ETV Bharat / international

'ಅಧಿಕಾರ ನಿಮ್ಮ ಕೈಗೆ ತೆಗೆದುಕೊಳ್ಳಿ '; ಉಕ್ರೇನ್​ ಯೋಧರಿಗೆ ಕರೆ ನೀಡಿದ ರಷ್ಯಾ ಅಧ್ಯಕ್ಷ ಪುಟಿನ್​! - ರಷ್ಯಾ ಉಕ್ರೇನ್​ ಮಧ್ಯೆ ಯುದ್ಧ

ಉಕ್ರೇನ್​-ರಷ್ಯಾ ನಡುವಿನ ಬಿಕ್ಕಟ್ಟು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇದರ ಮಧ್ಯೆ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್​ ಉಕ್ರೇನ್​ ಭದ್ರತಾ ಪಡೆಯನ್ನುದ್ದೇಶಿಸಿ ಮಾತನಾಡಿದ್ದಾರೆ.

Russian President Putin
Russian President Putin
author img

By

Published : Feb 25, 2022, 9:50 PM IST

ಮಾಸ್ಕೋ(ರಷ್ಯಾ): ಉಕ್ರೇನ್​ ವಿರುದ್ಧ ಯುದ್ಧ ಸಾರಿರುವ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್​ ಇದೀಗ ಅದರೊಂದಿಗೆ ಮಾತುಕತೆಗೆ ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಇದರ ಮಧ್ಯೆ ಅಧಿಕಾರವನ್ನ ನಿಮ್ಮ ಕೈಗೆ ತೆಗೆದುಕೊಳ್ಳಿ ಎಂದು ಉಕ್ರೇನ್​ ಸೈನಿಕರಿಗೆ ಕಿವಿಮಾತು ಹೇಳಿದ್ದಾರೆ.

ವಾಡ್ಲಿಮಿರ್ ಪುಟಿನ್ ಮಾತನಾಡಿರುವ ವಿಡಿಯೋ ಇದೀಗ ವೈರಲ್​ ಆಗಿದ್ದು, ಭಯೋತ್ಪಾದಕರು ಮತ್ತು ಮಾದಕ ವ್ಯಸನಿಗಳ ಕೈಯಲ್ಲಿರುವ ಉಕ್ರೇನ್​​ ಅಧಿಕಾರವನ್ನ ನಿಮ್ಮ ಕೈಗೆ ತೆಗೆದುಕೊಳ್ಳುವಂತೆ ಕರೆ ನೀಡಿದ್ದಾರೆ. ಉಕ್ರೇನ್ ಮಿಲಿಟರಿ ಉದ್ದೇಶಿಸಿ ಮಾತನಾಡಿರುವ ರಷ್ಯಾ ಅಧ್ಯಕ್ಷ, ಯಹೂದಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಶದಲ್ಲಿರುವ ಕೈವ್​​ ನಾಯಕತ್ವವನ್ನ ನಿಮ್ಮ ವಶಕ್ಕೆ ಪಡೆದುಕೊಳ್ಳಿ ಎನ್ನುವ ಮೂಲಕ ಒಡೆದಾಳುವ ಅಸ್ತ್ರ ಪ್ರಯೋಗಿಸಿದ್ದಾರೆ.

  • Putin is now openly talking about regime change in Kyiv, something that many have suspected from the beginning based on the scale of the invasion and Russia's political goals. This may be how he explains Zelensky's eventual overthrow, if Russia achieves its goals. https://t.co/z4GIMU1Lqq

    — Andrew Roth (@Andrew__Roth) February 25, 2022 " class="align-text-top noRightClick twitterSection" data=" ">

ಇದನ್ನೂ ಓದಿರಿ: ಉಕ್ರೇನ್​ನಿಂದ ಪಾರಾಗಲು 8 ಕಿ.ಮೀ. ನಡೆದು ಪೋಲೆಂಡ್ ಗಡಿಗೆ ಬಂದ 40 ಭಾರತೀಯ ವಿದ್ಯಾರ್ಥಿಗಳು

ಉಕ್ರೇನ್​ ಭದ್ರತಾ ಪಡೆ ಉದ್ದೇಶಿಸಿ ಮಾತನಾಡಿರುವ ಅವರು,ನಿಮ್ಮ ಮಕ್ಕಳು, ಹೆಂಡತಿ ಮತ್ತು ಹಿರಿಯರನ್ನ ಮಾನವ ಗುರಾಣಿಗಳಾಗಿ ಬಳಸಲು ಅನುಮತಿ ನೀಡಬೇಡಿ ಎಂದಿರುವ ಪುಟಿನ್​, ಅಧಿಕಾರವನ್ನ ನಿಮ್ಮ ಕೈಗೆ ತೆಗೆದುಕೊಳ್ಳಿ. ಇದರಿಂದ ಸಾವಿರಾರು ಜನರು ನೆಮ್ಮದಿಯಿಂದ ಜೀವನ ನಡೆಸಬಹುದು ಎಂದಿದ್ದಾರೆ. ರಷ್ಯಾ- ಉಕ್ರೇನ್​ ಸಂಘರ್ಷಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾತನಾಡಿರುವ ಭಾರತದಲ್ಲಿರುವ ರಷ್ಯಾ ದೂತವಾಸ ಕಚೇರಿ, ಉಕ್ರೇನ್​ನೊಂದಿಗೆ ಮಾತುಕತೆಗೆ ಉನ್ನತ ಮಟ್ಟದ ಅಧಿಕಾರಿಗಳ ನಿಯೋಗ ಕಳುಹಿಸಲು ತಾವು ಸಿದ್ಧವಾಗಿರುವುದಾಗಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.