ETV Bharat / international

'ವಿಶ್ವಸಂಸ್ಥೆ ಭದ್ರತಾ ಮಂಡಳಿಯಿಂದ ನಾಚಿಕೆಗೇಡಿನ ಕೆಲಸ' - ವಿಡಿಯೋ ಕಾನ್ಫರೆನ್ಸ್

ಕಳೆದ ಹಲವಾರು ವಾರಗಳಿಂದ ವ್ಯಾಪಕ ಚರ್ಚೆಗಳು ನಡೆಯುತ್ತಿದ್ದರೂ ಯುಎನ್​ಎಸ್​ಸಿಯಲ್ಲಿ ಕೋವಿಡ್​-19 ಕುರಿತಾದ ಒಂದೇ ಒಂದು ಗೊತ್ತುವಳಿಯನ್ನು ಅಂಗೀಕರಿಸಲಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಕುರಿತಾದ ಅಮೆರಿಕ ಹಾಗೂ ಚೀನಾ ನಡುವಿನ ಜಟಾಪಟಿಯೇ ಇದಕ್ಕೆಲ್ಲ ಕಾರಣ ಎನ್ನಲಾಗಿದೆ.

UNSC President Estonia calls Security Council's handling of COVID-19 'a shame'

author img

By

Published : May 2, 2020, 7:26 PM IST

ವಿಶ್ವಸಂಸ್ಥೆ: ಕೋವಿಡ್​-19 ತಡೆಗಟ್ಟುವಲ್ಲಿ ಅತ್ಯಂತ ಪ್ರಬಲ ಸಂಸ್ಥೆಯಾದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್​ಎಸ್​ಸಿ) ಕಾರ್ಯ ನಾಚಿಕೆಗೇಡಿತನದ್ದಾಗಿದೆ. ಈ ಕುರಿತು ಗೊತ್ತುವಳಿ ಅಂಗೀಕರಿಸಲು ಅಡ್ಡಿಯುಂಟುಮಾಡಿದ್ದು ಖಂಡನೀಯ ಎಂದು ಮೇ ತಿಂಗಳಿಗಾಗಿ ಯುಎನ್​ಎಸ್​ಸಿ ಅಧ್ಯಕ್ಷ ರಾಷ್ಟ್ರವಾದ ಎಸ್ತೋನಿಯಾ ಉಗ್ರವಾಗಿ ಪ್ರತಿಕ್ರಿಯಿಸಿದೆ.

"ನಾವು ಈ ವಿಷಯದಲ್ಲಿ ನಾಯಕತ್ವ ವಹಿಸಲು ವಿಫಲವಾಗಿದ್ದು ನಾಚಿಕೆಗೇಡಿತನವಾಗಿದೆ. ಇದಕ್ಕೆ ಹಲವಾರು ನಿರ್ದಿಷ್ಟ ಕಾರಣಗಳಿವೆ. ಆದರೆ, ಯುಎನ್​ಎಸ್​ಸಿ ಸೂಕ್ತ ನಿರ್ಧಾರ ತಳೆಯುವಂತೆ ನಾವು ಕಳೆದ ಒಂದು ತಿಂಗಳಿನಿಂದ ಒತ್ತಾಯ ಮಾಡುತ್ತಿದ್ದೆವು." ಎಂದು ಎಸ್ತೋನಿಯಾ ರಿಪಬ್ಲಿಕ್​ನ ಯುಎನ್​ಎಸ್​ಸಿ ಶಾಶ್ವತ ಪ್ರತಿನಿಧಿ ರಾಯಭಾರಿ ಸ್ವೆನ್ ಜರ್ಗೆನ್ಸನ್ ಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸ್​ ಮೂಲಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಎರಡರಿಂದ ಮೂರು ವಾರಗಳ ಮುನ್ನವೇ ಕೋವಿಡ್​-19 ಕುರಿತಾದ ಗೊತ್ತುವಳಿಯನ್ನು ಯುಎನ್​ಎಸ್​ಸಿ ಅಂಗೀಕರಿಸಬೇಕಿತ್ತು. ಆದಾಗ್ಯೂ ಈಗ ಅಥವಾ ಮುಂದಿನ ವಾರವಾದರೂ ಇದು ನಡೆಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

"ಭದ್ರತಾ ಮಂಡಳಿಯ ಕೆಲ ಸದಸ್ಯ ರಾಷ್ಟ್ರಗಳ ಮಧ್ಯೆ ರಾಜಕೀಯ ಭಿನ್ನಾಭಿಪ್ರಾಯಗಳಿವೆ. ಈ ಕುರಿತು ಚರ್ಚೆಗಳು ಮುಂದುವರೆದಿದ್ದು, ಸಮಸ್ಯೆಗಳು ಆದಷ್ಟು ಬೇಗ ನಿವಾರಣೆಯಾಗುವ ವಿಶ್ವಾಸವಿದೆ." ಎಂದು ಅವರು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.