ಜೆರುಸಲೆಂ/ನವದೆಹಲಿ : ಇಸ್ರೇಲ್ ಮತ್ತು ಹಮಾಸ್ ನಡುವೆ ಭೀಕರ ಯುದ್ಧ ಮುಂದುವರಿದಿದೆ. ಈ ಯುದ್ಧದಲ್ಲಿ ಹಲವು ದೇಶಗಳ ನಾಗರಿಕರು ಸಾವನ್ನಪ್ಪಿದ್ದಾರೆ. ಈ ನಡುವೆ ಭಾರತವು ಇಸ್ರೇಲ್‌ನಿಂದ ತನ್ನ ನಾಗರಿಕರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರಲು ಆಪರೇಷನ್ ಅಜಯ್ ಅನ್ನು ಪ್ರಾರಂಭಿಸಿದೆ. ಈ ಸರಣಿಯ ಭಾಗವಾಗಿ ಇಸ್ರೇಲ್‌ನಿಂದ 212 ಭಾರತೀಯ ನಾಗರಿಕರ ಮೊದಲ ಬ್ಯಾಚ್ ಇಂದು ಬೆಳಗ್ಗೆ AI1140 ಸಂಖ್ಯೆಯ ಮೊದಲ ಚಾರ್ಟರ್ ವಿಮಾನದ ಮೂಲಕ ನವದೆಹಲಿ ವಿಮಾನ ನಿಲ್ದಾಣವನ್ನು ಬಂದು ತಲುಪಿದೆ. ಈ ವಿಮಾನವು ಗುರುವಾರ ಬೆನ್ ಗುರಿಯಾನ್ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿತ್ತು.
-
#OperationAjay: First flight carrying 212 Indian nationals from Israel, lands at Delhi airport
— ANI (@ANI) October 13, 2023 " class="align-text-top noRightClick twitterSection" data="
Union Minister Rajiv Chandrashekhar at the airport to welcome them. pic.twitter.com/DqBNWJDByj
">#OperationAjay: First flight carrying 212 Indian nationals from Israel, lands at Delhi airport
— ANI (@ANI) October 13, 2023
Union Minister Rajiv Chandrashekhar at the airport to welcome them. pic.twitter.com/DqBNWJDByj#OperationAjay: First flight carrying 212 Indian nationals from Israel, lands at Delhi airport
— ANI (@ANI) October 13, 2023
Union Minister Rajiv Chandrashekhar at the airport to welcome them. pic.twitter.com/DqBNWJDByj
ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, "ಇಸ್ರೇಲ್‌ನಿಂದ ಭಾರತೀಯ ಪ್ರಜೆಗಳನ್ನು ಕರೆತರಲು ಅಗತ್ಯವಿದ್ದರೆ ವಾಯುಪಡೆಯನ್ನೂ ಬಳಸಿಕೊಳ್ಳಲಾಗುವುದು. ಸದ್ಯಕ್ಕೆ ಚಾರ್ಟರ್ ಫ್ಲೈಟ್‌ಗಳನ್ನು ಬಳಸಲಾಗುತ್ತಿದೆ, ಇಂದು ಬೆಳಗ್ಗೆ ಸುಮಾರು 212 ಜನರನ್ನು ವಾಪಸ್ ಕರೆತರಲಾಗಿದೆ. ಇಸ್ರೇಲ್‌ನಲ್ಲಿ ನೆಲೆಸಿರುವ ನಮ್ಮ ಭಾರತೀಯ ನಾಗರಿಕರು ಶೀಘ್ರದಲ್ಲಿ ರಾಯಭಾರ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ನಾವು ಮನವಿ ಮಾಡುತ್ತೇವೆ" ಎಂದು ತಿಳಿಸಿದ್ದಾರೆ.
ಎಕ್ಸ್ ಆ್ಯಪ್ನಲ್ಲಿ ಪೋಸ್ಟ್ ಮಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, "ಆಪರೇಷನ್ ಅಜಯ್ ಚಾಲನೆಯಲ್ಲಿದೆ. ವಿಮಾನದಲ್ಲಿದ್ದ 212 ನಾಗರಿಕರು ನವದೆಹಲಿಯ ಮಾರ್ಗದಲ್ಲಿದ್ದಾರೆ ಎಂದು ತಿಳಿಸಿದ್ದರು. ಹಾಗೆಯೇ, "212 ಭಾರತೀಯ ಪ್ರಜೆಗಳನ್ನು ಹೊತ್ತ ಆಪರೇಷನ್ ಅಜಯ್‌ನ ಮೊದಲ ವಿಮಾನವು ಟೆಲ್ ಅವೀವ್‌ನಿಂದ ದೆಹಲಿಗೆ ಹೊರಟಿದೆ. ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವಿಮಾನದಲ್ಲಿರುವ ಪ್ರತಿಯೊಬ್ಬರಿಗೂ ಸುರಕ್ಷಿತ ಪ್ರಯಾಣವನ್ನು ಬಯಸುತ್ತದೆ" ಎಂದು ಭಾರತೀಯ ಮಿಷನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿತ್ತು.
-
#WATCH | Operation Ajay: First flight carrying 212 Indian nationals from Israel, lands in Delhi pic.twitter.com/iwT9ugIREP
— ANI (@ANI) October 13, 2023 " class="align-text-top noRightClick twitterSection" data="
">#WATCH | Operation Ajay: First flight carrying 212 Indian nationals from Israel, lands in Delhi pic.twitter.com/iwT9ugIREP
— ANI (@ANI) October 13, 2023#WATCH | Operation Ajay: First flight carrying 212 Indian nationals from Israel, lands in Delhi pic.twitter.com/iwT9ugIREP
— ANI (@ANI) October 13, 2023
ಇಸ್ರೇಲಿನಿಂದ ಆಗಮಿಸಿದ ಪ್ರಯಾಣಿಕರಿಗೆ ಸ್ವಾಗತಕೋರಿದ ಸಚಿವ: ಈ ನಡುವೆ, ಇಂದು ನಸುಕಿನಲ್ಲೇ ನವದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತೀಯರನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸ್ವಾಗತಿಸಿದರು.
ಇಸ್ರೇಲ್‌ನಲ್ಲಿ ಸುಮಾರು 18 ಸಾವಿರ ಭಾರತೀಯರು: ಮಾಹಿತಿ ಪ್ರಕಾರ ಸುಮಾರು 18000 ಭಾರತೀಯರು ಇಸ್ರೇಲ್ನಲ್ಲಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈವರೆಗೆ ಯುದ್ಧದಿಂದ ಯಾವುದೇ ಭಾರತೀಯರು ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಗಾಯಗೊಂಡಿರುವ ಒಬ್ಬ ವ್ಯಕ್ತಿಯೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ, ಪ್ರಸ್ತುತ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದೆ.
ಇದನ್ನೂ ಓದಿ : ಹಮಾಸ್ ಉಗ್ರರಿಗೆ ಸೇರಿದ ನೂರಾರು ಖಾತೆಗಳನ್ನು ತೆಗೆದು ಹಾಕಿದ ಮೈಕ್ರೋಬ್ಲಾಗಿಂಗ್ ವೇದಿಕೆ 'X'
ಮಾಧ್ಯಮ ವರದಿಗಳ ಪ್ರಕಾರ, ಇಸ್ರೇಲ್‌ನಲ್ಲಿ ಇದುವರೆಗೆ 222 ಸೈನಿಕರು ಸೇರಿದಂತೆ 1300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲಿ ಸೇನೆ ಹೇಳಿದೆ. 1973 ರಲ್ಲಿ ಈಜಿಪ್ಟ್ ಮತ್ತು ಸಿರಿಯಾದೊಂದಿಗೆ ವಾರಗಳ ಕಾಲ ನಡೆದ ಯುದ್ಧದ ನಂತರ ಇಷ್ಟು ದೊಡ್ಡ ಸಂಖ್ಯೆಯ ಸಾವುನೋವುಗಳು ಸಂಭವಿಸಿರಲಿಲ್ಲ. ಇನ್ನು ಅಲ್ಲಿನ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಹಮಾಸ್ ಆಳ್ವಿಕೆಯ ಗಾಜಾ ಪಟ್ಟಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 1,417 ಜನರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ : ಆಪರೇಷನ್ ಅಜಯ್: ಇಂದು ರಾತ್ರಿ 230 ಜನರಿರುವ ಮೊದಲ ವಿಮಾನ ಇಸ್ರೇಲ್‌ನಿಂದ ಭಾರತಕ್ಕೆ