ETV Bharat / international

ಉಕ್ರೇನ್​-ರಷ್ಯಾ ಸಂಘರ್ಷ: 80 ನಾಗರಿಕರು ಉಳಿದುಕೊಂಡಿದ್ದ ಮಸೀದಿ ಮೇಲೆ ರಷ್ಯಾ ಬಾಂಬ್ ದಾಳಿ - Russian military shelled a mosque

Russia-Ukraine Conflict: ರಷ್ಯಾ ಮಿಲಿಟರಿ ದಾಳಿಗೆ ಉಕ್ರೇನ್​​ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದು, ಕೀವ್​, ಖಾರ್ಕಿವ್​, ಸುಮಿ ಸೇರಿದಂತೆ ಪ್ರಮುಖ ನಗರಗಳು ಬಹುತೇಕ ಧ್ವಂಸಗೊಂಡಿವೆ. ಇದೀಗ ಮರಿಯುಪೋಲ್ ಮೇಲೆ ಮಿಲಿಟರಿ ದಾಳಿ ನಡೆಸಿರುವ ರಷ್ಯಾ ಅಲ್ಲಿನ ಮಸೀದಿ ಮೇಲೆ ಬಾಂಬ್ ದಾಳಿ ನಡೆಸಿದೆ.

Russian military shelled a mosque
Russian military shelled a mosque
author img

By

Published : Mar 12, 2022, 3:57 PM IST

ಮರಿಯುಪೋಲ್​​(ಉಕ್ರೇನ್​): ಉಕ್ರೇನ್​​-ರಷ್ಯಾ ನಡುವಿನ ಸಂಘರ್ಷ ಮುಂದುವರೆದಿದ್ದು, ರಷ್ಯಾ ಮಿಲಿಟರಿ ಪಡೆಗಳು ನಡೆಸುತ್ತಿರುವ ಬಾಂಬ್​ ದಾಳಿಯಲ್ಲಿ ಸಾವಿರಾರು ಅಮಾಯಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಉಕ್ರೇನ್​​ನ ಮರಿಯುಪೋಲ್​​ನ ಮಸೀದಿವೊಂದರ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ.

ಸುಮಾರು 80 ಜನರು ಉಳಿದುಕೊಂಡಿದ್ದ ಮರಿಯುಪೋಲ್​​ನ ಮಸೀದಿ ಮೇಲೆ ರಷ್ಯಾ ಪಡೆಗಳು ಬಾಂಬ್ ದಾಳಿ ನಡೆಸಿವೆ ಎಂದು ಉಕ್ರೇನ್​ ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ.

ಈ ಮಸೀದಿಯಲ್ಲಿ ಟರ್ಕಿ ಸೇರಿದಂತೆ ವಿವಿಧ ದೇಶದ ಮಕ್ಕಳು ಸೇರಿದಂತೆ 80ಕ್ಕೂ ಹೆಚ್ಚು ಜನರು ಅಡಗಿಕೊಂಡಿದ್ದರರು. ದಾಳಿಯಿಂದಾಗಿ ಕೆಲವರು ತಮ್ಮ ಪ್ರಾಣ ಕಳೆದುಕೊಂಡಿರುವ ಶಂಕೆ ಇದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿರಿ: Russia-Ukraine Conflict : ಯುದ್ಧದಲ್ಲೂ ಕಾರ್ಯನಿರ್ವಹಿಸುತ್ತಿವೆ ಉಕ್ರೇನ್​ನ ಬ್ಯಾಂಕ್​ಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.