- ಮೊದಲ ಸುತ್ತಿನ ಮಾತುಕತೆಯಲ್ಲಿ ಯಾವುದೇ ಸ್ಪಷ್ಟವಾದ ಫಲಿತಾಂಶ ದೊರೆಯದ ಹಿನ್ನೆಲೆ ರಷ್ಯಾ ಮತ್ತು ಉಕ್ರೇನ್ ನಡುವಿನ ಎರಡನೇ ಸುತ್ತಿನ ಮಾತುಕತೆ ಇಂದು ನಡೆಯಲಿದೆ. ಅಷ್ಟೇ ಅಲ್ಲದೆ ಉಕ್ರೇನ್ ವಿರುದ್ಧ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಖಾರ್ಕಿವ್‌ನಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ.
- ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ನ ವಸತಿ ಬ್ಲಾಕ್‌ನಲ್ಲಿ ನಿನ್ನೆ ಸಂಜೆ ಎಂಟು ಜನರು ಸಾವನ್ನಪ್ಪಿದ್ದಾರೆ. ಇನ್ನು ಕೀವ್‌ನ ಮುಖ್ಯ ದೂರದರ್ಶನ ಗೋಪುರವನ್ನು ಗುರಿಯಾಗಿಟ್ಟುಕೊಂಡು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಐದು ಮಂದಿ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ.
- ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಯುರೋಪ್ ಒಕ್ಕೂಟ ರಷ್ಯಾದ ವಿರುದ್ಧ ಹೋರಾಡಲು ಉಕ್ರೇನ್ ಪರವಾಗಿರುವುದನ್ನು ಸಾಬೀತುಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಯುರೋಪ್ ಒಕ್ಕೂಟ ನಮಗೆ ನೆರವು ನೀಡಲಿದ್ದು, ನಮ್ಮ ಸೈನ್ಯಕ್ಕೆ ಹೆಚ್ಚಿನ ಬಲ ಬಂದಿದೆ. ನಾವು ನಮ್ಮ ಭೂಮಿ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೇವೆ. ಯಾರೂ ನಮ್ಮನ್ನು ಸೋಲಿಸಲು ಅಗುವುದಿಲ್ಲ, ನಾವು ಬಲಶಾಲಿಯಾಗಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
- ರಷ್ಯಾದ ಆಕ್ರಮಣಕಾರಿ ನೀತಿಗೆ ಆದಷ್ಟು ಬೇಗ ಅಂತ್ಯ ಹಾಡುವುದು ಸೂಕ್ತ ಎಂದು ಝೆಲೆನ್ಸ್ಕಿ, ಯುಎಸ್ ಅಧ್ಯಕ್ಷ ಜೋ ಬೈಡನ್ ಅವರೊಂದಿಗಿನ ಫೋನ್ ಕರೆಯಲ್ಲಿ ಮಾತನಾಡಿದ್ದಾರೆ. ನಾನು US ಅಧ್ಯಕ್ಷರೊಂದಿಗೆ ಸಂವಾದ ನಡೆಸಿದ್ದು, ಉಕ್ರೇನ್‌ಗೆ ರಕ್ಷಣಾ ನೆರವು ನೀಡುವ ಕುರಿತು ಚರ್ಚಿಸಲಾಗಿದೆ ಎಂದು ಝೆಲೆನ್ಸ್ಕಿಟ್ವೀಟ್ ಮಾಡಿದ್ದಾರೆ.
- ಉಕ್ರೇನ್‌ನಲ್ಲಿ ಮಂಗಳವಾರ ನಡೆದ ಶೆಲ್ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ರಷ್ಯಾದ ಸೈನಿಕರು ಸರ್ಕಾರಿ ಕಟ್ಟಡ ಸ್ಫೋಟಿಸಿದಾಗ ಕರ್ನಾಟಕದ ಹಾವೇರಿಯ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
- ಯುಕೆ ಸರ್ಕಾರವು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್‌ನಲ್ಲಿರುವ ಅವರ ಕಮಾಂಡರ್‌ಗಳು ಕಠಿಣ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಜೊತೆಗೆ ಉಕ್ರೇನ್ ಮೇಲಿನ ರಷ್ಯಾ ಆಕ್ರಮಣವನ್ನು ಯುಗೊಸ್ಲಾವ್ ಸಂಘರ್ಷಗಳ ಕರಾಳ ದಿನಗಳಿಗೆ ಹೋಲಿಸಿದೆ.
- ಮಾಸ್ಕೋ ಗುರುವಾರ ತನ್ನ ಆಕ್ರಮಣವನ್ನು ಪ್ರಾರಂಭಿಸಿದ ನಂತರ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್, ರಷ್ಯಾದ ವಿರುದ್ಧ ಯುದ್ಧ ಅಪರಾಧ ತನಿಖೆ ಪ್ರಾರಂಭಿಸಿದೆ. ಇದುವರೆಗೆ 14 ಮಕ್ಕಳು ಸೇರಿದಂತೆ 350ಕ್ಕೂ ಹೆಚ್ಚು ನಾಗರಿಕರು ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಹೇಳಿದೆ.
- ನ್ಯಾಟೋ ವಿದೇಶಾಂಗ ಮಂತ್ರಿಗಳು ಶುಕ್ರವಾರ ಬ್ರಸೆಲ್ಸ್‌ನಲ್ಲಿ ರಷ್ಯಾದ ಉಕ್ರೇನ್ ಆಕ್ರಮಣದ ಕುರಿತು ತುರ್ತು ಮಾತುಕತೆ ನಡೆಸಲಿದ್ದಾರೆ ಎಂದು ಒಕ್ಕೂಟವು ಹೇಳಿಕೆಯಲ್ಲಿ ತಿಳಿಸಿದೆ. ಪುಟಿನ್ ದಾಳಿಗೆ ಆದೇಶಿಸಿದ ನಂತರ NATO ಮಿತ್ರರಾಷ್ಟ್ರಗಳು ತಮ್ಮ ಪೂರ್ವ ಪ್ರದೇಶವನ್ನು ಬಲಪಡಿಸಲು ಧಾವಿಸಿವೆ. ಆದರೆ, NATO ಸದಸ್ಯತ್ವ ಹೊಂದಿಲ್ಲದ ದೇಶಗಳು ತಟಸ್ಥವಾಗಿ ಉಳಿದಿವೆ.
- ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಸೋಮವಾರ 300 ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ಸುಮಾರು 4,000 ನಿರಾಶ್ರಿತರು ರೈಲಿನಲ್ಲಿ ಆಗಮಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಮತ್ತು ನೂರಾರು ಜನರಿಗೆ ನಗರದಲ್ಲಿ ತುರ್ತು ವಸತಿ ಒದಗಿಸಲಾಗಿದೆ.
Russia-Ukraine War: ರಷ್ಯಾ-ಉಕ್ರೇನ್ ಯುದ್ಧದ ಪ್ರಮುಖ ಬೆಳವಣಿಗೆಗಳು ಇಂತಿವೆ - ರಷ್ಯಾ ಉಕ್ರೇನ್ ಸಂಘರ್ಷ
ರಷ್ಯಾವು ಉಕ್ರೇನ್ ಮೇಲೆ ದಾಳಿ ಮುಂದುವರೆಸಿದೆ. ಇಂದು ಎರಡನೇ ಸುತ್ತಿನ ಮಾತುಕತೆ ನಡೆಯಲಿದ್ದು, ಇಲ್ಲಿಯ ವರೆಗೆ ನಡೆದ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ ನೋಡಿ.
![Russia-Ukraine War: ರಷ್ಯಾ-ಉಕ್ರೇನ್ ಯುದ್ಧದ ಪ್ರಮುಖ ಬೆಳವಣಿಗೆಗಳು ಇಂತಿವೆ ರಷ್ಯಾ-ಉಕ್ರೇನ್ ಯುದ್ಧ](https://etvbharatimages.akamaized.net/etvbharat/prod-images/768-512-14611337-thumbnail-3x2-lek.jpg?imwidth=3840)
ರಷ್ಯಾ-ಉಕ್ರೇನ್ ಯುದ್ಧ