ಪ್ಯಾರಿಸ್: ಮಲೇರಿಯಾ ರೋಗಕ್ಕೆ ಚಿಕಿತ್ಸೆ ನೀಡುವ ಸೀಮಿತ ಎರಡು ಔಷಧಿಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಂಡರೆ ಔಷಧ ದಾಸ್ತಾನು ಕೊರತೆಯಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಜಾಗತಿಕವಾಗಿ ಪ್ರಸ್ತುತ ಕ್ಲೋರೊಕ್ವಿನ್ (ಸಿಕ್ಯೂ) ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ (ಎಚ್‌ಸಿಕ್ಯು) ಎಂಬ ಎರಡು ಮಲೇರಿಯಾ ಔಷಧಗಳಿದ್ದು, ಅದರ ದಾಸ್ತಾನು ಸೀಮಿತ ಮಟ್ಟದಲ್ಲಿದೆ.
ಹೀಗಾಗಿ ಇದನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಂಡರೆ ಸಮಸ್ಯೆಯಾಗಬಹುದು. ಅಲ್ಲದೆ ಕೋವಿಡ್ ಹೊರತುಪಡಿಸಿ ಇತರ ರೋಗಗಳಿಗೆ ಚಿಕಿತ್ಸೆ ನೀಡಲು ಕ್ಲೋರೊಕ್ವಿನ್ ಕೊರತೆ ಉಂಟಾಗಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಫ್ರಾನ್ಸ್ ಮತ್ತು ಇಟಲಿಯ ವೈದ್ಯರ ಅಧ್ಯಯನದಲ್ಲಿ ಮಲೇರಿಯಾ ಗಣಪಡಿಸಲು ಬಳಸುವ ಈ ಎರಡು ಔಷಧಿಗಳು ಕೋವಿಡ್ ಗುಣಪಡಿಸುವಲ್ಲಿ ಆರಂಭಿಕ ಭರವಸೆಯನ್ನು ಹುಟ್ಟುಹಾಕಿದ್ದವು. ಆದರೆ ಅದನ್ನು ವಿಶ್ವದಾದ್ಯಂತ ಕೋವಿಡ್ ಚಿಕಿತ್ಸೆಗೆ ಪ್ರಾಥಮಿಕ ಔಷಧಿಯಾಗಿ ಬಳಸಿದರೆ ಇತರ ರೋಗಗಳ ಚಿಕಿತ್ಸೆಗೆ ಕೊರತೆ ಉಂಟಾಗುವ ಭೀತಿ ಎದುರಾಗಿದೆ.