ಜಿನೇವಾ (ಸ್ವಿಟ್ಜರ್ಲ್ಯಾಂಡ್): ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್ನ ಮೂಲದ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದು, ಡಬ್ಲ್ಯೂಹೆಚ್ಒ ತಂಡ ವುಹಾನ್ ನಗರಕ್ಕೆ ಭೇಟಿ ನೀಡಲು ಚೀನಾ ನಿರಾಕರಿಸಿದೆ.
ಇಬ್ಬರು ಸದಸ್ಯರು ಪ್ರಯಾಣ ಬೆಳೆಸಿದ್ದು, ಒಬ್ಬರು ಹಿಂದೆ ಸರಿದಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ವೀಸಾ ವಿಚಾರದಲ್ಲಿ ಸಮಸ್ಯೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೊಂಡಿದೆ.
ಈ ಬಗ್ಗೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಗೆಬ್ರಿಯೇಸಸ್, ಚೀನಾ ಇನ್ನೂ ತಜ್ಞರ ಪ್ರವೇಶದ ವಿಚಾರವನ್ನು ಅಂತಿಮಗೊಳಿಸಿಲ್ಲದಿರುವುದು ಅತೃಪ್ತಿ ತಂದಿದೆ ಎಂದಿದ್ದಾರೆ.
ಇದನ್ನೂ ಓದಿ: ಹೊಸ ಅಭಿವೃದ್ಧಿ ಗುರಿಗಳನ್ನು ರೂಪಿಸಲು ಹೊಸ ಕಾಂಗ್ರೆಸ್ ತೆರೆದ ಉ.ಕೊರಿಯಾ
ಕೆಲವು ತಿಂಗಳುಗಳ ಮಾತುಕತೆಯ ನಂತರ ಡಿಸೆಂಬರ್ನಲ್ಲಿ ಕೊರೊನಾ ವೈರಸ್ ಮೂಲದ ಬಗ್ಗೆ ತನಿಖೆ ಮಾಡಲು ಒಪ್ಪಿಗೆ ನೀಡಿತ್ತು. ಇದೊಂದು ದೀರ್ಘಕಾಲದ ತನಿಖೆಯಾಗಿದ್ದು, ಸಾಕಷ್ಟು ನಿರೀಕ್ಷೆಗಳಿದ್ದವು.
ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಇಬ್ಬರು ತಜ್ಞರ ತಂಡವನ್ನು ಚೀನಾಗೆ ಕಳಿಸಲು ಮುಂದಾಗಿದ್ದು, ಈಗ ಚೀನಾ ಆ ತಂಡ ವುಹಾನ್ಗೆ ಪ್ರವೇಶಿಸಲು ನಿರ್ಬಂಧ ಹೇರಿದೆ ಎಂದು ಬಿಬಿಸಿ ವರದಿ ಮಾಡಿದೆ.
2019ರ ಅಂತ್ಯದಲ್ಲಿ ಚೀನಾದ ವುಹಾನ್ ನಗರದ ಮಾರುಕಟ್ಟೆಯೊಂದರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು. ಅಲ್ಲಿಂದಲೇ ವಿಶ್ವದಾದ್ಯಂತ ಹರಡಿತ್ತು ಎಂಬ ವಾದವನ್ನು ಚೀನಾ ನಿರಾಕರಿಸಿತ್ತು.