ಬ್ರಸೆಲ್ಸ್( ಸ್ಪೇನ್): ವೈರಸ್ ಪೀಡಿತ ಯುರೋಪ್, ಭಾನುವಾರ ಕೊಂಚ ನಿಟ್ಟುಸಿರು ಬಿಟ್ಟಿದೆ. ಇಟಲಿಯಲ್ಲಿ ಕಳೆದ ಮೂರು ವಾರಗಳಲ್ಲಿ ಭಾನುವಾರ ಅತಿ ಕಡಿಮೆ ಸಾವು ವರದಿಯಾಗಿದ್ದು, ಸ್ಪೇನ್ನಲ್ಲೂ ಹೊಸ ಪ್ರಕರಣ ಮತ್ತು ಸಾವಿನ ಸಂಖ್ಯೆಯಲ್ಲಿ ಕುಸಿತ ಕಂಡಿದೆ.
ಶನಿವಾರ ಮತ್ತು ಭಾನುವಾರ ಇಟಲಿಯಲ್ಲಿ ಕೊರೊನಾ ವೈರಸ್ ಸಾವಿನ ಸಂಖ್ಯೆ 525 ಆಗಿದ್ದು, ಇದು ಮಾರ್ಚ್ 19ರ ನಂತರ ದಾಖಲಾದ ಒಂದು ದಿನದ ಕಡಿಮೆ ಸಾವಿನ ಸಂಖ್ಯೆಯಾಗಿದೆ. ಈ ಎರಡು ದಿನಗಳ ನಡುವೆ ದೇಶದಲ್ಲಿ 427 ಜನ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಮಾರ್ಚ್ 27ರಂದು ಇಲ್ಲಿ ಗರಿಷ್ಠ, ಅಂದರೆ 969 ಜನ ಕೊರೊನಾಗೆ ಬಲಿಯಾಗಿದ್ದರು. ಅಂದಿನಿಂದ ಇಂದಿನವರೆಗೆ ಒಂಬತ್ತು ದಿನಗಳಲ್ಲಿ ಐದು ದಿನ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಆದರೂ ಮಹಾಮಾರಿ ವೈರಸ್ನಿಂದ ಇಟಲಿಯಲ್ಲಿ ಇದುವರೆಗೆ ಒಟ್ಟು 15,887 ಅಸುನೀಗಿದ್ದಾರೆ. ಇದು ಜಗತ್ತಿನ ಇತರ ಎಲ್ಲಾ ದೇಶಗಳಿಂದ ಹೆಚ್ಚು.
ಇಟಲಿಯಲ್ಲಿ ಭಾನುವಾರದವರೆಗೆ ಸೋಂಕಿತರ ಸಂಖ್ಯೆ 91,24. ಒಂದು ದಿನದ ಹಿಂದೆ, ಅಂದರೆ ಶನಿವಾರ ಇದು 88,274 ಆಗಿತ್ತು. ಇಂದಿಗೆ ಆ ಸಂಖ್ಯೆ 1,28,948 ಕ್ಕೇರಿದೆ.
ಇನ್ನೊಂದೆಡೆ ಸ್ಪೇನ್‌ನಲ್ಲಿ ಸೋಂಕಿತರ ಸಂಖ್ಯೆ ಮತ್ತು ಸಾವನ್ನಪ್ಪಿದವರ ಸಂಖ್ಯೆಯಲ್ಲಿ ನಿರಂತರ ಕುಸಿತ ಕಂಡುಬಂದಿದೆ. ಶನಿವಾರ ಮತ್ತು ಭಾನುವಾರದ ನಡುವೆ ಒಟ್ಟು 6,023 ಹೊಸ ಪ್ರಕರಣ ವರದಿಯಾಗಿದ್ದು, ಹಿಂದಿನ 24 ಗಂಟೆಗಳಲ್ಲಿ 7,026 ಹೊಸ ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಅಂದರೆ ಗುರುವಾರ ಮತ್ತು ಶುಕ್ರವಾರದ ನಡುವೆ 7,472 ಪ್ರಕರಣಗಳು ದಾಖಲಾಗಿತ್ತು. ಸದ್ಯ ದೇಶದ ಒಟ್ಟು ಸೋಂಕಿತರ ಸಂಖ್ಯೆ 130,759.
ಈ ನಡುವೆ ಸ್ಪೇನ್‌ನಲ್ಲಿ ಶನಿವಾರ 674 ಜನ ಸಾವನ್ನಪ್ಪಿ, ಒಟ್ಟು ದೇಶದಲ್ಲಿ ಈವರೆಗೆ 12,418 ಜನ ಸಾವನ್ನಪ್ಪಿದ್ದಾರೆ. ಆ ಹಿಂದಿನ 24 ಗಂಟೆಗಳಲ್ಲಿ 809 ಜನ ಸಾವನ್ನಪ್ಪಿದ್ದು, 135 ರಷ್ಟು ಸಾವು ಕಡಿಮೆಯಾಗಿದೆ. ಅಂದರೆ ದಿನದಿಂದ ದಿನಕ್ಕೆ ಸೋಂಕಿತರು ಮತ್ತು ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಇಳಿಕೆ ಕಂಡುಬರುತ್ತಿದೆ.