ETV Bharat / international

ರಷ್ಯಾ ಕೋವಿಡ್​​-19 ಲಸಿಕೆ 2021 ಜನವರಿ ವೇಳೆಗೆ ಸಾರ್ವಜನಿಕರಿಗೆ ಲಭ್ಯ

ರಷ್ಯಾ ನಿನ್ನೆ ಅಧಿಕೃತವಾಗಿ ಘೋಷಿಸಿರುವ ಕೋವಿಡ್​​​-19 ಲಸಿಕೆ 2021 ಜನವರಿ ವೇಳೆಗೆ ಸಾರ್ವಜನಿಕರಿಗೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ರಷ್ಯಾ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

author img

By

Published : Aug 12, 2020, 12:26 PM IST

Russia COVID-19 vaccination
ಕೋವಿಡ್​​-19 ಲಸಿಕೆ

ಮಾಸ್ಕೋ (ರಷ್ಯಾ): ಕೊರೊನಾಗೆ ಲಸಿಕೆ ಕಂಡುಹಿಡಿಯಲಾಗಿದೆ ಎಂದು ಇದಕ್ಕೂ ಮುನ್ನ ಸುದ್ದಿ ಹರಿದಾಡುತ್ತಿದ್ದರೂ ಅಧಿಕೃತವಾಗಿ ಯಾವ ದೇಶ ಕೂಡಾ ಘೋಷಿಸಿರಲಿಲ್ಲ. ಆದರೆ ರಷ್ಯಾ ಕೊರೊನಾ ಲಸಿಕೆ ಕಂಡುಹಿಡಿದಿರುವುದಾಗಿ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್​ ನಿನ್ನೆ ಅಧಿಕೃತವಾಗಿ ಘೋಷಿಸಿದ್ದರು.

ರಷ್ಯಾ ಅಧಿಕೃತವಾಗಿ ನೋಂದಾಯಿಸಿಕೊಂಡಿರುವ ಕೋವಿಡ್​​-19 ಲಸಿಕೆ 2021 ಜನವರಿ ವೇಳೆಗೆ ಸಾರ್ವಜನಿಕರನ್ನು ತಲುಪುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಗಮಲೆಯಾ ಸಂಶೋಧನಾ ಸಂಸ್ಥೆ ಹಾಗೂ ರಷ್ಯಾ ರಕ್ಷಣಾ ಸಚಿವಾಲಯ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಲಸಿಕೆ ಶಿಕ್ಷಕರಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ಮೊದಲು ಲಭ್ಯವಾಗಲಿದೆ ಎಂದು ರಷ್ಯಾ ಆರೋಗ್ಯ ಮಂತ್ರಿ ಮೈಕಲ್ ಮುರಾಷ್ಕೊ ಹೇಳಿದ್ದಾರೆ.

ಈ ಲಸಿಕೆ ಹಂತ ಹಂತವಾಗಿ ಸಾರ್ವಜನಿಕರಿಗೆ ದೊರೆಯುವ ವ್ಯವಸ್ಥೆ ಮಾಡುತ್ತೇವೆ. ಆದರೆ ರೋಗಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ಹಾಗೂ ಮಕ್ಕಳ ಆರೋಗ್ಯದ ಜವಾಬ್ದಾರಿ ಹೊರಲಿರುವ ಶಿಕ್ಷಕರಿಗೆ ಮೊದಲು ಈ ಲಸಿಕೆ ಲಭ್ಯವಾಗಲಿದೆ. ಗಮೆಲಿಯಾ ಸಂಶೋಧನಾ ಸಂಸ್ಥೆ ಹಾಗೂ ಫಾರ್ಮಾಸ್ಯುಟಿಕಲ್ ಬಿನ್ನೋಫಾರ್ಮ್ ಜೆಎಸ್​​ಸಿ ಘಟಕಗಳನ್ನು ಈ ಲಸಿಕೆಯನ್ನು ತಯಾರಿಸಲು ಬಳಸಲಾಗುವುದು ಎಂದು ಮೈಕಲ್ ಮುರಾಷ್ಕೊ ಹೇಳಿದ್ದಾರೆ.

ರಷ್ಯಾದ 20 ರಾಜ್ಯಗಳಿಂದ ಒಟ್ಟು ಒಂದು ಬಿಲಿಯನ್ ಡೋಸ್ ಲಸಿಕೆಗೆ ಪ್ರಾಥಮಿಕ ಬೇಡಿಕೆ ಇದೆ. ವಿದೇಶಗಳಿಂದ ಕೂಡಾ ಲಸಿಕೆಗೆ ಬೇಡಿಕೆ ಬರುವ ಸಾಧ್ಯತೆ ಇದೆ. ವಿಶ್ವದ 5 ರಾಷ್ಟ್ರಗಳಿಗೆ ವಿದೇಶಿ ಪಾಲುದಾರಿಕೆ ಮೂಲಕ ನಾವು ಸುಮಾರು 500 ಮಿಲಿಯನ್ ಡೋಸ್ ಲಸಿಕೆಯನ್ನು ತಯಾರಿಸಲು ಸಿದ್ಧರಿದ್ದೇವೆ. ಇದರೊಂದಿಗೆ ನಾವು ಲಸಿಕೆಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನ ಕೂಡಾ ಮಾಡಲಿದ್ದೇವೆ ಎಂದು ರಷ್ಯಾ ನೇರ ಬಂಡವಾಳ ಹೂಡಿಕೆ ಮುಖ್ಯಸ್ಥ ಕಿರಿಲ್ ಡಿಮಿಟ್ರಿವ್ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.