ETV Bharat / international

ಭಾರತದ ಸಾಮರ್ಥ್ಯ ಈಗ ಚೀನಾಗೆ ಅರಿವಾಗುತ್ತಿದೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್ - ಚೀನಾ

ಭಾರತದ ಸಾಮರ್ಥ್ಯ ಈಗ ಚೀನಾಗೆ ಗೊತ್ತಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಂಡನ್​ನಲ್ಲಿ ಹೇಳಿದ್ದಾರೆ.

Defence Minister Rajnath Singh in London

author img

By ANI

Published : Jan 11, 2024, 6:40 PM IST

ಲಂಡನ್: ಭಾರತವು ಜಾಗತಿಕ ಶಕ್ತಿಯಾಗಿ ಪರಿವರ್ತನೆಯಾಗಿರುವ ಮಧ್ಯೆ ಭಾರತದ ಬಗ್ಗೆ ಚೀನಾದ ದೃಷ್ಟಿಕೋನದಲ್ಲಿ ವ್ಯಾಪಕ ಬದಲಾವಣೆ ಕಂಡು ಬಂದಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಹೇಳಿದ್ದಾರೆ. ಚೀನಾದ ಸರ್ಕಾರಿ ಒಡೆತನದ ಮಾಧ್ಯಮ ಗ್ಲೋಬಲ್ ಟೈಮ್ಸ್​ನಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿ ಸಚಿವರು ಈ ಮಾತು ಹೇಳಿದ್ದಾರೆ.

"ಒಂದು ರೀತಿಯಲ್ಲಿ ಚೀನಾದ ಮುಖವಾಣಿ ಆಗಿರುವ ಗ್ಲೋಬಲ್ ಟೈಮ್ಸ್​ನಲ್ಲಿ ಅಂಕಣಕಾರರೊಬ್ಬರು 'ಇಂಡಿಯಾದಲ್ಲಿ ಭಾರತದ ನಿರೂಪಣೆ' ಶೀರ್ಷಿಕೆಯಡಿ ಲೇಖನವನ್ನು ಪ್ರಕಟಿಸಿದ್ದಾರೆ. ಈ ಲೇಖನವು ಭಾರತದ ಬಗ್ಗೆ ಬದಲಾಗುತ್ತಿರುವ ಚೀನಾದ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ. ನಮ್ಮ ಆರ್ಥಿಕ ಮತ್ತು ವಿದೇಶಾಂಗ ನೀತಿಗಳು ಮತ್ತು ನಮ್ಮ ಬದಲಾಗುತ್ತಿರುವ ಕಾರ್ಯತಂತ್ರದ ಹಿತಾಸಕ್ತಿಗಳು ಭಾರತವು ಪ್ರಮುಖ ಜಾಗತಿಕ ಆರ್ಥಿಕ ಮತ್ತು ಕಾರ್ಯತಂತ್ರದ ಶಕ್ತಿಯಾಗಿ ಹೊರಹೊಮ್ಮಿದೆ ಎಂಬುದನ್ನು ಚೀನಾ ಸರ್ಕಾರ ಒಪ್ಪಿಕೊಂಡಿದೆ ಎಂದು ತೋರುತ್ತದೆ" ಎಂದು ಸಿಂಗ್ ತಿಳಿಸಿದರು.

"ನಾವು ಯಾರನ್ನೂ ನಮ್ಮ ಶತ್ರುಗಳಾಗಿ ಪರಿಗಣಿಸುವುದಿಲ್ಲ. ಆದರೆ, ಭಾರತ ಮತ್ತು ಚೀನಾ ನಡುವಿನ ಸಂಬಂಧವು ಪ್ರಸ್ತುತ ಒತ್ತಡದಲ್ಲಿದೆ ಎಂಬುದು ಜಗತ್ತಿಗೆ ತಿಳಿದಿದೆ. ಆದಾಗ್ಯೂ, ನಮ್ಮ ಎಲ್ಲ ನೆರೆಹೊರೆಯವರು ಮತ್ತು ಪ್ರಪಂಚದಾದ್ಯಂತದ ಎಲ್ಲ ದೇಶಗಳೊಂದಿಗೆ ಉತ್ತಮ ಸಂಬಂಧ ಬೆಳೆಸಲು ನಾವು ಬಯಸುತ್ತೇವೆ" ಎಂದು ಸಿಂಗ್ ಜನವರಿ 11 ರಂದು ಲಂಡನ್​ನಲ್ಲಿ ಹೇಳಿದರು.

ಲಂಡನ್​ನ ಇಂಡಿಯಾ ಹೌಸ್​ನಲ್ಲಿ ನೆರೆದಿದ್ದ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಭಾರತದ ರಕ್ಷಣಾ ಸಚಿವರು, ಜಾಗತಿಕ ಮಟ್ಟದಲ್ಲಿ ಭಾರತವನ್ನು ಇನ್ನು ಮುಂದೆ ನಿರ್ಲಕ್ಷಿಸಲಾಗುವುದಿಲ್ಲ ಎಂದು ಚೀನಾ ಸರ್ಕಾರ ಈಗ ಒಪ್ಪಿಕೊಂಡಿದೆ ಎಂದು ಗ್ಲೋಬಲ್ ಟೈಮ್ಸ್ ಪ್ರತಿಪಾದಿಸಿದೆ. ನೀವು ಭಾರತ ದೇಶವನ್ನು ಇಷ್ಟಪಡುತ್ತೀರೋ ಇಲ್ಲವೋ ಎಂಬುದು ಬೇರೆ ವಿಷಯ. ಆದರೆ, ನಮ್ಮ ಹೆಚ್ಚುತ್ತಿರುವ ಜಾಗತಿಕ ಸ್ಥಾನಮಾನವನ್ನು ಇನ್ನು ಮುಂದೆ ಜಗತ್ತಿನಲ್ಲಿ ಯಾರೂ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂಬುದನ್ನು ಚೀನಾ ಸರ್ಕಾರ ಈಗ ಒಪ್ಪಿಕೊಂಡಿರುವುದನ್ನು ಲೇಖಕರು ಗ್ಲೋಬಲ್ ಟೈಮ್ಸ್​ ಅಂಕಣದಲ್ಲಿ ಪ್ರತಿಪಾದಿಸಿದ್ದಾರೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.

ಈ ಹಿಂದೆ, ವ್ಯಾಪಾರ ಅಸಮತೋಲನದ ಬಗ್ಗೆ ಚರ್ಚೆ ನಡೆದಾಗ ಉಭಯ ದೇಶಗಳ ನಡುವಿನ ವ್ಯಾಪಾರ ಅಸಮತೋಲನ ಕಡಿಮೆ ಮಾಡಲು ಭಾರತವು ಬೀಜಿಂಗ್ ಅನ್ನು ಅವಲಂಬಿಸಿತ್ತು. ಆದಾಗ್ಯೂ ಆ ಪ್ರವೃತ್ತಿ ಈಗ ಚಾಲ್ತಿಯಲ್ಲಿಲ್ಲ ಎಂದು ರಕ್ಷಣಾ ಸಚಿವ ಸಿಂಗ್ ಹೇಳಿದರು.

ಇದನ್ನೂ ಓದಿ : ರಾಮಾಯಣ ವಿಶ್ವದ ಭೌಗೋಳಿಕ ಸೇತುವೆ: ರಾಯಭಾರಿ ಸಂಧು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.