ETV Bharat / international

ಉಕ್ರೇನ್​ನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ವೆಬ್​ಸೈಟ್​ ಅನಾವರಣ - ಉಕ್ರೇನ್​ನಿಂದ ವೆಬ್​ಸೈಟ್ ಬಿಡುಗಡೆ

ಬೇರೆ ದೇಶಗಳಿಗೆ ಪರಿಶೀಲಿಸಿದ ಮಾಹಿತಿಯನ್ನು ಒದಗಿಸುವ ಸಲುವಾಗಿ ಉಕ್ರೇನ್ ವೆಬ್​ಸೈಟ್ ಅನ್ನು ಆರಂಭಿಸಿದ್ದು, ಉಕ್ರೇನ್ ಅನ್ನು ಬೆಂಬಲಿಸುವ ಮತ್ತು ಯುದ್ಧ ವಿರೋಧಿ ಆಯಾಮವನ್ನು ವೆಬ್​ಸೈಟ್​ನಲ್ಲಿ ಹಂಚಿಕೊಳ್ಳುವುದಾಗಿ ಹೇಳಿಕೊಂಡಿದೆ.

Ukraine Russia conflict: Ukraine launches information platform for foreign audience about country's ongoing situation
ಉಕ್ರೇನ್​ನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ವೆಬ್​ಸೈಟ್​ ಅನಾವರಣ
author img

By

Published : Mar 2, 2022, 10:57 PM IST

ಕೀವ್, ಉಕ್ರೇನ್: ರಷ್ಯಾ ಸೇನಾ ಕಾರ್ಯಾಚರಣೆಯಿಂದಾಗಿ ಉಕ್ರೇನ್​ನಲ್ಲಿ ಉದ್ವಿಗ್ನತೆ ಆವರಿಸಿದೆ. ಉಕ್ರೇನ್​​ನ ಸದ್ಯದ ಪರಿಸ್ಥಿತಿ ಕುರಿತಂತೆ ವಿದೇಶಿಗರಿಗೆ ಮಾಹಿತಿ ನೀಡಲು ವೆಬ್​​ಸೈಟ್ ಅನ್ನು ಉಕ್ರೇನ್​ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆರಂಭಿಸಿದ್ದು, ಈ ವೆಬ್​ಸೈಟ್ ಮೂಲಕ ಪರಿಶೀಲಿಸಿದ ಮಾಹಿತಿಯನ್ನು ಒದಗಿಸಲಾಗುತ್ತದೆ ಎಂದು ಉಕ್ರೇನ್ ಹೇಳಿಕೊಂಡಿದೆ.

ಬುಧವಾರ ಟ್ವಿಟರ್​ನಲ್ಲಿ ಈ ಕುರಿತು ಉಕ್ರೇನ್​​ನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಾಹಿತಿ ನೀಡಿದ್ದು, ಉಕ್ರೇನ್ ಅನ್ನು ಬೆಂಬಲಿಸುವ ಮತ್ತು ಯುದ್ಧ ವಿರೋಧಿ ಆಯಾಮವನ್ನು http://war.ukraine.ua ವೆಬ್​ಸೈಟ್​ನಲ್ಲಿ ಹಂಚಿಕೊಳ್ಳಲಾಗುತ್ತದೆ ಎಂದು ಹೇಳಿಕೊಂಡಿದೆ.

ಪ್ರಸ್ತುತ ರಷ್ಯಾದ ಕ್ಷಿಪಣಿಗಳು ಉಕ್ರೇನ್​​ನ ಖಾರ್ಕಿವ್‌ ನಗರಕ್ಕೆ ಅಪ್ಪಳಿಸಿ ಸಿಟಿ ಕೌನ್ಸಿಲ್ ಕಟ್ಟಡ, ಲೇಬರ್ಸ್​ ಪ್ಯಾಲೇಸ್ ಮತ್ತು ಬಹುಮಹಡಿ ಕಟ್ಟಡಗಳನ್ನು ಹಾನಿಗೊಳಿಸಲಾಗಿದೆ ಎಂದು ಕೀವ್ ಇಂಡಿಪೆಂಡೆಂಟ್ ಟ್ವೀಟ್​ನಲ್ಲಿ ತಿಳಿಸಿದೆ. ಈಗಾಗಲೇ ಹಲವು ನಗರಗಳನ್ನು ತೊರೆಯಲು ಜನರಿಗೆ ರಷ್ಯಾ ಸೂಚನೆ ನೀಡಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಇಗೊರ್ ಕೊನಾಶೆಂಕೋವ್ ಹೇಳಿದ್ದಾರೆ.

ಇದನ್ನೂ ಓದಿ: ಪೋಷಕರ ಸಂತಸಕ್ಕೆ ಪಾರವೇ ಇಲ್ಲ.. ಉಕ್ರೇನ್​​ನಿಂದ ಬಂದ ಮಕ್ಕಳನ್ನ ತಬ್ಬಿ ಕಣ್ಣೀರಿಟ್ಟ ಕುಟುಂಬಸ್ಥರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.