ಕಾಮಿ ವೆಲ್ ಡೇ ಕಾಸ್ಟಿಕ್ಸ್: ಸ್ಪ್ಯಾನಿಷ್ ದ್ವೀಪವಾದ ಮಲ್ಲೋರ್ಕಾದಲ್ಲಿ ದೃಶ್ಯ ವೀಕ್ಷಣೆಯ ಹೆಲಿಕಾಪ್ಟರ್ ಮತ್ತು ಸಣ್ಣ ವಿಮಾನದ ನಡುವೆ ಡಿಕ್ಕಿಯಾಗಿದ್ದು, ಏಳು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತಪಟ್ಟವರಲ್ಲಿ ಮೂವರು ವಯಸ್ಕರು ಮತ್ತು ಇಬ್ಬರು ಮಕ್ಕಳು ಹೆಲಿಕಾಪ್ಟರ್ನಲ್ಲಿದ್ದವರಾಗಿದ್ದು, ಇನ್ನಿಬ್ಬರು ವಿಮಾನದಲ್ಲಿದ್ದರೆಂದು ಸ್ಪ್ಯಾನಿಷ್ ದ್ವೀಪದ ಸ್ಥಳೀಯ ಸರ್ಕಾರ ಟ್ವೀಟ್ ಮಾಡಿದೆ.
ಇನ್ನು ಅಪಘಾತದ ವೇಳೆ ವಿಮಾನದ ಒಂದು ಭಾಗ ಗ್ರಾಮೀಣ ಪ್ರದೇಶದ ಮನೆಗಳ ಬಳಿ ಬಿದ್ದಿದೆ ಎಂದು ಸ್ಪಾನಿಷ್ ಖಾಸಗಿ ವಾರ್ತಾ ಇಲಾಖೆ ತಿಳಿಸಿದೆ. ದೃಶ್ಯ ವೀಕ್ಷಣೆ ನಡೆಸುತ್ತಿದ್ದ ಹೆಲಿಕಾಪ್ಟರ್ನಲ್ಲಿದ್ದವರಲ್ಲಿ ಒಬ್ಬ ಪ್ರಯಾಣಿಕ ಇಟಾಲಿಯನ್ ಆಗಿದ್ದು, ಸದ್ಯ ಈ ಬಗ್ಗೆ ಹೆಚ್ಚಿನ ಮಾಹಿತಿ ದೊರಕಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಸ್ಪೇನ್‌ನ ಉಸ್ತುವಾರಿ ಪ್ರಧಾನಿ ಪೆಡ್ರೊ ಸ್ಯಾಂಚೆ ನೊಂದ ಕುಟುಂಬಗಳಿಗೆ ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದು, ಅಪಘಾತದ ಬಗ್ಗೆ ಬೇಸರ ವ್ಯಕ್ತಪಡಿಸಿದರು.