ETV Bharat / international

ಉಕ್ರೇನ್‌ ಮಾನವೀಯ ಪರಿಸ್ಥಿತಿ: ರಷ್ಯಾ ನಡೆಸಿದ ಮತದಾನದಿಂದಲೂ ದೂರ ಉಳಿದ ಭಾರತ - ಮತ ಚಲಾಯಿಸಿದರೆ ದೂರ ಇಳಿದ ಭಾರತ ಭಾರತ

ಬುಧವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್‌ನಲ್ಲಿನ ಮಾನವೀಯ ಬಿಕ್ಕಟ್ಟಿನ ಕುರಿತು ರಷ್ಯಾ ಕೈಗೊಂಡ ಕರಡು ನಿರ್ಣಯದ ಮೇಲಿನ ಮತದಾನದಲ್ಲಿ ಭಾರತ ಗೈರು ಹಾಜರಾಗಿದೆ. ರಷ್ಯಾ ಮತ್ತು ಚೀನಾ ನಿರ್ಣಯದ ಪರವಾಗಿ ಮತ ಚಲಾಯಿಸಿದರೆ ಭಾರತ ಸೇರಿದಂತೆ 13 ದೇಶಗಳು ಗೈರುಹಾಜರಾಗಿದ್ದವು .

ವಿಶ್ವಸಂಸ್ಥೆ
ವಿಶ್ವಸಂಸ್ಥೆ
author img

By

Published : Mar 24, 2022, 7:32 AM IST

ವಿಶ್ವಸಂಸ್ಥೆ: 15 ಸದಸ್ಯರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್‌ನಲ್ಲಿನ ಮಾನವೀಯ ಪರಿಸ್ಥಿತಿಯ ಕುರಿತಾದ ನಿರ್ಣಯವನ್ನು ಅಂಗೀಕರಿಸಲು ವಿಫಲವಾಯಿತು. ಇಬ್ಬರು ಸದಸ್ಯರು (ರಷ್ಯಾ ಮತ್ತು ಚೀನಾ) ರಷ್ಯಾದ ಕರಡು ನಿರ್ಣಯದ ಪರವಾಗಿ ಮತ ಚಲಾಯಿಸಿದರು. 13 ಇತರ ರಾಷ್ಟ್ರಗಳು ಮತದಾನದಿಂದ ದೂರವಿದ್ದವು. ರಷ್ಯಾ ಸಲ್ಲಿಸಿದ ಕರಡನ್ನು ತಿರಸ್ಕರಿಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬುಧವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್‌ನಲ್ಲಿನ ಮಾನವೀಯ ಬಿಕ್ಕಟ್ಟಿನ ಕುರಿತು ರಷ್ಯಾ ಕೈಗೊಂಡ ಕರಡು ನಿರ್ಣಯದ ಮೇಲಿನ ಮತದಾನದಲ್ಲಿ ಭಾರತ ಗೈರು ಹಾಜರಾಗಿದೆ. ರಷ್ಯಾ ಮತ್ತು ಚೀನಾ ನಿರ್ಣಯದ ಪರವಾಗಿ ಮತ ಚಲಾಯಿಸಿದರೆ ಭಾರತ ಸೇರಿದಂತೆ 13 ದೇಶಗಳು ಗೈರುಹಾಜರಾಗಿದ್ದವು ಎಂದು ತಿಳಿದುಬಂದಿದೆ.

ರಷ್ಯಾದ ಕರಡು ನಿರ್ಣಯವು ನಾಗರಿಕ ಸಾವು- ನೋವುಗಳ ವರದಿಗಳು, ಉಕ್ರೇನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹದಗೆಡುತ್ತಿರುವ ಮಾನವೀಯ ಪರಿಸ್ಥಿತಿಯ ಬಗ್ಗೆ ಗಂಭೀರ ಕಳವಳವನ್ನು ವ್ಯಕ್ತಪಡಿಸುತ್ತಿದೆ. ಅಷ್ಟೇ ಅಲ್ಲದೆ, ಉಕ್ರೇನ್​ನಲ್ಲಿ ಯುದ್ಧದ ಭೀತಿಯಿಂದ ಸ್ಥಳಾಂತರಗೊಂಡ ವ್ಯಕ್ತಿಗಳು ಮತ್ತು ನಿರಾಶ್ರಿತರ ಸಂಖ್ಯೆ ಸಹ ಹೆಚ್ಚುತ್ತಿದೆ. ಮಾತುಕತೆಯ ಕದನ ವಿರಾಮಕ್ಕೆ ಕರೆ ನೀಡಬೇಕೆಂದು ಒತ್ತಾಯಿಸುತ್ತದೆ.

ಫೆಬ್ರವರಿ 28, ಮಾರ್ಚ್ 7 ಮತ್ತು ಮಾರ್ಚ್ 17 ರಂದು ಕ್ರಮವಾಗಿ ಉಕ್ರೇನ್​ನಲ್ಲಿ ಭಾರಿ ಬಾಂಬ್ ಸ್ಫೋಟ ಸಂಭವಿಸಿದ ಹಿನ್ನೆಲೆ ಉಕ್ರೇನ್‌ನಲ್ಲಿನ ಮಾನವೀಯ ಪರಿಸ್ಥಿತಿಯ ಕುರಿತು ಕೌನ್ಸಿಲ್ ಸಂಕ್ಷಿಪ್ತವಾಗಿ ಮೂರು ಸಭೆ ನಡೆಸಿದೆ.

ಇದನ್ನೂ ಓದಿ; ಸರ್ಕಾರಿ ಶಾಲೆಯಲ್ಲಿ ಹೊಸ ಪ್ರಯೋಗ.. ಮೊದಲ ಬಾರಿಗೆ ಪಾಠ ಮಾಡಲು ಬಂದ ರೋಬೋ ಮೇಡಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.