ವಾಷಿಂಗ್ಟನ್: ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆಯ ಬಳಿಕ ಇಂಗ್ಲೆಂಡ್ ಮುಂದಿನ ಪ್ರಧಾನಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಅಂತಿಮ ಹಂತಕ್ಕೆ ತಲುಪಿರುವ ಕನ್ಸರ್ವೇಟಿವ್ ಪಕ್ಷದ ಲಿಜ್ ಟ್ರಸ್ ಮತ್ತು ಭಾರತೀಯ ಮೂಲದ ರಿಷಿ ಸುನಕ್ ಅವರ ಮಧ್ಯೆ ತುರುಸಿನ ಪೈಪೋಟಿ ನಡೆದಿದೆ. ಈ ಮಧ್ಯೆಯೇ ಅಮೆರಿಕ ಮೂಲದ ಭಾರತೀಯ ಸಂಘಟನೆಯಾದ ರಿಪಬ್ಲಿಕನ್ ಹಿಂದೂ ಒಕ್ಕೂಟ (ಆರ್ಎಚ್ಸಿ) ರಿಷಿ ಅವರನ್ನು ಬೆಂಬಲಿಸಿದೆ. ಸುನಕ್ ಪ್ರಧಾನಿಯಾದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
ಮುಂದಿನ ತಿಂಗಳಲ್ಲಿ ಬ್ರಿಟಿಷ್ ಪ್ರಧಾನಿಯ ಘೋಷಣೆಯಾಗಲಿದೆ. ಫೈನಲಿಸ್ಟ್‌ಗಳಾದ ಸುನಕ್ ಮತ್ತು ಲಿಜ್ ಟ್ರಸ್ ಮಧ್ಯೆ ದರ ಏರಿಕೆ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿವೆ. ಅಮೆರಿಕದ ರಿಪಬ್ಲಿಕನ್ ಹಿಂದೂ ಒಕ್ಕೂಟವು ಸುನಕ್ ಅವರು ಮುಂದಿನ ಬ್ರಿಟಿಷ್ ಪ್ರಧಾನಿಯಾದರೆ, ಸಂಸ್ಥೆ ಅವರನ್ನು ಬೆಂಬಲಿಸುತ್ತದೆ ಎಂದು ಹೇಳಿಕೆ ನೀಡಿದೆ.
ರಿಷಿ ಸುನಕ್ ಅವರು ಹಿಂದು ಎಂಬ ಕಾರಣಕ್ಕಾಗಿ ಪ್ರಧಾನಿಯಾಗಲು ಬಯಸುತ್ತೇವೆ. ರಿಪಬ್ಲಿಕನ್ ಹಿಂದೂ ಒಕ್ಕೂಟದಂತೆಯೇ, ಸುನಕ್ ಅವರು ನಮ್ಮ ಮೌಲ್ಯಗಳು ಮತ್ತು ಅದರ ಸ್ಥಾಪಕ ತತ್ವಗಳನ್ನು ಸಂಪೂರ್ಣವಾಗಿ ಬೆಂಬಲಿಸಿ ಸ್ವೀಕರಿಸುತ್ತಾರೆ ಎಂಬ ಆಶಾಭಾವವಿದೆ. ಸೀಮಿತ ಸಣ್ಣ ಸರ್ಕಾರದೊಂದಿಗೆ ಉಚಿತ ಉದ್ಯಮ, ಹಣಕಾಸಿನ ಶಿಸ್ತು, ಕುಟುಂಬ ಮೌಲ್ಯಗಳು ಮತ್ತು ಸಂಸ್ಥೆಯ ವಿದೇಶಿ ನೀತಿಯನ್ನು ಅವರು ಅನುಸರಿಸುತ್ತಾರೆ. ಸುನಕ್ ಸಂಪ್ರದಾಯವಾದಿ ಚಳವಳಿಯ ನಿಜವಾದ ಚಾಂಪಿಯನ್ ಆಗಿದ್ದಾರೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಇತ್ತೀಚೆಗೆ ಬಂದ ವರದಿಗಳ ಪ್ರಕಾರ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರು ಪ್ರಧಾನಿಯಾಗುವ ಸಂಭವ ಕಡಿಮೆ ಇದೆ. ಪಕ್ಷದಲ್ಲಿ ಲಿಜ್ ಟ್ರಿಸ್ ಅವರಿಗಿಂತ ಭಾರೀ ಪ್ರಮಾಣದಲ್ಲಿ ಹಿಂದುಳಿದಿದ್ದಾರೆ ಎಂದು ಹೇಳಲಾಗಿದೆ.
ಓದಿ: ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನಿವಾಸದ ಮೇಲೆ ಎಫ್ಬಿಐ ದಾಳಿ!