ಲಂಡನ್: ಬ್ರಿಟನ್ನಲ್ಲಿ ಕೆಲಸ ಮಾಡುವ ವೃತ್ತಿಪರರಿಗೆ ಪ್ರತಿ ವರ್ಷ 3000 ವೀಸಾಗಳನ್ನು ನೀಡಲು ಪ್ರಧಾನಿ ರಿಷಿ ಸುನಕ್ ಮುಂದಾಗಿದ್ದಾರೆ. ಇಂತಹ ಯೋಜನೆಯಿಂದ ಲಾಭ ಪಡೆಯುತ್ತಿರುವ ದೇಶ ಭಾರತ ಎಂದು ಬ್ರಿಟಿಷ್ ಸರ್ಕಾರ ಹೇಳಿದೆ. ಕಳೆದ ವರ್ಷ ಒಪ್ಪಿಕೊಂಡ ಯುಕೆ-ಭಾರತ ವಲಸೆ ಮತ್ತು ಸವಲತ್ತು ಪಾಲುದಾರಿಕೆಯ ಬಲವನ್ನು ಇದು ಎತ್ತಿ ತೋರಿಸುತ್ತದೆ.
-
#WATCH | The UK Prime Minister Rishi Sunak meets with Indian Prime Minister Narendra Modi at the sidelines of #G20Summit in Bali, Indonesia
— ANI (@ANI) November 16, 2022 " class="align-text-top noRightClick twitterSection" data="
(Source: DD) pic.twitter.com/itWLQ6I5b6
">#WATCH | The UK Prime Minister Rishi Sunak meets with Indian Prime Minister Narendra Modi at the sidelines of #G20Summit in Bali, Indonesia
— ANI (@ANI) November 16, 2022
(Source: DD) pic.twitter.com/itWLQ6I5b6#WATCH | The UK Prime Minister Rishi Sunak meets with Indian Prime Minister Narendra Modi at the sidelines of #G20Summit in Bali, Indonesia
— ANI (@ANI) November 16, 2022
(Source: DD) pic.twitter.com/itWLQ6I5b6
ಯುಕೆ ಇಂಡಿಯಾ ಯಂಗ್ ಪ್ರೊಫೆಷನಲ್ಸ್ ಸ್ಕೀಮ್ ಯೋಜನೆ ಅಡಿ ಇದನ್ನು ದೃಢೀಕರಿಸಲಾಗಿದೆ. ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ರಿಷಿ ಸುನಿಕ್ ಭೇಟಿ ಬಳಿಕ ಬ್ರಿಟನ್ ಕಚೇರಿಯಲ್ಲಿ ಈ ಬೆಳವಣಿಗೆ ನಡೆದಿದೆ. ಹೊಸ ಯುಕೆ - ಇಂಡಿಯಾ ಯಂಗ್ ಪ್ರೊಫೆಷನಲ್ಸ್ ಯೋಜನೆ ಅಡಿ, ಯುಕೆ ಎರಡು ವರ್ಷಗಳವರೆಗೆ ಬ್ರಿಟನ್ನಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು 18-30 ವರ್ಷ ವಯಸ್ಸಿನ ಪದವೀಧರರಿಗೆ 3,000 ಸ್ಥಳಗಳನ್ನು ನೀಡುತ್ತದೆ
ಭಾರತದೊಂದಿಗಿನ ನಮ್ಮ ದ್ವಿಪಕ್ಷೀಯ ಸಂಬಂಧ ಮತ್ತು ನಮ್ಮ ಎರಡೂ ಆರ್ಥಿಕತೆಗಳನ್ನು ಬಲಪಡಿಸಲು ಇಂಡೋ-ಪೆಸಿಫಿಕ್ ಪ್ರದೇಶ ಬಲವಾದ ಸಂಪರ್ಕಗಳ ವ್ಯಾಪಕ ಬದ್ಧತೆಗೆ ಈ ಯೋಜನೆಯ ಮಹತ್ವದ್ದಾಗಿದೆ ಎಂದು ಡೌನಿಂಗ್ ಸ್ಟ್ರೀಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಬ್ರಿಟನ್ ಇಂಡೋ ಫೆಸಿಫಿಕ್ ಪ್ರದೇಶದ ಇತರ ರಾಷ್ಟ್ರಗಳಿಗಿಂತ ಭಾರತದೊಂದಿಗೆ ಹೆಚ್ಚು ಸಂಪರ್ಕಿತದಲ್ಲಿದೆ. ಬ್ರಿಟನ್ನಲ್ಲಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ಕಾಲು ಭಾಗದಷ್ಟು ಜನ ಭಾರತೀಯರು. ಬ್ರಿಟನ್ ಬೆಂಬಲಿತ 95 ಸಾವಿರ ಉದ್ಯೋಗದಲ್ಲಿ ಭಾರತೀಯರ ಬಂಡವಾಳ ಹೆಚ್ಚಿದೆ. ಸದ್ಯ ಭಾರತ ಬ್ರಿಟನ್ ನೊಂದಿಗೆ ವಾಣಿಜ್ಯ ವ್ಯವಹಾರ ಒಪ್ಪದದ ಮಾತುಕತೆ ನಡೆಸುತ್ತಿದೆ.
ಇದು ಅಂಗೀಕೃತವಾದರೆ ಯುರೋಪಿನ್ ದೇಶಗಳೊಂದಿಗೆ ಮಾಡುತ್ತಿರುವ ಮೊದಲ ಒಪ್ಪಂದವಾಗಿರಲಿದೆ. ಈ ವಾಣಿಜ್ಯ ಒಪ್ಪಂದ ಭಾರತ ಮತ್ತು ಯುಕೆ ವ್ಯಾಪಾರ ಸಂಬಂಧವನ್ನು ಉತ್ತಮಗೊಳಿಸಲಿದೆ.
ಇದನ್ನೂ ಓದಿ: NATO ಸದಸ್ಯ ರಾಷ್ಟ್ರ ಪೋಲೆಂಡ್ ಭೂಪ್ರದೇಶಕ್ಕೆ ಅಪ್ಪಳಿಸಿದ ರಷ್ಯಾ ನಿರ್ಮಿತ ಕ್ಷಿಪಣಿಗಳು: ಇಬ್ಬರು ಸಾವು