ಲಂಡನ್(ಗ್ರೇಟ್ ಬ್ರಿಟನ್): ಅಧಿಕೃತವಾಗಿ ಯೂರೋಪಿಯನ್ ಯೂನಿಯನ್ನಿಂದ ಬ್ರಿಟನ್ ಹೊರಬಂದರೂ ಕೂಡಾ, ಆ ಪ್ರಕ್ರಿಯೆ ಜಾರಿ ಇನ್ನೂ ಯಶಸ್ವಿಯಾಗಿಲ್ಲ. ಬ್ರೆಕ್ಸಿಟ್ ನಂತರ ಆರಂಭವಾಗಬೇಕಿದ್ದ, ವ್ಯಾಪಾರ ವಹಿವಾಟಿನ ವಿಚಾರದಲ್ಲಿ ಗಡಿಯಲ್ಲಿ ಸರಕು ತಪಾಸಣಾ ಪ್ರಕ್ರಿಯೆಯನ್ನು ಸ್ವಲ್ಪ ದಿನಗಳ ಮಟ್ಟಿಗೆ ಸಡಿಲಗೊಳಿಸಲಾಗಿದೆ.
ಉತ್ತರ ಐರ್ಲೆಂಡ್ಗೆ ಹೋಗುತ್ತಿರುವ ಸರಕುಗಳಿಗೆ ಸುಂಕ ವಿಧಿಸುವ ತಪಾಸಣೆ ಮತ್ತು ಸುಂಕ ವಿಧಿಸುವ ಪ್ರಕ್ರಿಯೆ ಇನ್ನೂ ಆರಂಭಿಸಲಾಗಿಲ್ಲ ಎಂದು ಬ್ರಿಟನ್ ಸ್ಪಷ್ಟನೆ ನೀಡಿದೆ. ಬ್ರೆಕ್ಸಿಟ್ನ ಸಚಿವ ಡೇವಿಡ್ ಪ್ರೋಸ್ಟ್ ಸದ್ಯದ ನಿಯಮಗಳಂತೆ ಸರ್ಕಾರ ವ್ಯಾಪಾರ ಮುಂದುವರೆಸಬಹುದು. ಹೆಚ್ಚುವರಿ ದಿನಗಳು ಮುಗಿಯುವವರೆಗೆ ಈ ರೀತಿಯ ವ್ಯಾಪಾರಕ್ಕೆ ಅವಕಾಶ ಇರುತ್ತದೆ ಎಂದಿದ್ದಾರೆ.
ಹೆಚ್ಚುವರಿ ದಿನಗಳು ಸೆಪ್ಟೆಂಬರ್ 30ರಂದು ಮುಗಿಯುತ್ತದೆ. ಅದರ ನಂತರ ಹೆಚ್ಚುವರಿ ದಿನಗಳು ಬೇಕು ಅಥವಾ ಬೇಡ ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದು ಡೇವಿಡ್ ಪ್ರೋಸ್ಟ್ ಹೇಳಿದ್ದಾರೆ. ಬ್ರೆಕ್ಸಿಟ್ ಒಪ್ಪಂದದ ನಂತರ ಇಂಗ್ಲೆಂಡ್ ಮತ್ತು ಯೂರೋಪಿಯನ್ ಯೂನಿಯನ್ಗಳು ಪರಸ್ಪರ ಆಳವಾಗಿ ಚಿಂತನೆ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಯೂರೋಪಿಯನ್ ಯೂನಿಯನ್ನಲ್ಲಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗಬೇಕಿದ್ದ ಸರಕುಗಳ ಮೇಲಿನ ಸುಂಕ ಇರಲಿಲ್ಲ. ಇದರಿಂದ ಎಲ್ಲಾ ರಾಷ್ಟ್ರಗಳಿಗೆ ಉಪಯೋಗವಾಗುತ್ತಿತ್ತು. ಈಗ ಸುಮಾರು ಯೂರೋಪಿಯನ್ ಯೂನಿಯನ್ನ 27 ರಾಷ್ಟ್ರಗಳೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಬ್ರಿಟನ್ ಯೂರೋಪಿಯನ್ ಯೂನಿಯನ್ನಿಂದ ಹೊರಬಂದ ಮೇಲೆ ಎಲ್ಲಾ ರಾಷ್ಟ್ರಗಳ ವ್ಯಾಪಾರ ಹದಗೆಟ್ಟಿದೆ.
ಈಗ ಬಹುತೇಕ ರಾಷ್ಟ್ರಗಳು ವ್ಯಾಪಾರ ಮಾಡಬೇಕಾದರೆ, ಇಂಗ್ಲೆಂಡ್ ಮೂಲಕ ವಸ್ತುಗಳನ್ನು ಮತ್ತೊಂದು ರಾಷ್ಟ್ರಕ್ಕೆ ಸಾಗಿಸಬೇಕಾಗುತ್ತದೆ. ಇದರಿಂದ ಬ್ರಿಟನ್ಗೆ ಸಾಕಷ್ಟು ಸುಂಕ ಸಂಗ್ರಹವಾಗುವ ಸಾಧ್ಯತೆಯಿದೆ. ಬ್ರಿಟನ್ ಕೂಡಾ ಬೇರೆ ದೇಶಗಳೊಂದಿಗೆ ವ್ಯಾಪಾರ ನಡೆಸಲು ಸುಂಕ ಪಾವತಿಸಬೇಕಾಗುತ್ತದೆ. ಆದರೆ, ಸಂಗ್ರಹವಾಗುವ ಸುಂಕದ ಆದಾಯ, ವೆಚ್ಚವಾಗುವ ಸುಂಕದ ಆದಾಯಕ್ಕಿಂತ ಹೆಚ್ಚಿರುತ್ತದೆ ಎಂಬುದು ಬ್ರಿಟನ್ ಅಭಿಪ್ರಾಯವಾಗಿದೆ.
ಈಗಾಗಲೇ ಸಂಪೂರ್ಣವಾಗಿ ಬ್ರಿಟನ್ ಹೊಸ ನಿಯಮಗಳನ್ನು ಅಳವಡಿಸಿಕೊಳ್ಳಬೇಕಿತ್ತು. ಆದರೆ, ಈಗ ಉತ್ತರ ಐರ್ಲೆಂಡಿಗೆ ಬೇರೆ ದೇಶಗಳಿಂದ ಸರಕುಗಳನ್ನು ಬರುವುದನ್ನು ತಪಾಸಣೆ ರಹಿತವಾಗಿ ಮುಂದುವರೆಸಲಾಗಿದೆ ಎಂದು ಬ್ರಿಟನ್ ಹೇಳಿದ್ದು, ಮತ್ತಷ್ಟು ದಿನ ಬ್ರೆಕ್ಸಿಟ್ ಯಶಸ್ವಿಯಾಗಿ ಜಾರಿಗೆ ಬರಲು ಸಾಧ್ಯವಿಲ್ಲ ಎಂಬುದು ಮೇಲ್ನೋಟಕ್ಕ ಗೊತ್ತಾಗುತ್ತಿದೆ.
ಇದನ್ನೂ ಓದಿ; ಕೋವಿಡ್ ಬಿಕ್ಕಟ್ಟು: ಕೆಲ ನಿರುದ್ಯೋಗ ಯೋಜನೆಗಳಿಗೆ ತಿಲಾಂಜಲಿ ಹಾಡಿದ ಬೈಡನ್ ಸರ್ಕಾರ