ETV Bharat / international

ಜಾತಿ ತಾರತಮ್ಯ ನಿಷೇಧ ಮಸೂದೆ ಅಂಗೀಕರಿಸಿದ ಕ್ಯಾಲಿಫೋರ್ನಿಯಾ ಸೆನೆಟ್

author img

By

Published : May 12, 2023, 1:10 PM IST

ಕ್ಯಾಲಿಫೋರ್ನಿಯಾ ಸೆನೆಟ್ ಜಾತಿ ತಾರತಮ್ಯವನ್ನು ನಿಷೇಧಿಸುವ ಮಸೂದೆಯನ್ನು ಅಂಗೀಕರಿಸಿದೆ.

Representative Image
ಪ್ರಾತಿನಿಧಿಕ ಚಿತ್ರ

ವಾಷಿಂಗ್ಟನ್(ಅಮೆರಿಕ): ಐತಿಹಾಸಿಕ ಕ್ರಮದಲ್ಲಿ ಕ್ಯಾಲಿಫೋರ್ನಿಯಾ ಸ್ಟೇಟ್ ಸೆನೆಟ್ ಗುರುವಾರ ರಾಜ್ಯದಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ನಿಷೇಧಿಸುವ ಮಸೂದೆಯನ್ನು ಅಂಗೀಕರಿಸಿದೆ. 34-1 ಮತಗಳಿಂದ ಅಂಗೀಕರಿಸಲ್ಪಟ್ಟ ಬಿಲ್- SB 403 ಜಾತಿ ಪಕ್ಷಪಾತ ಮತ್ತು ವಸತಿ, ಉದ್ಯೋಗ, ಶಿಕ್ಷಣ ಮತ್ತು ಇತರ ಸಂದರ್ಭಗಳಲ್ಲಿ ತಾರತಮ್ಯದ ಆರೋಪಗಳನ್ನು ಪರಿಹರಿಸಲು ಕಾನೂನು ಆಯ್ಕೆಗಳನ್ನು ವ್ಯಕ್ತಿಗಳಿಗೆ ಒದಗಿಸುತ್ತದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಕ್ಯಾಲಿಫೋರ್ನಿಯಾ ತನ್ನ ತಾರತಮ್ಯ ವಿರೋಧಿ ಕಾನೂನುಗಳಲ್ಲಿ ಜಾತಿಯನ್ನು ಸಂರಕ್ಷಿತ ವರ್ಗವಾಗಿ ಸೇರಿಸುವ ಯುಎಸ್​​ನ ಮೊದಲ ರಾಜ್ಯವಾಗಿದೆ. ಕಾನೂನಿಗೆ ಸಹಿ ಮಾಡಲು ರಾಜ್ಯಪಾಲರಿಗೆ ಕಳುಹಿಸುವ ಮೊದಲು ಇದೇ ರೀತಿಯ ಮಸೂದೆಯನ್ನು ರಾಜ್ಯ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಪರಿಚಯಿಸಲಾಗುತ್ತಿದೆ ಎಂದು ವರದಿಯಾಗಿದೆ.

ಉಲ್ಲಂಘನೆಗೆ ಕಠಿಣ ಕ್ರಮ: ಕ್ಯಾಲಿಫೋರ್ನಿಯಾ ಸೆನೆಟರ್ ಆಯಿಷಾ ವಹಾಬ್ ಪರಿಚಯಿಸಿದ "SB 403 ಅಸ್ತಿತ್ವದಲ್ಲಿರುವ ಕಾನೂನಿಗೆ ಜಾತಿಯನ್ನು ಸಂರಕ್ಷಿತ ವರ್ಗವಾಗಿ ಸೇರಿಸುತ್ತದೆ. ಅನ್ರುಹ್ ಸಿವಿಲ್ ರೈಟ್ಸ್ ಆಕ್ಟ್, ಇದು ಕ್ಯಾಲಿಫೋರ್ನಿಯಾ ರಾಜ್ಯದ ಎಲ್ಲಾ ಜನರು ಪೂರ್ಣ ಮತ್ತು ಸಮಾನವಾದ ವಸತಿ, ವ್ಯಾಪಾರ ಸೌಲಭ್ಯಗಳು ಹಾಗೂ ವ್ಯಾಪಾರ ಸಂಸ್ಥೆಗಳಲ್ಲಿನ ಎಲ್ಲಾ ಸೇವೆಗಳಿಗೆ ಅರ್ಹರಾಗಿರುತ್ತಾರೆ" ಎಂದು ಹೇಳಿದೆ. ಜಾತಿ ತಾರತಮ್ಯ ಮತ್ತು ಪೂರ್ವಾಗ್ರಹದಿಂದ ನೊಂದವರಿಗೆ SB 403 ಪೂರ್ಣ ರಕ್ಷಣೆಯನ್ನು ಒದಗಿಸುತ್ತದೆ. ಜಾತಿ ತಾರತಮ್ಯ ಮತ್ತು ಜಾತಿ-ಆಧಾರಿತ ಹಿಂಸಾಚಾರವನ್ನು ಅನುಮತಿಸುವ ಅಥವಾ ಬಯಸುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಹೇಳಲಾಗಿದೆ.

ಮಸೂದೆ ಅಂಗೀಕರಿಸಿದ ಮೊದಲ ನಗರ: ಈ ವರ್ಷದ ಆರಂಭದಲ್ಲಿ ಹಿಂದೂಗಳನ್ನು ಪ್ರತಿನಿಧಿಸುವ ಹಲವಾರು ಸಂಘಟನೆಗಳ ವಿರೋಧದ ನಡುವೆಯೂ ಅಮೆರಿಕದ ಸಿಯಾಟಲ್​ ನಗರ ಜಾತಿ ತಾರತಮ್ಯವನ್ನು ನಿಷೇಧಿಸಿತ್ತು. ಈ ಕ್ರಮ ಕೈಗೊಂಡ ಮೊದಲ ಯುನೈಟೆಡ್​ ಸ್ಟೇಟ್​ ಸಿಟಿ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಸಿಯಾಟಲ್ ಸಿಟಿ ಕೌನ್ಸಿಲ್‌ನ ಐತಿಹಾಸಿಕ ಕ್ರಮವನ್ನು ಈಗ ಕ್ಯಾಲಿಫೋರ್ನಿಯಾ ಅನುಸರಿಸುತ್ತಿದೆ.

ಜಾತಿ ತಾರತಮ್ಯ-ವಿರೋಧಿ ಕಾನೂನನ್ನು ಅಂಗೀಕರಿಸಿದ ಮೊದಲ ನಗರ ಸಿಯಾಟಲ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ ಸಿಯಾಟಲ್ ಕೌನ್ಸಿಲ್ ಸದಸ್ಯ ಕ್ಷಮಾ ಸಾವಂತ್, ಕ್ಯಾಲಿಫೋರ್ನಿಯಾ ಸ್ಟೇಟ್ ಸೆನೆಟ್‌ನಿಂದ SB 403 ಅಂಗೀಕಾರವನ್ನು ಸ್ವಾಗತಿಸಿದರು. "ಫೆಬ್ರವರಿಯಲ್ಲಿ ಸಿಯಾಟಲ್‌ನಲ್ಲಿ ನಮ್ಮ ಐತಿಹಾಸಿಕ ವಿಜಯದ ನಂತರ, ಕ್ಯಾಲಿಫೋರ್ನಿಯಾ ಸೆನೆಟ್ ಜಾತಿ ತಾರತಮ್ಯವನ್ನು ನಿಷೇಧಿಸುವ ಪರವಾಗಿ ಮತ ಚಲಾಯಿಸಿದೆ" ಎಂದು ಸಾವಂತ್ ಹೇಳಿದರು.

ದಲಿತ ಸಂಘಟನೆಯ ಗೆಲುವು: "ಈ ಮಸೂದೆ ಈಗ ವಿಧಾನಸಭೆಗೆ ಹೋಗುತ್ತದೆ. ಜಾತಿ ವಿರೋಧಿ ಕಾರ್ಯಕರ್ತರು, ದುಡಿಯುವ ಜನರು, ಒಕ್ಕೂಟದ ಸದಸ್ಯರು ಮತ್ತು ನನ್ನ ಸಮಾಜವಾದಿ ಕೌನ್ಸಿಲ್ ಕಚೇರಿಯು ಸಿಯಾಟಲ್‌ನಲ್ಲಿ ಗೆಲ್ಲಲು ಹೋರಾಟ ರೂಪಿಸಿತ್ತು. ಕ್ಯಾಲಿಫೋರ್ನಿಯಾದ ಎಲ್ಲಾ ದಲಿತರು ಮತ್ತು ಪ್ರಪಂಚದಾದ್ಯಂತದ ಜಾತಿ-ದಮನಿತ ಜನರ ಪರವಾಗಿ, ಕ್ಯಾಲಿಫೋರ್ನಿಯಾ ಸೆನೆಟ್ ಸೆನೆಟ್ SB 403 ಅನ್ನು ಅಂಗೀಕರಿಸಿದೆ. ಇದು ದಲಿತ ಸಂಘಟನೆಯ ಗೆಲುವಾಗಿದೆ. ನಮ್ಮ ಇಡೀ ಜಾತಿ-ದಮನಿತ ಸಮುದಾಯಕ್ಕೆ ರಾಜ್ಯವನ್ನು ಸುರಕ್ಷಿತವಾಗಿಸಲು ನಾವು ಪ್ರಾರಂಭಿಸುತ್ತಿದ್ದೇವೆ" ಎಂದು ಈಕ್ವಾಲಿಟಿ ಲ್ಯಾಬ್ಸ್ ಕಾರ್ಯನಿರ್ವಾಹಕ ನಿರ್ದೇಶಕಿ ಮತ್ತು ದಿ ಟ್ರಾಮಾ ಆಫ್ ಕ್ಯಾಸ್ಟ್‌ನ ಲೇಖಕಿ ತೆನ್ಮೋಳಿ ಸೌಂದರರಾಜನ್ ಹೇಳಿದರು.

ಭಾರತೀಯ ಸಂವಿಧಾನಕ್ಕೆ ಸಂದ ಜಯ: ಫೌಂಡೇಶನ್ ಫಾರ್ ಹ್ಯೂಮನ್ ಹಾರಿಜಾನ್‌ನ ಅಧ್ಯಕ್ಷರಾದ ದೀಲಿಪ್ ಮ್ಹಾಸ್ಕೆ ಅವರು ಕ್ಯಾಲಿಫೋರ್ನಿಯಾ ಸೆನೆಟ್‌ನಲ್ಲಿ ಮಸೂದೆಯನ್ನು ಪರಿಚಯಿಸಿದ್ದಕ್ಕಾಗಿ ರಾಜ್ಯ ಸೆನೆಟರ್ ಆಯಿಷಾ ವಹಾಬ್ ಅವರನ್ನು ಅಭಿನಂದಿಸಿದ್ದಾರೆ. ಇದು ಡಾ.ಬಿ.ಆರ್ ಅಂಬೇಡ್ಕರ್ ಅವರ ಸಮಾನತೆಯ ತತ್ವದಿಂದ ರಚಿತವಾದ ಭಾರತೀಯ ಸಂವಿಧಾನಕ್ಕೆ ಸಂದ ಜಯವಾಗಿದೆ ಎಂದಿದ್ದಾರೆ.

ಇಂಡಿಯಾ ಅಮೆರಿಕನ್ ಮುಸ್ಲಿಂ ಕೌನ್ಸಿಲ್ ಅಧ್ಯಕ್ಷ ಮೊಹಮ್ಮದ್ ಜವಾದ್ SB 403 ಅನ್ನು ಅಂಗೀಕರಿಸಿದ್ದಕ್ಕಾಗಿ ಕ್ಯಾಲಿಫೋರ್ನಿಯಾ ಸೆನೆಟ್ ಅನ್ನು ಶ್ಲಾಘಿಸಿದರು. "ತಲೆಮಾರುಗಳಿಂದ ಜಾತಿ ಆಧಾರಿತ ತಾರತಮ್ಯದ ವಿರುದ್ಧ ಹೋರಾಡುತ್ತಿರುವ ದಲಿತ ಸಮುದಾಯಕ್ಕೆ ಇದು ಐತಿಹಾಸಿಕ ಕ್ಷಣವಾಗಿದೆ. ಈ ಮಸೂದೆಯ ಅಂಗೀಕಾರವು ಕ್ಯಾಲಿಫೋರ್ನಿಯಾದಲ್ಲಿ ಜಾತಿ ತಾರತಮ್ಯಕ್ಕೆ ಸ್ಥಾನವಿಲ್ಲ ಎಂಬ ಬಲವಾದ ಸಂದೇಶವನ್ನು ರವಾನಿಸುತ್ತದೆ. ಈ ಮಸೂದೆಯು ದಲಿತರು ಮತ್ತು ಅವರ ಜಾತಿಯ ಆಧಾರದ ಮೇಲೆ ತಾರತಮ್ಯವನ್ನು ಎದುರಿಸುತ್ತಿರುವ ಇತರರಿಗೆ ಹೆಚ್ಚು ಅಗತ್ಯವಿರುವ ರಕ್ಷಣೆ ಒದಗಿಸುತ್ತದೆ" ಎಂದು ಅವರು ಹೇಳಿದರು.

ಇದನ್ನೂ ಓದಿ: ಅಮೆರಿಕದಲ್ಲಿಯೇ ಮೊದಲ ಬಾರಿಗೆ ಜಾತಿ ಪಕ್ಷಪಾತ ನಿಷೇಧ ಜಾರಿಗೆ ತಂದ ಸಿಯಾಟಲ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.