ETV Bharat / international

ಯುದ್ಧ ದಿನ-9: ಗಾಜಾದಲ್ಲಿ ನಾಗರಿಕರ ಸ್ಥಳಾಂತರಕ್ಕೆ 3 ತಾಸು ಕದನ ವಿರಾಮ ನೀಡಿದ ಇಸ್ರೇಲ್ - Israeli Defence Forces

ಇಸ್ರೇಲ್-ಪ್ಯಾಲೆಸ್ಟೈನ್‌ ಯುದ್ಧವು 9ನೇ ದಿನಕ್ಕೆ ಕಾಲಿಟ್ಟಿದೆ. ಗಾಜಾದಲ್ಲಿ ಇಸ್ರೇಲಿ ಪಡೆಗಳ ಆಕ್ರಮಣಕ್ಕಿಂತ ಹೆಚ್ಚಾಗಿ ಆಹಾರ, ನೀರು ಮತ್ತು ಮೂಲಸೌಕರ್ಯಗಳ ಕೊರತೆಯಿಂದಾಗಿಯೇ ಜನರು ಸಂಕಷ್ಟದಲ್ಲಿದ್ದಾರೆ.

ಕದನ ವಿರಾಮ ನೀಡಿದ ಇಸ್ರೇಲ್
ಕದನ ವಿರಾಮ ನೀಡಿದ ಇಸ್ರೇಲ್
author img

By ETV Bharat Karnataka Team

Published : Oct 15, 2023, 4:23 PM IST

ಗಾಜಾ/ಜೆರುಸಲೇಂ: ಪ್ಯಾಲೆಸ್ಟೈನ್‌ ಹಮಾಸ್​ ಉಗ್ರರ ದಮನ ಕಾರ್ಯ ನಡೆಸುತ್ತಿರುವ ಇಸ್ರೇಲಿ ಪಡೆಗಳು, ಗಾಜಾ ಪಟ್ಟಿಯನ್ನು ತೊರೆಯಲು ಜನರಿಗೆ 24 ಗಂಟೆಗಳ ಅವಕಾಶ ನೀಡಿದ್ದವು. ಇಂದಿನ 9ನೇ ದಿನದ ಯುದ್ಧದಲ್ಲಿ ಜನರ ಸ್ಥಳಾಂತರಕ್ಕಾಗಿ 3 ಗಂಟೆಗಳ ಹೆಚ್ಚುವರಿ ಅವಕಾಶ ನೀಡಿದ್ದು, ಸಣ್ಣ ಕದನ ವಿರಾಮ ನೀಡಿದೆ. ಇದೇ ವೇಳೆ ಲೆಬನಾನ್​ನಿಂದ ಹಿಜ್ಬುಲ್ಲಾ ಉಗ್ರರು ಇಸ್ರೇಲ್​ ಮೇಲೆ ದಾಳಿ ಆರಂಭಿಸಿದ್ದಾರೆ.

  • Residents of Gaza City and northern Gaza, in the past days, we've urged you to relocate to the southern area for your safety. We want to inform you that the IDF will not carry out any operations along this route from 10 AM to 1 PM. During this window, please take the opportunity… pic.twitter.com/JUkcGOg0yv

    — Israel Defense Forces (@IDF) October 15, 2023 " class="align-text-top noRightClick twitterSection" data=" ">

ಗಾಜಾ ಪಟ್ಟಿಯಲ್ಲಿ ಉಗ್ರ ನೆಲೆಗಳನ್ನು ಧ್ವಂಸ ಮಾಡುತ್ತಿರುವ ಇಸ್ರೇಲ್ ಪಡೆಗಳು, ಯುದ್ಧ ಆರಂಭವಾಗಿ 9ನೇ ದಿನದ ವೇಳೆಗೆ 2,329 ಪ್ಯಾಲೆಸ್ಟೈನಿಯನ್ನರನ್ನು ಬಲಿ ಪಡೆದಿವೆ. ಇದು 2014 ರ ಯುದ್ಧದಲ್ಲಿ ಆರು ವಾರಗಳಲ್ಲಿ ನಡೆದ ಸಾವಿಗಿಂತಲೂ ಹೆಚ್ಚು. ಇದೇ ವೇಳೆ ಇಸ್ರೇಲ್‌ನ 1,300 ಮಂದಿ ಸಾವಿಗೀಡಾಗಿದ್ದು, ಇದರಲ್ಲಿ ಬಹುಪಾಲು ನಾಗರಿಕರೇ ಇದ್ದಾರೆ. ಅಕ್ಟೋಬರ್ 7 ರಂದು ಹಮಾಸ್​ ನಡೆಸಿದ ಅಮಾನವೀಯ ದಾಳಿ ವೇಳೆ ಸಾವಿಗೀಡಾದವರ ಸಂಖ್ಯೆಯೇ ಹೆಚ್ಚು.

3 ಗಂಟೆ ಕದನ ವಿರಾಮ: ಇಸ್ರೇಲಿ ರಕ್ಷಣಾ ಪಡೆಗಳು ಉತ್ತರ ಗಾಜಾದಿಂದ ಜನರು ಸ್ಥಳಾಂತರಗೊಳ್ಳಲು 3 ಗಂಟೆಗಳ ಕಾಲಾವಕಾಶ ಘೋಷಿಸಿದೆ. ಈ ಪ್ರದೇಶದಲ್ಲಿ ವಾಸಿಸುವ ಸುಮಾರು 1.1 ಮಿಲಿಯನ್ (10 ಲಕ್ಷಕ್ಕೂ ಅಧಿಕ) ಜನರು ಶೀಘ್ರವೇ ಸ್ಥಳಾಂತರವಾಗಿ ಎಂದು ಸೂಚಿಸಿದೆ. ನೀಡಿದ ಗಡುವಿನಲ್ಲಿ ಯಾವುದೇ ಸೇನಾ ಚಟುವಟಿಕೆಗಳು ನಡೆಯುವುದಿಲ್ಲ. ಹೀಗಾಗಿ ಜನರು ಸುರಕ್ಷಿತ ಸ್ಥಳಕ್ಕೆ ತೆರಳಿ ಎಂದಿದೆ.

ಜನರು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸುವ ನಕ್ಷೆಯನ್ನು ಎಕ್ಸ್​ನಲ್ಲಿ ಹಂಚಿಕೊಂಡಿರುವ ಇಸ್ರೇಲ್​ ಪಡೆಗಳು, ಉತ್ತರ ಗಾಜಾದ ನಿವಾಸಿಗಳ ಸುರಕ್ಷತೆಗಾಗಿ ದಕ್ಷಿಣ ಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ತಿಳಿಸಲಾಗಿದೆ. ನಮ್ಮ ಪಡೆಗಳು ಈ ಮಾರ್ಗದಲ್ಲಿ ಯಾವುದೇ ಕಾರ್ಯಾಚರಣೆಯನ್ನು ಕೈಗೊಳ್ಳುವುದಿಲ್ಲ ಎಂದು ಖಚಿತ ಭರವಸೆ ನೀಡುತ್ತೇವೆ. ದಯವಿಟ್ಟು, ಉತ್ತರ ಗಾಜಾದಿಂದ ದಕ್ಷಿಣದ ಕಡೆಗೆ ಶೀಘ್ರವೇ ತೆರಳಿ. ನಿಮ್ಮ ಮತ್ತು ಕುಟುಂಬಗಳ ಸುರಕ್ಷತೆಯೇ ಮುಖ್ಯ. ನಮ್ಮ ಸೂಚನೆಗಳನ್ನು ಅನುಸರಿಸಿ ಎಂದು ಮನವಿ ಮಾಡಲಾಗಿದೆ.

ಹಮಾಸ್​ ದಾಳಿಯ ಬಳಿಕ ಇಸ್ರೇಲ್ ಉತ್ತರ ಗಾಜಾದ ಸುತ್ತಲೂ ದಿಗ್ಬಂಧನ ಘೋಷಿಸಿದೆ. ಒಂದು ವಾರದದಿಂದ ಆಹಾರ, ನೀರು, ವಿದ್ಯುತ್, ವೈದ್ಯಕೀಯ ಔಷಧಿಗಳು ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ಸರಬರಾಜು ನಿಲ್ಲಿಸಿದೆ. ಬಾಂಬ್​, ರಾಕೆಟ್​ ದಾಳಿಗೂ ಮೊದಲೇ ಇಲ್ಲಿನ ಜನರು ಆಹಾರ, ನೀರಿಲ್ಲದೇ ಸಾಯುವ ಭೀತಿ ಉಂಟಾಗಿದೆ. ಮುಂದಿನ ಒಂದು ವಾರದಲ್ಲಿ ಸಾವಿರಾರು ಜನರು ಇದರಿಂದಲೇ ಸಾಯಬಹುದು ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್ ಮೇಲೆ ಹಿಜ್ಬುಲ್ಲಾ ದಾಳಿ: ಹಮಾಸ್​ ಉಗ್ರರ ಪರವಾಗಿ ಹೋರಾಡುವುದಾಗಿ ಘೋಷಿಸಿದ ಬಳಿಕ ಲೆಬನಾನ್​ ಮೇಲೂ ದಾಳಿ ನಡೆಸಿದ್ದ ಇಸ್ರೇಲ್​ ಪತ್ರಕರ್ತ ಸೇರಿ, ಮೂವರು ಸಾವಿಗೀಡಾಗಿದ್ದರು. ಇದಕ್ಕೆ ಪ್ರತಿಯಾಗಿ ಹಿಜ್ಬುಲ್ಲಾ ಉಗ್ರರು ಕೂಡ ಪ್ರತಿದಾಳಿ ಆರಂಭಿಸಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಲೆಬನಾನ್ ಉಗ್ರಗಾಮಿ ಗುಂಪು ಇಸ್ರೇಲಿ ಭೂಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸಿದ್ದು, ಅದನ್ನು ಇಸ್ರೇಲಿ ಪಡೆಗಳು ವಿಫಲಗೊಳಿಸಿವೆ. ಪ್ಯಾಲೆಸ್ಟೈನ್ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹಿಜ್ಬುಲ್ಲಾ ಇಸ್ರೇಲ್​ ಮೇಲೆ ದಾಳಿ ನಡೆಸುತ್ತಿದೆ.

ಇದನ್ನೂ ಓದಿ: ಗಾಜಾ ಮೇಲಿನ ದಾಳಿ ನಿಲ್ಲಿಸದಿದ್ದರೆ ಮಧ್ಯಪ್ರವೇಶ-ಇಸ್ರೇಲ್​ಗೆ ಇರಾನ್ ಎಚ್ಚರಿಕೆ; ಮತ್ತೊಂದು ಯುದ್ಧವಿಮಾನ ವಾಹಕ ನೌಕೆ ಕಳುಹಿಸಿಕೊಟ್ಟ ಅಮೆರಿಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.