ಕೀವ್,ಉಕ್ರೇನ್: ರಷ್ಯಾದ ಪಡೆಗಳು ಉಕ್ರೇನ್ ಮೇಲಿನ ದಾಳಿಯನ್ನು ಮುಂದುವರೆಸಿದ್ದು, ಉಕ್ರೇನ್ ನಾಗರಿಕರನ್ನು ಮನೆಗಳಿಂದ ಹೊರದಬ್ಬಿ ರಷ್ಯಾ ಸೈನಿಕರು ಆಹಾರವನ್ನು ಕದಿಯುತ್ತಿದ್ದಾರೆ ಎಂದು ಸುಮಿ ರಾಜ್ಯದ ಗವರ್ನರ್ ಡಿಮಿಟ್ರೋ ಝೈವಿಟ್ಸ್ಕಿ ಆರೋಪಿಸಿದ್ದಾರೆ. ಮಾರ್ಚ್ 16 ರಂದು ಟೆಲಿಗ್ರಾಮ್ ಮೂಲಕ ಲೂಟಿಯ ಬಗ್ಗೆ ವಿವರವಾದ ಮಾಹಿತಿ ನೀಡಿದ ಡಿಮಿಟ್ರೋ ಝೈವಿಟ್ಸ್ಕಿ ರಷ್ಯಾ ಸೈನಿಕರ ಅಟ್ಟಹಾಸದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ದಿ ಕೀವ್ ಇಂಡಿಪೆಂಡೆಂಟ್ ವರದಿ ಮಾಡಿದೆ.
ಫೆಬ್ರವರಿ 24ರಂದು ಉಕ್ರೇನ್‌ನಲ್ಲಿ ರಷ್ಯಾದ ಪಡೆಗಳು ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಉಕ್ರೇನ್‌ನಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಲು ರಷ್ಯಾದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡವಿದೆ. ಉಕ್ರೇನ್ ನೆರವಿಗೆ ಸಾಕಷ್ಟು ಐರೋಪ್ಯ ರಾಷ್ಟ್ರಗಳು ನಿಂತಿವೆ. ಉಕ್ರೇನ್ನ ನಿರಾಶ್ರಿತರು ಪಕ್ಕದ ರಾಷ್ಟ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
-
⚡️Reports of Russian forces in Sumy Oblast evicting civilians from homes, stealing food.
— The Kyiv Independent (@KyivIndependent) March 17, 2022 " class="align-text-top noRightClick twitterSection" data="
Sumy governor Dmytro Zhyvytsky detailed the looting via Telegram on March 16.
The area has sustained heavy fighting since the start of Russia’s all-out invasion on Feb. 24.
">⚡️Reports of Russian forces in Sumy Oblast evicting civilians from homes, stealing food.
— The Kyiv Independent (@KyivIndependent) March 17, 2022
Sumy governor Dmytro Zhyvytsky detailed the looting via Telegram on March 16.
The area has sustained heavy fighting since the start of Russia’s all-out invasion on Feb. 24.⚡️Reports of Russian forces in Sumy Oblast evicting civilians from homes, stealing food.
— The Kyiv Independent (@KyivIndependent) March 17, 2022
Sumy governor Dmytro Zhyvytsky detailed the looting via Telegram on March 16.
The area has sustained heavy fighting since the start of Russia’s all-out invasion on Feb. 24.
ಇದನ್ನೂ ಓದಿ: ರಷ್ಯಾ - ಉಕ್ರೇನ್ ಯುದ್ಧ: ಕೀವ್ಗೆ ಅಮೆರಿಕ ನೀಡುತ್ತಿರುವ ಮಿಲಿಟರಿ ಉಪಕರಣಗಳ ಸಹಾಯ ಹೇಗಿದೇ ಗೊತ್ತಾ!?
ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯವು ಉಕ್ರೇನ್ ಪ್ರದೇಶದಲ್ಲಿ ಪ್ರಾರಂಭಿಸಿದ ಮಿಲಿಟರಿ ಕಾರ್ಯಾಚರಣೆಯನ್ನು ರಷ್ಯಾ ನಿಲ್ಲಿಸಬೇಕೆಂದು ತೀರ್ಪು ನೀಡಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಮಾನವೀಯ ಬಿಕ್ಕಟ್ಟಿನ ಕುರಿತು ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಗುರುವಾರ ಮಧ್ಯಾಹ್ನ 3 ಗಂಟೆಗೆ ಸಭೆ ನಡೆಸಲಿದೆ.