರಿಗೆ ಕಾರ್ಯದರ್ಶಿ ಎಫ್​ಎಎ ಸಂಪರ್ಕದಲ್ಲಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ನನಗೆ ಮಾಹಿತಿ ನೀಡಲು ತಿಳಿಸಿದ್ದೇನೆ ಎಂದು ತಿಳಿಸಿದ್ದಾರೆ.

5,400ಕ್ಕೂ ಹೆಚ್ಚಿನ ವಿಮಾನಯಾನದಲ್ಲಿ ವ್ಯತ್ಯಯ: ಫ್ಲೈಟ್​ ಅವರ್​ ಫ್ಲೈಟ್​ ಟ್ರ್ಯಾಕಿಂಗ್​ ವೆಬ್​ನ ಪ್ರಕಾರ, ಅಮೆರಿಕಕ್ಕೆ ಬರಬೇಕಿದ್ದ ಮತ್ತು ಅಮೆರಿಕಾದಿಂದ ಹೊರಡಬೇಕಿದ್ದ 5,400 ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿದೆ. ಫೆಡರಲ್​ ಏವಿಯೇಷನ್ ಆಡ್ಮಿನಿಸ್ಟ್ರೇಷನ್ ತನ್ನ ನೊಟೀಸ್ ಟು ಏರ್ ಮಿಷನ್ಸ್ ಸಿಸ್ಟಮ್ (NOTAM) ಪುನರ್​ ವ್ಯವಸ್ಥೆಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಟ್ವೀಟ್​​ ಮಾಡಿ ತಿಳಿಸಿದೆ. ರಾಷ್ಟ್ರೀಯ ವೈಮಾನಿಯ ಸಂಚಾರ ಸಂಪೂರ್ಣವಾಗಿ ಇದರಿಂದ ಹದಗೆಟ್ಟಿದೆ. ಎಫ್​ಎಎ ವ್ಯವಸ್ಥೆಯನ್ನು ಮರು ಲೋಡ್​ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಏರ್​ ಮಿಷನ್​ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮರುಸ್ಥಾಪಿಸಬೇಕಾದ ಹಿನ್ನೆಲೆ ವಿಮಾನ ಮತ್ತು ಸುರಕ್ಷತಾ ಮಾಹಿತಿಗಾಗಿ ಏಜೆನ್ಸಿಯ ಅನುಮತಿ ಇಲ್ಲದೇ 9 ಗಂಟೆಯ ವರೆಗೆ ದೇಶದಿಂದ ಯಾವುದೇ ವಿಮಾನ ಪ್ರಯಾಣ ಬೆಳೆಸುವಂತಿಲ್ಲ ಎಂದು ಎಫ್​ಎಎ ಆದೇಶಿಸಿದೆ.

  • A system wide #faa computer failure means all air travel is shut down nationwide. Waiting at LGA.

    — Walter Katz (@w_katz1) January 11, 2023 " class="align-text-top noRightClick twitterSection" data=" ">

ಫೆಡರಲ್​ ಏವಿಯೇಷನ್ ಆಡ್ಮಿನಿಸ್ಟ್ರೇಷನ್​ನ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೂ ವಿಮಾನ ಸಂಸ್ಥೆಗಳ ತಾಂತ್ರಿಕ ವ್ಯವಸ್ಥೆಯ ಸಹಾಯದಿಂದ ಲ್ಯಾಂಡಿಗ್​ ಮಾಡಲಾಗಿದೆ. ನೊಟೀಸ್ ಟು ಏರ್ ಮಿಷನ್ಸ್ ಸಿಸ್ಟಮ್ ನೊಂದಿಗೆ ಸಂಪರ್ಕದಲ್ಲಿದ್ದ ಖಾಸಗಿ ಸೈಟ್​ಗಳ ತೆಗೆದು ಹಾಕಿ ಮರು ಸ್ಥಾಪನೆ ಮಾಡುವುದಾಗಿ ಎಫ್​ಎಎ ತಿಳಿಸಿತ್ತು.

  • Gotta love when you book a 6 am flight trying to avoid travel delays, but due to a nationwide FAA system issue the flight is delayed anyway. Going to be a long day :)

    — Adele Burk (@BurkAdele) January 11, 2023 " class="align-text-top noRightClick twitterSection" data=" ">

ನೆಟ್ಟಿಗರಿಂದ ಟೀಕೆ : ಈ ನಡುವೆ ನೆಟ್ಟಿಗರು ಅಮೆರಿಕದ ಈ ಅತಂತ್ರ ಸ್ಥಿತಿಯ ಬಗ್ಗೆ ಟೀಕೆಗಳನ್ನು ಮಾಡುತ್ತಿದ್ದಾರೆ. ಅಲ್ಲದೇ ಸೈಬರ್​ ದಾಳಿಯ ಕುರಿತಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ. ರಷ್ಯಾ, ಚೀನಾದಿಂದ ಸೈಬರ್​ ದಾಳಿ ಇದಾಗಿದೆ ಎಂದು ಕೆಲವರು ಟ್ವೀಟ್​ನಲ್ಲಿ ಕಮೆಂಟ್​ ಮಾಡಿದ್ದಾರೆ. ಬಹುತೇಕರು ಚೀನಾದಿಂದ ಹ್ಯಾಕ್​ ಮಾಡಲಾಗಿದೆ ಎಂದು ಹೇಳಿದ್ದಾರೆ. ವ್ಯತ್ಯಯದಿಂದ ಸಮಸ್ಯೆಗೊಳಗಾದ ಪ್ರಯಾಣಿಕರು ವ್ಯವಸ್ಥೆಯನ್ನು ಟ್ವಿಟರ್​ನಲ್ಲಿ ಟೀಕಿಸಿದ್ದಾರೆ.

ಇಡೀ ದೇಶದ ವೈಮಾನಿಕ ಹಾರಾಟದಲ್ಲಿ ಸಮಸ್ಯೆ ಆಗಿರುವುದು ಆಡಳಿತ ವ್ಯವಸ್ಥೆಗೆ ನಾಚಿಕೆಯ ಸಂಗತಿಯಾಗಿದೆ ಎಂದು ಎಫ್​ಎಎಯನ್ನು ಕೆಲವರು ಹೇಳಿದರೆ 'ಎಫ್‌ಎಎ ಮತ್ತು ಏರ್‌ಲೈನ್ಸ್ ತಮ್ಮ ಆಪರೇಟಿಂಗ್ ಸಿಸ್ಟಂಗಳನ್ನು ಬದಲಾಯಿಸಬೇಕು. ಹಳೆಯ ತಂತ್ರಜ್ಞಾನವು ಹಾರುವ ಹೊಸ ಸಂಸ್ಕೃತಿಯೊಂದಿಗೆ ಕಾರ್ಯನಿರ್ವಹಿಸುವುದಿಲ್ಲ.' ಎಂದು ಕೆಲವರು ಹಾಸ್ಯಮಾಡಿದ್ದಾರೆ.

ಇದನ್ನೂ ಓದಿ: ಮಾಸ್ಕೋ-ಗೋವಾ ವಿಮಾನಕ್ಕೆ ಬಂದಿದ್ದು ಹುಸಿ ಬಾಂಬ್​ ಬೆದರಿಕೆ; ಪರಿಶೀಲನೆ ಬಳಿಕ ಹಾರಾಟ

Last Updated : Jan 11, 2023, 11:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.