ETV Bharat / international

ರಷ್ಯನ್ ಬೆಕ್ಕುಗಳಿಗೂ ನಿರ್ಬಂಧ ವಿಧಿಸಿದ ಫೆಡರೇಶನ್ ಇಂಟರ್ನ್ಯಾಷನಲ್ ಫೆಲೈನ್ - ಅಂತಾರಾಷ್ಟ್ರೀಯ ಬೆಕ್ಕು ಅಭಿಮಾನಿಗಳ ಸಮಾಜ

ಉಕ್ರೇನ್‌ ಮೇಲಿನ ರಷ್ಯಾದ ದಾಳಿಯನ್ನು ಖಂಡಿಸಿ ಫೆಡರೇಶನ್ ಇಂಟರ್ನ್ಯಾಷನಲ್ ಫೆಲೈನ್ (FIFe)ಮತ್ತು ಅಂತಾರಾಷ್ಟ್ರೀಯ ಬೆಕ್ಕು ಅಭಿಮಾನಿಗಳ ಸಂಘ ರಷ್ಯಾದ ಬೆಕ್ಕುಗಳ ಮೇಲೆ ನಿರ್ಬಂಧಗಳನ್ನು ಹೇರಿದೆ. ರಷ್ಯಾದಲ್ಲಿ ವಾಸಿಸುವ ಪ್ರದರ್ಶಕರಿಗೆ ಸೇರಿದ ಯಾವುದೇ ಬೆಕ್ಕು ರಷ್ಯಾದ ಹೊರಗಿನ ಯಾವುದೇ FIFe ಪ್ರದರ್ಶನದಲ್ಲಿ ಭಾಗವಹಿಸುವಂತಿಲ್ಲ ಎಂದು ಅದು ನಿರ್ಬಂಧ ವಿಧಿಸಿದೆ.

Restrictions imposed on Russian cats
ರಷ್ಯನ್ ಬೆಕ್ಕುಗಳಿಗೆ ನಿರ್ಬಂಧ
author img

By

Published : Mar 3, 2022, 12:24 PM IST

ಮಾಸ್ಕೋ (ರಷ್ಯಾ): ಉಕ್ರೇನ್‌ ಮೇಲಿನ ರಷ್ಯಾದ ದಾಳಿಯನ್ನು ಖಂಡಿಸಿ ಫೆಡರೇಶನ್ ಇಂಟರ್​​​ನ್ಯಾಷನಲ್​ ಫೆಲೈನ್ (FIFe)ಮತ್ತು ಅಂತಾರಾಷ್ಟ್ರೀಯ ಬೆಕ್ಕು ಅಭಿಮಾನಿಗಳ ಸಂಘ ರಷ್ಯಾದ ಬೆಕ್ಕುಗಳ ಮೇಲೆ ನಿರ್ಬಂಧಗಳನ್ನು ಹೇರಿದೆ.

ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ್ದು, ಹಲವು ಅಮಾಯಕ ನಾಗರಿಕರು ಈ ದಾಳಿಯಿಂದ ಪ್ರಾಣ ಬಿಟ್ಟಿದ್ದಾರೆ. ಜೊತೆಗೆ ತುಂಬಾ ಜನರು ಗಾಯಗೊಂಡಿದ್ದಾರೆ, ಮಾತ್ರವಲ್ಲದೇ ಲಕ್ಷಾಂತರ ಮಂದಿ ಉಕ್ರೇನಿಯನ್ನರು ಬಲವಂತವಾಗಿ ದೇಶವನ್ನು ತೊರೆಯುವಂತೆ ಮಾಡಲಾಗಿದೆ. ರಷ್ಯಾದ ಈ ನಡೆಯನ್ನು ಖಂಡಿಸಿ ನಾವು ರಷ್ಯಾದ ಸಾಕು ಬೆಕ್ಕುಗಳ ಮೇಲೆ ನಿರ್ಬಂಧ ಹೇರುತ್ತಿರುವುದಾಗಿ ಸಂಸ್ಥೆ ಹೇಳಿದೆ.

ಈ ನಿಟ್ಟಿನಲ್ಲಿ ಫೆಡರೇಶನ್ ಇಂಟರ್ನ್ಯಾಷನಲ್ ಫೆಲೈನ್ ಸಂಸ್ಥೆಗೆ ಸಂಬಂಧಪಟ್ಟಂತೆ, ರಷ್ಯಾದಲ್ಲಿ ವಾಸಿಸುವ ಪ್ರದರ್ಶಕರಿಗೆ ಸೇರಿದ ಯಾವುದೇ ಬೆಕ್ಕು ರಷ್ಯಾದ ಹೊರಗಿನ FIFe ಪ್ರದರ್ಶನದಲ್ಲಿ ಭಾಗವಹಿಸುವಂತಿಲ್ಲ ಎಂದು ಹೇಳಿದೆ. ಈ ನಿರ್ಬಂಧ ಮಾರ್ಚ್​ 1 ರಿಂದ ಮೇ 31ರ ವರೆಗೆ ಜಾರಿಯಲ್ಲಿರುವುದಾಗಿ ಸಂಸ್ಥೆ ಹೇಳಿದೆ. ಜೊತೆಗೆ ಸಂಸ್ಥೆಗೆ ಬರುವ ಆದಾಯದ ಒಂದಿಷ್ಟು ಭಾಗವನ್ನು ಉಕ್ರೇನಿಗರ ಸಹಾಯಕ್ಕೆ ಮೀಸಲಿಡುವುದಾಗಿ ಘೋಷಿಸಿದೆ.

ಫೆಬ್ರವರಿ 24 ರಂದು ರಷ್ಯಾ ಉಕ್ರೇನ್‌ ಮೇಲೆ ದಾಳಿ ಆರಂಭಿಸಿತ್ತು. ಇಂಗ್ಲೆಂಡ್​, ಅಮೆರಿಕ, ಕೆನಡಾ ಮತ್ತು ಯುರೋಪಿಯನ್ ಯೂನಿಯನ್ ಸೇರಿದಂತೆ ಹಲವಾರು ದೇಶಗಳು ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯನ್ನು ಖಂಡಿಸಿವೆ ಮತ್ತು ಮಾಸ್ಕೋ ಮೇಲೆ ನಿರ್ಬಂಧಗಳನ್ನು ವಿಧಿಸಿವೆ. ಈ ದೇಶಗಳು ರಷ್ಯಾದ ವಿರುದ್ಧ ಹೋರಾಡಲು ಮಿಲಿಟರಿ ನೆರವಿನೊಂದಿಗೆ ಸಹಾಯ ಮಾಡಲು ಉಕ್ರೇನ್‌ಗೆ ಭರವಸೆ ನೀಡಿವೆ. ಗಮನಾರ್ಹವಾಗಿ, ಯುಎಸ್, ಕೆನಡಾ ಮತ್ತು ಯುರೋಪಿಯನ್ ಮಿತ್ರರಾಷ್ಟ್ರಗಳು ರಷ್ಯಾದ ಪ್ರಮುಖ ಬ್ಯಾಂಕ್‌ಗಳ ಮೇಲೆ ನಿರ್ಬಂಧವನ್ನು ಹೇರಿದೆ.

ಓದಿ :ಅಮರಾವತಿಯೇ ಆಂಧ್ರಪ್ರದೇಶದ ರಾಜಧಾನಿ: ಹೈಕೋರ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.