ಮೆಲ್ಬೋರ್ನ್: ಬರೋಬ್ಬರಿ 5 ವರ್ಷಗಳ ಕಾಲ ಆಸ್ಟ್ರೇಲಿಯಾದ ಕಾಡುಗಳಲ್ಲಿ ಅಲೆದಾಡಿರುವ ಕಾಡು ಕುರಿಯೊಂದನ್ನು ರಕ್ಷಣೆ ಮಾಡಲಾಗಿದ್ದು, ಸಾಯುವ ಸ್ಥಿತಿಯಲ್ಲಿದ್ದ ಅವರ ದೇಹದ ಮೇಲೆ ಬೆಳೆದಿದ್ದ ಬರೋಬ್ಬರಿ 35(77 ಪೌಂಡ್) ಕೆಜಿ ತೂಕದ ಉಣ್ಣೆ ಕತ್ತರಿಸಲಾಗಿದೆ.
ಓದಿ: ಇಂಧನ ಬೆಲೆ ಕಡಿಮೆ ಯಾವಾಗ? ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಸೀತಾರಾಮನ್ ಉತ್ತರ ಹೀಗಿದೆ!
ಕಳೆದ ಐದು ವರ್ಷಗಳಿಂದ ಅದು ಕಾಡಿನಲ್ಲಿದ್ದ ಕಾರಣ ಅನಿಯಂತ್ರಿತವಾಗಿ ಅದರ ದೇಹದಲ್ಲಿ ಉಣ್ಣೆ ಬೆಳೆದಿದ್ದು, ಸದ್ಯ ಆಸ್ಟ್ರೇಲಿಯಾದ ವಿಕ್ಟೋರಿಯನ್ ಸ್ಟೇಟ್ ಅರಣ್ಯದಲ್ಲಿ ಪತ್ತೆಯಾಗಿದೆ. ಮೆಲ್ಬೋರ್ನ್ನಲ್ಲಿರುವ ಪ್ರಾಣಿ ಅಭಿಯಾರಣ್ಯಕ್ಕೆ ತರಲಾಗಿದೆ. ಸುಮಾರು ಐದು ವರ್ಷಗಳ ಕಾಲ ಮಣ್ಣು ಮತ್ತು ಹೊಲಸು ಉಣ್ಣೆ ಮೈಯಲ್ಲಿದ್ದರೂ ಅದು ಹೋರಾಟ ಮಾಡಿ ಬದುಕುಳಿದಿದ್ದು ನಿಜಕ್ಕೂ ಆಶ್ಚರ್ಯವಾಗಿದೆ. ಇದೀಗ ಅದನ್ನು ರಕ್ಷಣೆ ಮಾಡಲಾಗಿದೆ ಎಂದು ಪ್ರಾಣಿ ರಕ್ಷಣಾ ಇಲಾಖೆ ತನ್ನ ಫೇಸ್ಬುಕ್ನಲ್ಲಿ ತಿಳಿಸಿದೆ.
ಒಂದು ಕುರಿ ಇಷ್ಟೊಂದು ಉಣ್ಣೆ ಹೊತ್ತು ಜೀವಂತವಾಗಿರುವುದು ತುಂಬಾ ಕಷ್ಟ. ಆದರೆ ಈ ಕುರಿ ಬದುಕಿರುವುದು ನಿಜಕ್ಕೂ ಆಶ್ಚರ್ಯಗಳಲ್ಲಿ ಒಂದಾಗಿದೆ ಎಂದು ಮಿಷನ್ ಫಾರ್ಮ ಅಭಯಾರಣ್ಯದ ಸಂಸ್ಥಾಪಕ ಪಾಮ್ ಅಹೆರ್ನ್ ತಿಳಿಸಿದ್ದಾರೆ.