ETV Bharat / international

ಕೋವಿಡ್ ಸೋಂಕಿತನ ಸಂಪರ್ಕ.. ಐಸೋಲೇಶ್​​​ನ್​​​ಗೆ ಒಳಗಾದ ಯುಕೆ​​ ಪ್ರಧಾನಿ ಬೋರಿಸ್ ಜಾನ್ಸನ್.. - Rishi Sunak

ಆರೋಗ್ಯ ಕಾರ್ಯದರ್ಶಿ ಸಾಜಿದ್ ಕೋವಿಡ್ ದೃಢಪಡುವ ಹಿಂದಿನ ದಿನ ಪ್ರಧಾನಿ ಹಾಗೂ ಇತರೆ ಸಚಿವರ ಜೊತೆ ಸಭೆ ನಡೆಸಿದ್ದರು. ಇದಾದ ಬಳಿಕ ಅವರಲ್ಲಿ ಕೋವಿಡ್ ಲಕ್ಷಣಗಳು ಕಂಡು ಬಂದು ಪರೀಕ್ಷೆಗೆ ಒಳಗಾಗಿದ್ದರು..

uk-pm
ಯುಕೆ​​ ಪ್ರಧಾನಿ ಬೋರಿಸ್ ಜಾನ್ಸನ್
author img

By

Published : Jul 18, 2021, 9:10 PM IST

ಲಂಡನ್ : ಇಂಗ್ಲೆಂಡ್ ಪ್ರಧಾನಿ ಬೋರಿಸ್​ ಜಾನ್ಸನ್ ಹಾಗೂ ಚಾನ್ಸಲರ್ ರಿಷಿ ಸುನಕ್ ಕೋವಿಡ್ ಸೋಂಕಿತನ ಸಂಪರ್ಕಕ್ಕೆ ಬಂದ ಹಿನ್ನೆಲೆ ಐಸೋಲೇಷನ್​​ಗೆ ಒಳಗಾಗಿದ್ದಾರೆ. ಅಲ್ಲದೆ ಟೆಸ್ಟಿಂಗ್ ಬಳಿಕ ಪ್ರಧಾನಿ ಜಾನ್ಸನ್ ಹಾಗೂ ಸುನಕ್ ಇಬ್ಬರೂ ದೈನಂದಿನ ಕಚೇರಿ ಕಾರ್ಯಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಡೌನಿಂಗ್ ಸ್ಟ್ರೀಟ್ ಹೌಸ್ ತಿಳಿಸಿತ್ತು. ಆದರೆ, ಬಳಿಕ ಅವರಿಬ್ಬರು ಯಾವುದೇ ಕಚೇರಿ ಕಾರ್ಯಗಳಲ್ಲೂ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಅಲ್ಲದೆ ಪ್ರಧಾನಿಯು ರಾಷ್ಟ್ರೀಯ ಆರೋಗ್ಯ ಸೇವೆ (NHS) ಪರೀಕ್ಷೆ ಮತ್ತು ಟ್ರೇಸಿಂಗ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಈ ಮೂಲಕ ಅವರಿಗೆ ಯಾರಿಂದ ಸೋಂಕು ಹರಡಿದೆ ಎಂಬ ಪತ್ತೆಗೆ ಮುಂದಾಗಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಜೊತೆಗೆ ಅವರ ನಿವಾಸ ಚೆಕ್ಕರ್ಸ್​ನಲ್ಲಿ ಟೆಸ್ಟ್ ಆ್ಯಂಡ್ ಟ್ರೇಸಿಂಗ್ ಪರೀಕ್ಷೆ ನಡೆಸಲಾಗುತ್ತದೆ. ಅಲ್ಲಿಯೇ ಅವರು ಐಸೋಲೇಷನ್​ಗೆ ಒಳಗಾಗಲಿದ್ದಾರೆ. ದೂರದಿಂದಲೇ ಸಚಿವರೊಂದೊಗೆ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಅಂತಲೂ ಮಾಹಿತಿ ನೀಡಿದೆ.

ಇದಕ್ಕೂ ಮೊದಲು ಯುಕೆ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್​ಗೂ ಸಹ ಕೋವಿಡ್ ದೃಢವಾಗಿತ್ತು. ಈ ಕುರಿತು ಟ್ವಿಟರ್​​ನಲ್ಲಿ ಮಾಹಿತಿ ನೀಡಿದ ಅವರು, ಐಸೋಲೇಷನ್​ಗೆ ಒಳಗಾಗಿರುವುದಾಗಿ ಮಾಹಿತಿ ನೀಡಿದ್ದರು. ಇದು ಸಚಿವಾಲಯದ ಇತರೆ ಸಚಿವರಿಗೂ ಆತಂಕ ತಂದೊಡ್ಡಿತ್ತು.

ಆರೋಗ್ಯ ಕಾರ್ಯದರ್ಶಿ ಸಾಜಿದ್ ಕೋವಿಡ್ ದೃಢಪಡುವ ಹಿಂದಿನ ದಿನ ಪ್ರಧಾನಿ ಹಾಗೂ ಇತರೆ ಸಚಿವರ ಜೊತೆ ಸಭೆ ನಡೆಸಿದ್ದರು. ಇದಾದ ಬಳಿಕ ಅವರಲ್ಲಿ ಕೋವಿಡ್ ಲಕ್ಷಣಗಳು ಕಂಡು ಬಂದು ಪರೀಕ್ಷೆಗೆ ಒಳಗಾಗಿದ್ದರು.

ಓದಿ: ಕೋವಿಡ್‌ ಬೆನ್ನಲ್ಲೇ ಚೀನಾದಲ್ಲಿ ಮತ್ತೊಂದು ರೋಗ ಪತ್ತೆ: 'ಮಂಕಿ ಬಿ ವೈರಸ್'​ಗೆ ಮೊದಲ ಮಾನವ ಬಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.