ವಾಷಿಂಗ್ಟನ್: ರಷ್ಯಾದ ಪಡೆಗಳ ಉಕ್ರೇನ್‌ನಲ್ಲಿ ಯುದ್ಧದ ತೀವ್ರತೆಯನ್ನು ಹೆಚ್ಚಿಸಿದ್ದು, ಚೆರ್ನಿಹಿವ್‌ನಲ್ಲಿ ನಡೆದ ಭಾರೀ ಫಿರಂಗಿ ದಾಳಿಯಲ್ಲಿ ಅಮೆರಿಕದ ಪ್ರಜೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಮಾರ್ಚ್ 17 ರಂದು ಉಕ್ರೇನ್‌ನಲ್ಲಿ ಮೃತಪಟ್ಟಿರುವ ಅಮೆರಿಕ ಪ್ರಜೆಯನ್ನು ಜೇಮ್ಸ್ ವಿಟ್ನಿ ಹಿಲ್ ಎಂದು ಗುರುತಿಸಲಾಗಿದೆ. ಚೆರ್ನಿಹಿವ್‌ನಲ್ಲಿ ನಿರಾಯುಧ ನಾಗರಿಕರ ಮೇಲೆ ಭಾರಿ ಫಿರಂಗಿ ದಾಳಿ ವೇಳೆ ಹಿಲ್ ಮೃತಪಟ್ಟಿದ್ದಾನೆಂದು ಬಿಬಿಸಿ ವರದಿ ಮಾಡಿದೆ.
ಹಿಲ್ ತನ್ನ ಉಕ್ರೇನ್ ಮೂಲದ ಪಾಟ್ನರ್ ಜೊತೆ ಕಳೆದ ಡಿಸೆಂಬರ್‌ನಲ್ಲಿ ಇಲ್ಲಿಗೆ ಬಂದಿದ್ದರು. ರಷ್ಯಾ ದಾಳಿಯಿಂದ ಉಂಟಾಗಿದ್ದ ಪರಿಸ್ಥಿತಿಯ ಬಗ್ಗೆ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಹಿಲ್, ಪ್ರತಿ ದಿನ ಜನರು ಸಾವಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ, ರಾತ್ರಿ ವೇಳೆ ಇಲ್ಲಿ ಬೀಳುವ ಬಾಂಬ್‌ಗಳು ಯಾವುದೇ ಸಮಯದಲ್ಲಿ ಅಪಾಯವನ್ನು ಉಂಟು ಮಾಡಬಹುದು ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದರು. ಹೀಗೆ ಬರೆದಿದ್ದ ವ್ಯಕ್ತಿಯೇ ಇದೀಗ ರಷ್ಯಾ ಪಡೆಗಳ ಫಿರಂಗಿ ದಾಳಿಯಲ್ಲಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಶಾಲೆ ಮೇಲೆ ರಷ್ಯಾ ಬಾಂಬ್ ದಾಳಿ: 21 ಸಾವು, 25ಕ್ಕೂ ಅಧಿಕ ಮಂದಿ ಗಾಯ