ETV Bharat / international

ಸೌದಿ ಅರೇಬಿಯಾ: ಶಿಲಾಯುಗದ 2 ಲಕ್ಷ ವರ್ಷಗಳಷ್ಟು ಹಳೆಯ ಉಪಕರಣಗಳು ಪತ್ತೆ - ಸೌದಿ ಅರೇಬಿಯಾ

ಸೌದಿ ಅರೇಬಿಯಾದಲ್ಲಿ ಪತ್ತೆಯಾಗಿರುವ 2 ಲಕ್ಷ ವರ್ಷಗಳಷ್ಟು ಹಳೆಯದಾದ ಕಲ್ಲಿನ ಸಲಕರಣೆಗಳು, ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಇತಿಹಾಸಪೂರ್ವ ಸಮುದಾಯಗಳ ಜಸಸಾಂದ್ರತೆಯನ್ನು ಸೂಚಿಸುತ್ತದೆ.

2,00,000-year-old tools from stone age unearthed in Saudi Arabia
2 ಲಕ್ಷ ವರ್ಷಗಳ ಹಳೆಯ ಉಪಕರಣಗಳು ಪತ್ತೆ
author img

By

Published : Jan 1, 2021, 4:30 PM IST

ರಿಯಾದ್: ಸೌದಿ ಅರೇಬಿಯಾದ ಪರಂಪರೆ ಅಭಿವೃದ್ಧಿ ಪ್ರಾಧಿಕಾರದ ವೈಜ್ಞಾನಿಕ ತಂಡವು ಕಲ್ಲಿನ ಕೊಡಲಿಗಳು ಸೇರಿದಂತೆ 2 ಲಕ್ಷ ವರ್ಷಗಳಷ್ಟು ಹಳೆಯದಾದ ಬೃಹತ್​ ಪ್ರಮಾಣದ ಉಪಕರಣಗಳನ್ನು ಪತ್ತೆ ಮಾಡಿದೆ.

ಅಲ್-ಕಾಸಿಮ್ ಪ್ರದೇಶದಿಂದ ಪೂರ್ವದಲ್ಲಿರುವ ಶುಯೈಬ್ ಅಲ್-ಅಡ್ಘಾಮ್ ಎಂಬ ಸ್ಥಳದಲ್ಲಿ ಪತ್ತೆಯಾಗಿರುವ ಈ ಕಲ್ಲಿನ ಉಪಕರಣಗಳನ್ನು ಹಳೆಯ ಶಿಲಾಯುಗದಲ್ಲಿ ಅಸಿರಿಯಾದ ನಾಗರಿಕತೆಯ ನಿವಾಸಿಗಳು ಬಳಸುತ್ತಿದ್ದರು ಎಂದು ಪ್ರಾಧಿಕಾರ ತಿಳಿಸಿದೆ.

ಓದಿ: ಕೋವಿಡ್-19 ಲಸಿಕೆ ತಯಾರು: ಪೂರ್ವಭಾವಿ 'ಮಹಾಯಜ್ಞ'ಕ್ಕೆ ಭರದ ಸಿದ್ಧತೆ

ಇಲ್ಲಿ ಪತ್ತೆಯಾಗಿರುವ ಕಲ್ಲಿನ ಕೊಡಲಿಗಳು ಅನನ್ಯ ಹಾಗೂ ಬಹಳ ಅಪರೂಪದ್ದಾಗಿವೆ. ಈ ಅಪಾರ​ ಪ್ರಮಾಣದ ಕಲ್ಲಿನ ಸಲಕರಣೆಗಳು ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಇತಿಹಾಸಪೂರ್ವ ಸಮುದಾಯಗಳ ಜನಸಾಂದ್ರತೆಯನ್ನು ಸೂಚಿಸುತ್ತದೆ. ಆ ಜನರು ಅರೇಬಿಯನ್ ಭೂಪ್ರದೇಶದಲ್ಲಿನ ಹವಾಮಾನ ಸ್ಥಿತಿಗಳಿಗೆ ಹೊಂದಿಕೊಂಡು ನೈಸರ್ಗಿಕ ಸಂಪನ್ಮೂಲಗಳ ಲಾಭವನ್ನು ಪಡೆದಿದ್ದರು ಎಂಬುವುದನ್ನು ಇದು ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಸೌದಿ ಗೆಜೆಟ್ ವರದಿ ಮಾಡಿದೆ.

ಇನ್ನು ಪ್ರಾಚೀನ ಕಾಲದಲ್ಲಿ ಅರೇಬಿಯನ್ ಪೆನಿನ್ಸುಲಾದ ಇತರ ಪ್ರದೇಶಗಳಿಗೆ ಜನರು ನದಿಯನ್ನು ದಾಟಿ ತೆರಳುತ್ತಿದ್ದರು ಎಂಬುದನ್ನು ಉಪಗ್ರಹ ಚಿತ್ರಗಳು ತೋರಿಸುತ್ತವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.