ಕೀವ್(ಉಕ್ರೇನ್): ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡಿದ್ದು, ಕಳೆದ ಮೂರು ದಿನಗಳಿಂದ ಉಭಯ ದೇಶಗಳ ನೂರಾರು ಜನರು, ಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಮಧ್ಯೆ ಉಕ್ರೇನ್ ಯೋಧರು ದೇಶ ರಕ್ಷಣೆಯಲ್ಲಿ ಮಗ್ನರಾಗಿದ್ದಾರೆ. ದೇಶ ರಕ್ಷಣೆಗಾಗಿ ತಮ್ಮ ಜೀವ ಮುಡಿಪಾಗಿಟ್ಟಿದ್ದಾರೆ.
-
Heart touching and a very emotional video of soldier
— Yashika Keswani (@Yashika1Keswani) February 26, 2022 " class="align-text-top noRightClick twitterSection" data="
❤️❤️❤️❤️❤️❤️❤️❤️❤️
#UkrainianSoldier #RussiaUkraineWar #UkraineConflict #russia #ukraine #war #NoWar pic.twitter.com/0bxWs8GYN2
">Heart touching and a very emotional video of soldier
— Yashika Keswani (@Yashika1Keswani) February 26, 2022
❤️❤️❤️❤️❤️❤️❤️❤️❤️
#UkrainianSoldier #RussiaUkraineWar #UkraineConflict #russia #ukraine #war #NoWar pic.twitter.com/0bxWs8GYN2Heart touching and a very emotional video of soldier
— Yashika Keswani (@Yashika1Keswani) February 26, 2022
❤️❤️❤️❤️❤️❤️❤️❤️❤️
#UkrainianSoldier #RussiaUkraineWar #UkraineConflict #russia #ukraine #war #NoWar pic.twitter.com/0bxWs8GYN2
ಉಕ್ರೇನ್ ರಾಜಧಾನಿ ಕೀವ್ನ ಫೋಟೋಬ್ರೀಡ್ಜ್ನಲ್ಲಿ ಏಕಾಂಗಿಯಾಗಿ ಗಡಿ ರಕ್ಷಣೆ ಮಾಡುತ್ತಿರುವ 21 ವರ್ಷದ ಯೋಧ ಇದೀಗ ತನ್ನ ಪೋಷಕರ ನೆನಪು ಮಾಡಿಕೊಂಡು ಕಣ್ಣೀರು ಹಾಕಿದ್ದಾನೆ. ಯೋಧನ ಪೋಷಕರು ವಾಸವಾಗಿರುವ ಸ್ಥಳದಲ್ಲಿ ಈಗಾಗಲೇ ರಷ್ಯಾ ಯೋಧರು ದಾಳಿ ನಡೆಸಿದ್ದು, ಇದರ ಮಾಹಿತಿ ಲಭ್ಯವಾಗುತ್ತಿದ್ದಂತೆ ಗಡಿ ಕಾಯುತ್ತಿರುವ ಯೋಧ ತಮ್ಮ ಪೋಷಕರನ್ನ ನೆನೆದು ಗದ್ಗದಿತರಾಗಿದ್ದಾನೆ.
ಇದನ್ನೂ ಓದಿರಿ: 'ವಿಶ್ವಸಂಸ್ಥೆಯಲ್ಲಿ ನಮಗೆ ಬೆಂಬಲ ನೀಡಿ'.. ಪ್ರಧಾನಿ ಮೋದಿ ಬಳಿ ಮನವಿ ಮಾಡಿದ ಉಕ್ರೇನ್ ಅಧ್ಯಕ್ಷ
ನಾನು ಜೀವಂತವಾಗಿ ಉಳಿಯುತ್ತೇನೋ ಇಲ್ಲವೋ ಗೋತ್ತಿಲ್ಲ. ಆದರೆ, ನಿಮ್ಮ ಆರೋಗ್ಯದ ಬಗ್ಗೆ ಗಮನ ನೀಡಿ, ನನ್ನ ಬಗ್ಗೆ ಯಾವುದೇ ಕಾರಣಕ್ಕೂ ಯೋಚನೆ ಮಾಡಬೇಡಿ ಎಂದು ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದೆ. ನಿನ್ನೆ ಕೂಡ ಉಕ್ರೇನ್ ಗಡಿ ರಕ್ಷಣೆಯಲ್ಲಿ ನಿರತನಾಗಿದ್ದ ಯೋಧನೊಬ್ಬ ಮಮ್ಮಿ- ಡ್ಯಾಡಿ ಐ ಲವ್ ಯೂ ಎಂದು ಹೇಳಿರುವ ವಿಡಿಯೋ ತುಣಕವೊಂದು ವೈರಲ್ ಆಗಿತ್ತು.