ಮನಿಲಾ: ಫಿಲಿಪೈನ್ಸ್‌ನಲ್ಲಿ ಅಪ್ಪಳಿಸಿರುವ ಭೀಕರ ಮೊಲೇವ್ ಚಂಡಮಾರುತದಿಂದ ಸಾವು-ನೋವುಗಳ ಸಂಖ್ಯೆ ಹೆಚ್ಚಾಗಿದೆ. ನಾಪತ್ತೆಯಾದವರ ಸಂಖ್ಯೆಯಲ್ಲಿಯೂ ಸಹ ಹೆಚ್ಚಾಗಿದೆ ಎಂದು ಅಲ್ಲಿನ ಸರ್ಕಾರಿ ವಿಪತ್ತು ಸಂಸ್ಥೆ ಶುಕ್ರವಾರ ತಿಳಿಸಿದೆ.
ಭೀಕರ ಮೊಲೇವ್ ಚಂಡಮಾರುತದಿಂದ ಸಾವನ್ನಪ್ಪಿದವರ ಸಂಖ್ಯೆ 22ಕ್ಕೆ ಏರಿಕೆಯಾಗಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ ಮತ್ತು 39 ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರಿ ವಿಪತ್ತು ಸಂಸ್ಥೆ ತಿಳಿಸಿದೆ. ಮತ್ತೊಂದು ಚಂಡಮಾರುತವು ಇದಕ್ಕೆ ಸೇರ್ಪಡೆಯಾಗಲಿದೆ ಎಂದು ಎಚ್ಚರಕೆ ನೀಡಿದೆ.
ಮೊಲೇವ್ ಚೆಂಡಮಾರುತದಿಂದ ಈಗಾಗಲೇ ಸಾಕಷ್ಟು ಹಾನಿ ಸಂಭವಿಸಿದ್ದು, ಸಂತ್ರಸ್ಥರನ್ನು ರಕ್ಷಿಸಿ ಸ್ಥಳಾಂತರ ಮಾಡಲಾಗಿದೆ ಎಂದು ವಿಯೆಟ್ನಾಂ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಈ ವರ್ಷ ಫಿಲಿಪ್ಪೀನ್ಸ್ನಲ್ಲಿ ಉಂಟಾದ 17ನೇ ಚಂಡಮಾರುತ ಇದಾಗಿದ್ದು, ರಾಜಧಾನಿ ಮನಿಲಾ ಸೇರಿದಂತೆ 775,513 ಜನರನ್ನು ಸ್ಥಳಾಂತರಿಸಿದೆ ಎಂದು ಹೇಳಿದೆ.
ನಾಪತ್ತೆಯಾದವರನ್ನು ಮತ್ತು ಚಂಡಮಾರುತದಲ್ಲಿ ಸಿಲುಕಿದವರ ಸಂತ್ರಸ್ಥರನ್ನು ರಕ್ಷಿಸುವ ತನ್ನ ಕಾರ್ಯವನ್ನು ಮುಂದುವರೆಸಿರುವ ಫಿಲಿಪೈನ್ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಮಂಡಳಿ (ಎನ್‌ಡಿಆರ್‌ಆರ್‌ಎಂಸಿ) ಭೀಕರ ಗಾಳಿ ಮತ್ತು ಮಳೆಯಿಂದಾಗಿ ಬೆಳೆಗಳು ಮತ್ತು ಮೂಲಸೌಕರ್ಯಗಳ ಮೇಲೆ ವ್ಯಾಪಕ ಪರಿಣಾಮ ಬೀರಿದೆ ಎಂದು ತಿಳಿಸಿದೆ.
ಭಾನುವಾರ ರಾತ್ರಿ ದೇಶದ ಪೂರ್ವ ಕರಾವಳಿಯಲ್ಲಿ ಅಪ್ಪಳಿಸಿದ ಭೀಕರ ಚಂಡಮಾರುತ ಪರಿಣಾಮ ಹಲವು ಮರಗಳು ಮತ್ತು ವಿದ್ಯುತ್ ತಂತಿಗಳನ್ನು ಧರೆಗುರುಳಿವೆ. ಹಲವೆಡೆ ಭೂ-ಕುಸಿತ ಸಂಭವಿಸಿದೆ. ಭಾರಿ ಪ್ರಮಾಣದ ಪ್ರವಾಹದಿಂದ ಫಿಲಿಪ್ಪೀನ್ಸ್ ದೇಶವು ತತ್ತರಿಸಿ ಹೋಗಿದೆ. ಮುದ್ರದ ಮೇಲೆ ಹಾದುಹೋಗುವ ಚಂಡಮಾರುತ ಮೊಲೇವ್, ಭಾನುವಾರ ರಾತ್ರಿ ಅಥವಾ ಸೋಮವಾರ ಬೆಳಗ್ಗೆ ಲೂಝನ್ ದ್ವೀಪದ ಪೂರ್ವ ತೀರದಲ್ಲಿ ಭಾರಿ ಪ್ರಮಾಣದಲ್ಲಿ ಭೂ ಕುಸಿತವನ್ನು ಉಂಟು ಮಾಡಬಹುದು ಎಂದು ಇಲ್ಲಿನ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸುಮಾರು 20 ವರ್ಷಗಳಲ್ಲೇ ಇದು ಭೀಕರ ಚಂಡಮಾರುತವಾಗಿದೆ ಎಂದು ತಿಳಿಸಿರುವ ಅಲ್ಲಿನ ಅಧಿಕಾರಿಗಳು, ಚಂಡಮಾರುತದ ಭೀಕರತೆಯಿಂದಾಗಿ ಸಂಭವಿಸಿದ ಆಸ್ತಿ-ಪಾಸ್ತಿ ಹಾಗೂ ಪ್ರಾಣ ಹಾನಿಯ ಬಗ್ಗೆ ನಿಖರ ವರದಿಯಾಗಿಲ್ಲ.