ETV Bharat / international

ನ್ಯೂಜಿಲ್ಯಾಂಡ್​​​​ ಸಂಪುಟದಲ್ಲಿ ಭಾರತೀಯ ಮಹಿಳೆ: ಮಾತೃಭಾಷೆ ಮಾತನಾಡಿ ದೇಶ ಹೆಮ್ಮೆ ಪಡುವಂತೆ ಮಾಡಿದ ಪ್ರಿಯಾಂಕಾ! - ನ್ಯೂಜಿಲ್ಯಾಂಡ್ ಸಂಸತ್​ನಲ್ಲಿ ಮಲಯಾಳಂ ಭಾಷೆ

ನ್ಯೂಜಿಲ್ಯಾಂಡ್​ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಮಹಿಳೆ ಸಚಿವೆಯಾಗಿದ್ದು, ಇದೀಗ ಮತ್ತೊಂದು ಸಾಧನೆ ಮಾಡಿದ್ದಾರೆ.

Priyanca Radhakrishnan
Priyanca Radhakrishnan
author img

By

Published : Nov 6, 2020, 5:10 PM IST

Updated : Nov 6, 2020, 7:50 PM IST

ಮೆಲ್ಬೋರ್ನ್​: ನ್ಯೂಜಿಲ್ಯಾಂಡ್​ನ ಸಚಿವ ಸಂಪುಟದಲ್ಲಿ ಭಾರತೀಯ ಮೂಲಕ ಸಚಿವೆ ಪ್ರಿಯಾಂಕಾ ರಾಧಾಕೃಷ್ಣನ್​​ ಕ್ಯಾಬಿನೆಟ್​ ಸಚಿವೆಯಾಗಿ ಆಯ್ಕೆಯಾಗಿದ್ದು, ಈ ಮೂಲಕ ಭಾರತ ಮೂಲದ ಮೊಟ್ಟ ಮೊದಲ ಭಾರತೀಯ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಸಚಿವೆಯಾಗಿ ಆಯ್ಕೆಯಾದ ಬಳಿಕ ನ್ಯೂಜಿಲ್ಯಾಂಡ್​ ಜನರನ್ನುದ್ದೇಶಿಸಿ ಪಾರ್ಲಿಮೆಂಟ್​ನಲ್ಲಿ ಭಾಷಣ ಮಾಡುತ್ತಿದ್ದಾಗ ಅವರು ಮಲಯಾಳಂ ಭಾಷೆ ಮಾತನಾಡಿದ್ದು, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್​ ಸಿಂಗ್ ಪುರಿ ಈ ವಿಡಿಯೋ ಶೇರ್​ ಮಾಡಿದ್ದಾರೆ.

ಭಾರತದ ಚೆನ್ನೈನಲ್ಲಿ ಹುಟ್ಟಿರುವ ಪ್ರಿಯಾಂಕಾ ರಾಧಾಕೃಷ್ಣನ್​​ ಸಿಂಗಪೂರದಲ್ಲಿ ಶಾಲಾ ಶಿಕ್ಷಣ ಮುಗಿಸಿದ್ದು, ನ್ಯೂಜಿಲ್ಯಾಂಡ್​ನಲ್ಲಿ ಉನ್ನತ ಶಿಕ್ಷಣ ಮಾಡಿದ್ದಾರೆ. 2017ರ ಸೆಪ್ಟೆಂಬರ್​ ತಿಂಗಳಲ್ಲಿ ಲೆಬರ್ ಪಾರ್ಟಿಯಿಂದ ಸಂಸತ್​ಗೆ ಆಗಮಿಸಿದ್ದ ಅವರು, ಇದೀಗ ಸಚಿವೆಯಾಗಿ ಆಯ್ಕೆಯಾಗಿದ್ದಾರೆ.

ಮಿಸ್ಟರ್​​ ಸ್ಪೀಕರ್​, ಸಂಸತ್​ನಲ್ಲಿ ನನ್ನ ಮಾತೃಭಾಷೆ ಮಲಯಾಳಂ ಭಾಷೆ ಮಾತನಾಡಿದ್ದಾರೆ.ಇದೇ ಮೊದಲು ಎಂದು ನಾನು ನಂಬುತ್ತೇನೆ ಎಂದಿದ್ದಾರೆ. ಇದರ ವಿಡಿಯೋ ಶೇರ್ ಮಾಡಿರುವ ಸಚಿವ ಹರ್ದೀಪ್ ಸಿಂಗ್ ವಿದೇಶದಲ್ಲೂ ಭಾರತ ಹೆಮ್ಮೆ ಪಡುವಂತೆ ಮಾಡಿದ್ದೀರಿ ಎಂದು ಬರೆದುಕೊಂಡಿದ್ದಾರೆ.

Last Updated : Nov 6, 2020, 7:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.