ಟೆಹ್ರಾನ್, ಇರಾನ್: ಇರಾನ್ನಲ್ಲಿ ಹಿಜಾಬ್ ಸಂಘರ್ಷ ತಲೆದೋರಿದ ಮಧ್ಯೆಯೇ ಟೆಹ್ರಾನ್‌ನ ಎವಿನ್ ಜೈಲಿನಲ್ಲಿ ಕೈದಿಗಳ ಕಿತ್ತಾಟದಿಂದ ಜೈಲಿಗೇ ಬೆಂಕಿ ಹಾಕಿದ ಘಟನೆ ನಡೆದಿದ್ದು, ಇದರಲ್ಲಿ 8 ಮಂದಿ ಸಜೀವ ದಹನವಾಗಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಡೀ ಜೈಲು ಬೆಂಕಿಗೆ ಆಹುತಿಯಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
-
a lot of innocent people (political prisoners) held in iran’s evin prison. now on fire, with gunshots heard. pic.twitter.com/5Gpslox0I3
— ian bremmer (@ianbremmer) October 15, 2022 " class="align-text-top noRightClick twitterSection" data="
">a lot of innocent people (political prisoners) held in iran’s evin prison. now on fire, with gunshots heard. pic.twitter.com/5Gpslox0I3
— ian bremmer (@ianbremmer) October 15, 2022a lot of innocent people (political prisoners) held in iran’s evin prison. now on fire, with gunshots heard. pic.twitter.com/5Gpslox0I3
— ian bremmer (@ianbremmer) October 15, 2022
ದರೋಡೆ, ಅಪರಾಧ ಪ್ರಕರಣಗಳಲ್ಲಿ ಬಂಧಿತರಾದ ಹಲವಾರು ಕೈದಿಗಳು ಈ ಜೈಲಿನಲ್ಲಿದ್ದು, ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ಜೈಲಿಗೆ ಬೆಂಕಿ ಹಾಕಲಾಗಿದೆ. ಭಾರೀ ಪ್ರಮಾಣದ ಅಗ್ನಿ ಇಡೀ ಜೈಲನ್ನು ಆವರಿಸಿಕೊಂಡಿದ್ದಲ್ಲದೇ, ದಟ್ಟ ಹೊಗೆ ಉಂಟಾಗಿದೆ. ಉಸಿರಾಡಲು ಅಪರಾಧಿಗಳು ಪರದಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೆಹ್ರಾನ್‌ನ ಎವಿನ್ ಜೈಲಿನಲ್ಲಿ ಕೈದಿಗಳ ಕಾದಾಟದ ಬಳಿಕ ಬೆಂಕಿ ಹೊತ್ತಿಕೊಂಡಿದ್ದಲ್ಲದೇ, ಗುಂಡಿನ ಸದ್ದು ಕೂಡ ಕೇಳಿಬಂದಿದೆ. ಇದು ದ್ವೇಷದ ಹಿನ್ನೆಲೆಯಲ್ಲಿ ನಡೆದ ಘಟನೆಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಎವಿನ್ ಜೈಲಿನಲ್ಲಿ ಮೃತಪಟ್ಟವರ ಸಂಖ್ಯೆ ಅಧಿಕೃತ ಎಣಿಕೆಗಿಂತ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಬೆಂಕಿ ಅವಘಡದಲ್ಲಿ ಜೈಲಿನಲ್ಲಿ 40 ಕ್ಕೂ ಅಧಿಕ ಕೈದಿಗಳು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.