ಮಟೇರಾ, ಇಟಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಕೆನಡಾದ ವಿದೇಶಾಂಗ ಸಚಿವ ಮಾರ್ಕ್ ಗಾರ್ನಿಯೊ ಅವರನ್ನು ಮಂಗಳವಾರ ಭೇಟಿಯಾಗಿ ವ್ಯಾಪಾರ ಮತ್ತು ಆರ್ಥಿಕ ಸಹಕಾರ ಸೇರಿದಂತೆ ಕೆಲವೊಂದು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಈ ಕುರಿತು ಜೈಶಂಕರ್ ಟ್ವೀಟ್ ಮಾಡಿದ್ದು, ಇಂಡೋ-ಪೆಸಿಫಿಕ್, ವ್ಯಾಪಾರ ಮತ್ತು ಆರ್ಥಿಕ ಸಹಕಾರ ಮತ್ತು ದ್ವಿಪಕ್ಷೀಯ ಸಹಕಾರ ಕುರಿತು ಕೆನಡಾದ ವಿದೇಶಾಂಗ ಸಚಿವ ಮಾರ್ಕ್ ಗಾರ್ನಿಯೊ ಅವರೊಂದಿಗೆ ಉಪಯುಕ್ತ ಮಾತುಕತೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
-
Useful conversation with FM @MarcGarneau of Canada on Indo-Pacific, trade & economic cooperation and bilateral concerns. Agreed to remain in touch. pic.twitter.com/uUgHjWu6uf
— Dr. S. Jaishankar (@DrSJaishankar) June 29, 2021 " class="align-text-top noRightClick twitterSection" data="
">Useful conversation with FM @MarcGarneau of Canada on Indo-Pacific, trade & economic cooperation and bilateral concerns. Agreed to remain in touch. pic.twitter.com/uUgHjWu6uf
— Dr. S. Jaishankar (@DrSJaishankar) June 29, 2021Useful conversation with FM @MarcGarneau of Canada on Indo-Pacific, trade & economic cooperation and bilateral concerns. Agreed to remain in touch. pic.twitter.com/uUgHjWu6uf
— Dr. S. Jaishankar (@DrSJaishankar) June 29, 2021
ಪ್ರಸ್ತುತ, ಜೈಶಂಕರ್ ಇಟಲಿಯಲ್ಲಿ ನಡೆಯುತ್ತಿರುವ ಜಿ-20ಯ ಸಚಿವರ ಸಭೆಯಲ್ಲಿ ಭಾಗವಹಿಸಿದ್ದು, ಈ ಸಭೆಯಲ್ಲಿ ಬ್ರಿಟನ್, ಜಪಾನ್, ಕೆನಡಾ, ಸೌದಿ ಅರೇಬಿಯಾ, ಇಟಲಿ, ಮೆಕ್ಸಿಕೋ, ಮತ್ತು ಯೂರೋಪಿಯನ್ ಯೂನಿಯನ್ನ ಪ್ರತಿನಿಧಿಯೊಂದಿಗೆ ಸಭೆ ನಡೆಸಿದ್ದಾರೆ.
ಜಿ-20ಯ ಸಚಿವರ ಸಭೆಯಲ್ಲಿ ಮಾತನಾಡಿರುವ ಜೈಶಂಕರ್ ಕೋವಿಡ್ಗೆ ಅಂತಾರಾಷ್ಟ್ರೀಯ ಸಹಕಾರ ಅತ್ಯಂತ ಮುಖ್ಯ ಎಂದಿದ್ದಾರೆ. ಜಾಗತೀಕರಣದ ವಿಕೇಂದ್ರೀಕರಣ ಉತ್ತಮವಾದ ಆರ್ಥಿಕತೆಗೆ ಅವಶ್ಯಕತೆಯಿದೆ ಎಂದಿದ್ದಾರೆ.
ಇದನ್ನೂ ಓದಿ: CD Case: ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ರಜೆ.. ಆಮೆ ವೇಗದಲ್ಲಿ ತನಿಖೆ
ಜಿ-20 ಸಂಘಟನೆಯಲ್ಲಿ ಭಾರತ ಸೇರಿದಂತೆ 19 ರಾಷ್ಟ್ರಗಳು, ಯೂರೋಪಿಯನ್ ಯೂನಿಯನ್ ಒಕ್ಕೂಟವಿದೆ.ಈ ಬಾರಿಯ ಜಿ-20 ಸಂಘಟನೆಯ ಶೃಂಗಸಭೆಯ ನೇತೃತ್ವವನ್ನು ಇಟಲಿ ವಹಿಸಿಕೊಂಡಿದೆ.