ETV Bharat / international

ಆಕ್ಸ್‌ಫರ್ಡ್ ಕೋವಿಡ್​-19 ಲಸಿಕೆ ಮೇಲಿನ ಪ್ರಯೋಗದ ಯಶಸ್ಸು ಶೇ  50 ರಷ್ಟು ಮಾತ್ರ!

ಸೆಪ್ಟೆಂಬರ್ ವೇಳೆಗೆ ಪರಿಣಾಮಕಾರಿ ಲಸಿಕೆ ಅಭಿವೃದ್ಧಿಪಡಿಸುವಲ್ಲಿ 80 ಪ್ರತಿಶತದಷ್ಟು ಅವಕಾಶವಿದೆ ಎಂದು ನಾವು ವರ್ಷದ ಆರಂಭದಲ್ಲಿ ಹೇಳಿದ್ದೇವೆ. ಆದರೆ ಈ ಸಮಯದಲ್ಲಿ, ನಾವು 50 ಪ್ರತಿಶತದಷ್ಟು ಯಾವುದೇ ಫಲಿತಾಂಶವನ್ನು ಪಡೆಯದಿರಬಹುದು ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹೇಳಿದೆ.

author img

By

Published : May 25, 2020, 11:49 PM IST

ಲಂಡನ್: ಕೊರೊನಾ ಸೋಂಕಿನ ಪ್ರಮಾಣದಲ್ಲಿನ ಕುಸಿತದಿಂದಾಗಿ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕೋವಿಡ್​ -19 ಲಸಿಕೆ ಅಭಿವೃದ್ಧಿಪಡಿಸುವ ತಂಡವು, ಪ್ರಯೋಗಗಳಲ್ಲಿ ಯಾವುದೇ ಫಲಿತಾಂಶ ಸಿಗದ ಸಾಧ್ಯತೆಯು ಈಗ 50 ಪ್ರತಿಶತದಷ್ಟಿದೆ ಅಂತ ನಂಬಿದ್ದಾರೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.

ಕೊರೊನಾ ಲಸಿಕೆ ಕಂಡು ಹಿಡಿಯುವ ಪ್ರಯತ್ನ ಮುಂದುವರಿದಿದ್ದು, ಇಂಗ್ಲೆಂಡ್​ನಾದ್ಯಂತ ಸುಮಾರು10,260 ಸ್ವಯಂಸೇವಕರ ಮೇಲೆ ಪ್ರಯೋಗ ನಡೆಸಲಾಗುತ್ತಿದೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಕಳೆದ ವಾರ ಪ್ರಕಟಿಸಿತ್ತು.

ಪ್ರಯೋಗದ ಫಲಿತಾಂಶಗಳು ಯಾವಾಗ ಲಭ್ಯವಾಗುತ್ತವೆ ಎಂಬುದನ್ನು ವಿವರಿಸುವಾಗ, ಕೋವಿಡ್​-19 ನಿಂದ ರಕ್ಷಿಸಲು ಲಸಿಕೆ ಕಾರ್ಯನಿರ್ವಹಿಸುತ್ತದೆಯೆ ಎಂದು ನಿರ್ಣಯಿಸಲು, ತಂಡದ ಸಂಖ್ಯಾಶಾಸ್ತ್ರಜ್ಞರು ನಿಯಂತ್ರಣ ಗುಂಪಿನಲ್ಲಿರುವ ಸೋಂಕುಗಳ ಸಂಖ್ಯೆಯನ್ನು, ಲಸಿಕೆ ಹಾಕಿದ ಗುಂಪಿನ ಸೋಂಕಿನ ಸಂಖ್ಯೆಯೊಂದಿಗೆ ಹೋಲಿಸುತ್ತಾರೆ ಎಂದು ಹೇಳಿದರು.

ನಾವು ಅಗತ್ಯವಿರುವ ಸಂಖ್ಯೆಗಳನ್ನು ಎಷ್ಟು ಬೇಗನೆ ತಲುಪುತ್ತೇವೆ ಎಂಬುದು ಸಮುದಾಯದಲ್ಲಿನ ವೈರಸ್ ಹರಡುವಿಕೆಯ ಮಟ್ಟವನ್ನು ಅವಲಂಬಿಸಿರುತ್ತದೆ. ಪ್ರಸರಣವು ಅಧಿಕವಾಗಿದ್ದರೆ, ಲಸಿಕೆ ಕಾರ್ಯ ನಿರ್ವಹಿಸುತ್ತದೆಯೇ ಎಂದು ನೋಡಲು ನಾವು ಒಂದೆರಡು ತಿಂಗಳಲ್ಲಿ ಸಾಕಷ್ಟು ಡೇಟಾವನ್ನು ಪಡೆದು ಪರಿಶೀಲನೆ ನಡೆಸಬೇಕಾಗುತ್ತದೆ. ಆದರೆ ಪ್ರಸರಣ ಮಟ್ಟ ಕಡಿಮೆಯಾದರೆ, ಇದು 6 ತಿಂಗಳವರೆಗೆ ತೆಗೆದುಕೊಳ್ಳಬಹುದು ಎಂದು ವಿಶ್ವವಿದ್ಯಾಲಯ ಹೇಳಿದೆ.

SARS-CoV-2 ವೈರಸ್‌ಗೆ ಒಡ್ಡಿಕೊಳ್ಳುವ ಹೆಚ್ಚಿನ ಅವಕಾಶವನ್ನು ಹೊಂದಿರುವವರ ನೇಮಕಾತಿಗೆ ಆದ್ಯತೆ ನೀಡಲಾಗುತ್ತಿದೆ. ಉದಾಹರಣೆಗೆ ಮುಂಚೂಣಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಬೆಂಬಲ ಸಿಬ್ಬಂದಿ ಮತ್ತು ಸಾರ್ವಜನಿಕ ವಲಯದ ಪ್ರಮುಖ ಕೆಲಸಗಾರರು, ಪರಿಣಾಮಕಾರಿ ಡೇಟಾವನ್ನು ಸೆರೆಹಿಡಿಯಲು ಸಾಧ್ಯವಾಗುತ್ತದೆ.

ಸೆಪ್ಟೆಂಬರ್ ವೇಳೆಗೆ ಪರಿಣಾಮಕಾರಿ ಲಸಿಕೆ ಅಭಿವೃದ್ಧಿಪಡಿಸುವಲ್ಲಿ 80 ಪ್ರತಿಶತದಷ್ಟು ಅವಕಾಶವಿದೆ ಎಂದು ನಾವು ವರ್ಷದ ಆರಂಭದಲ್ಲಿ ಹೇಳಿದ್ದೇವೆ. ಆದರೆ, ಈ ಸಮಯದಲ್ಲಿ, ನಾವು 50 ಪ್ರತಿಶತದಷ್ಟು ಯಾವುದೇ ಫಲಿತಾಂಶವನ್ನು ಪಡೆಯದಿರಬಹುದು. ಪ್ರಾಯೋಗಿಕ ಪರೀಕ್ಷೆಯಲ್ಲಿ 10,000 ಸ್ವಯಂಸೇವಕರಲ್ಲಿ 20 ಕ್ಕಿಂತ ಕಡಿಮೆ ಜನರು ಸಕಾರಾತ್ಮಕವಾಗಿದ್ದರೆ, ಫಲಿತಾಂಶಗಳು ನಿಷ್ಪ್ರಯೋಜಕವಾಗಬಹುದು ಎಂದು ಪ್ರಾಧ್ಯಾಪಕರು ಪತ್ರಿಕೆಗೆ ತಿಳಿಸಿದ್ದಾರೆ.

ಕಳೆದ ವಾರ ಆಕ್ಸ್‌ಫರ್ಡ್ ಲಸಿಕೆ ಸಮೂಹದ ಮುಖ್ಯಸ್ಥ ಪ್ರೊಫೆಸರ್ ಆಂಡ್ರ್ಯೂ ಪೊಲಾರ್ಡ್, ಕ್ಲಿನಿಕಲ್ ಅಧ್ಯಯನಗಳು ಉತ್ತಮವಾಗಿ ಪ್ರಗತಿ ಸಾಧಿಸುತ್ತಿವೆ ಎಂದು ಭರವಸೆ ನೀಡಿದ್ದರು.

ಈ ಮೊದಲು, ಔಷಧ ತಯಾರಕ ಅಸ್ಟ್ರಾಜೆನೆಕಾ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದೊಂದಿಗೆ ಮರುಸಂಘಟನೆಯ ಅಡೆನೊವೈರಸ್ ಲಸಿಕೆಗಾಗಿ ತನ್ನ ಪರವಾನಗಿ ಒಪ್ಪಂದವನ್ನು ಅಂತಿಮಗೊಳಿಸಿತು.

ಲಸಿಕೆಯ ಪರವಾನಗಿ, ಹಿಂದೆ ChAdOx1 nCoV-19 ಮತ್ತು ಈಗ AZD1222 ಎಂದು ಕರೆಯಲ್ಪಡುತ್ತದೆ. ಇದು ವಿಶ್ವವಿದ್ಯಾಲಯದ ಜೆನ್ನರ್ ಸಂಸ್ಥೆ ಮತ್ತು ಆಕ್ಸ್‌ಫರ್ಡ್ ಲಸಿಕೆ ಗುಂಪಿನೊಂದಿಗಿನ ಇತ್ತೀಚಿನ ಜಾಗತಿಕ ಅಭಿವೃದ್ಧಿ ಮತ್ತು ವಿತರಣಾ ಒಪ್ಪಂದವನ್ನು ಅನುಸರಿಸುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.