ಲಂಡನ್: ಬ್ರಿಟನ್ ರಾಣಿ ಎಲಿಜಬೆತ್ II ಅವರ ಪತಿ ರಾಜ ಫಿಲಿಪ್ 99ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಅರಮನೆ ಪ್ರಕಟಣೆ ಹೊರಡಿಸಿದೆ.
99ವರ್ಷದ ರಾಜ ಫಿಲಿಪ್ ಅವರು ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಆದರೆ ಇಂದು ಸಾವನ್ನಪ್ಪಿದ್ದಾರೆ ಎಂದು ರಾಯಲ್ ಫ್ಯಾಮಿಲಿ ಟ್ವೀಟ್ ಮಾಡಿದೆ.
ಪ್ರಿನ್ಸ್ ಫಿಲಿಪ್ ಬ್ರಿಟಿಷ್ ದೊರೆಗಳ ಪೈಕಿ ಅತಿ ಹೆಚ್ಚು ವರ್ಷಗಳ ಕಾಲ ರಾಣಿ ಆಡಳಿತದಲ್ಲಿ ಸಹಾಯ ಮಾಡಿದ ಸಾಧನೆಗೆ ಪಾತ್ರರಾಗಿದ್ದಾರೆ. ಸುಮಾರು 65 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಇವರು 2017ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.