ETV Bharat / international

'ಕೊರೊನಾ ಸಾವಿನ ಪ್ರಮಾಣ ಕಡಿಮೆಗೊಳಿಸಲು ಡೆಕ್ಸಾಮಿಥಾಸೋನ್ ಪರಿಣಾಮಕಾರಿ' - ಕೊರೊನಾ ಮರಣ ಪ್ರಮಾಣ

ಅಧ್ಯಯನ ಸಂದರ್ಭದಲ್ಲಿ 2,100 ಕೋವಿಡ್ ಸೋಂಕಿತರ ಮೇಲೆ ಅಗ್ಗದರದ ಡೆಕ್ಸಾಮಿಥಾಸೋನ್ ಎಂಬ ಸ್ಟೆರಾಯ್ಡ್ ಔಷಧಿಯನ್ನು ಪ್ರಯೋಗಿಸಿದ ವಿಜ್ಞಾನಿಗಳು, ಕಡಿಮೆ ಪ್ರಮಾಣದಲ್ಲಿ ಇದರ ಬಳಕೆಯಿಂದ ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ.

ಡೆಕ್ಸಮೆಥಾಸೊನ್
ಡೆಕ್ಸಮೆಥಾಸೊನ್
author img

By

Published : Jun 17, 2020, 7:28 PM IST

ಲಂಡನ್: ಅಗ್ಗದರದಲ್ಲಿ ಸಿಗುವ ಸ್ಟಿರಾಯ್ಡ್​ ಔಷಧಿಯೊಂದರಿಂದ ಅತಿ ಗಂಭೀರ ಸ್ವರೂಪದ ಕೋವಿಡ್​ ರೋಗಿಗಳ ಸಾವಿನ ಪ್ರಮಾಣವನ್ನು ಮೂರನೇ ಒಂದರಷ್ಟು ತಗ್ಗಿಸಬಹುದು ಎಂದು ಯುನೈಟೆಡ್ ಕಿಂಗಡಮ್​ನ ಸಂಶೋಧಕರು ಪ್ರಕಟಿಸಿದ್ದಾರೆ. ಕೊರೊನಾ ವೈರಸ್ ಚಿಕಿತ್ಸೆಯಲ್ಲಿ ಇದನ್ನು ಮಹತ್ಸಾಧನೆ ಎಂದೇ ಬಣ್ಣಿಸಲಾಗಿದೆ.

ಅಧ್ಯಯನ ಸಂದರ್ಭದಲ್ಲಿ 2,100 ಕೋವಿಡ್ ಸೋಂಕಿತರ ಮೇಲೆ ಅಗ್ಗದರದ ಡೆಕ್ಸಾಮಿಥಾಸೋನ್ ಎಂಬ ಸ್ಟೆರಾಯ್ಡ್ ಔಷಧಿಯನ್ನು ಪ್ರಯೋಗಿಸಿದ ವಿಜ್ಞಾನಿಗಳು, ಕಡಿಮೆ ಪ್ರಮಾಣದಲ್ಲಿ ಇದರ ಬಳಕೆಯಿಂದ ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ.

ರಿಕವರಿ ಎಂಬ ಹೆಸರಿನ ಟ್ರಯಲ್​ಗಳ (RECOVERY-Randomised Evaluation of COVid-19 thERapY) ಸಂದರ್ಭದಲ್ಲಿ ಕೋವಿಡ್​ ಚಿಕಿತ್ಸೆಗಾಗಿ ಡೆಕ್ಸಾಮಿಥಾಸೋನ್ ಸ್ಟೆರಾಯ್ಡ್​ ಅನ್ನು ಪ್ರಯೋಗ ಮಾಡಲಾಗಿದೆ.

ಪ್ರಯೋಗದ ವೇಳೆ 2100 ರೋಗಿಗಳಿಗೆ ಪ್ರತಿದಿನ 6 ಮಿಲಿಗ್ರಾಂ ನಂತೆ ಡೆಕ್ಸಾಮಿಥಾಸೋನ್ ನೀಡಲಾಗಿತ್ತು. ಇಂಜೆಕ್ಷನ್ ಅಥವಾ ಬಾಯಿಯ ಮೂಲಕ ಈ ಔಷಧಿಯನ್ನು ರೋಗಿಗಳ ದೇಹಕ್ಕೆ ಸೇರಿಸಲಾಗಿತ್ತು. ಹೀಗೆ 10 ದಿನಗಳ ಡೆಕ್ಸಾಮಿಥಾಸೋನ್ ನೀಡಿ, ಅವರ ವರದಿಗಳನ್ನು ಇತರ ಸಾಮಾನ್ಯ ಚಿಕಿತ್ಸೆಗೊಳಗಾದ 4321 ರೋಗಿಗಳ ವರದಿಯೊಂದಿಗೆ ಹೋಲಿಸಲಾಯಿತು.

ಸಾಮಾನ್ಯ ಚಿಕಿತ್ಸೆ ಪಡೆದವರಲ್ಲಿ ವೆಂಟಿಲೇಟರ್ ಅಗತ್ಯವಿದ್ದ ರೋಗಿಗಳ ಸಾವಿನ ಪ್ರಮಾಣ ಶೇ 41 ರಷ್ಟು, ಆಕ್ಸಿಜನ್ ಮಾತ್ರ ಪಡೆದ ರೋಗಿಗಳ ಸಾವಿನ ಪ್ರಮಾಣ ಶೇ 25 ರಷ್ಟು ಹಾಗೂ ಯಾವುದೇ ವೆಂಟಿಲೇಟರ್ ಅಗತ್ಯವಿಲ್ಲದ ರೋಗಿಗಳ ಸಾವಿನ ಪ್ರಮಾಣ ಶೇ 13 ರಷ್ಟಾಗಿತ್ತು.

ಡೆಕ್ಸಾಮಿಥಾಸೋನ್ ನೀಡಿದ ವೆಂಟಿಲೇಟರ್ ಮೇಲಿದ್ದ ರೋಗಿಗಳ ಸಾವಿನ ಪ್ರಮಾಣ ಮೂರನೇ ಒಂದರಷ್ಟು ಹಾಗೂ ಆಕ್ಸಿಜನ್ ಮಾತ್ರ ಅಗತ್ಯವಿದ್ದ ರೋಗಿಗಳ ಸಾವಿನ ಪ್ರಮಾಣ ಶೇ ಐದನೇ ಒಂದರಷ್ಟು ಕಡಿಮೆಯಾಗಿತ್ತು ಎಂದು ಸಂಶೋಧಕರು ಹೇಳಿದ್ದಾರೆ.

ಡೆಕ್ಸಾಮಿಥಾಸೋನ್​ ಬಳಸಿದಲ್ಲಿ ವೆಂಟಿಲೇಟರ್ ಮೇಲಿರುವ ಪ್ರತಿ ಎಂಟು ರೋಗಿಗಳ ಪೈಕಿ ಓರ್ವ ರೋಗಿಯ ಪ್ರಾಣ ಉಳಿಸಬಹುದಾಗಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.