ಸಿಡ್ನಿ (ಆಸ್ಟ್ರೇಲಿಯಾ): ಕಳೆದ ವರ್ಷ ಕಾಳ್ಗಿಚ್ಚಿಗೆ ತತ್ತರಿಸಿದ್ದ ಆಸ್ಟ್ರೇಲಿಯಾ ಈ ಬಾರಿ ಪ್ರವಾಹಕ್ಕೆ ಬೆಚ್ಚಿಬಿದ್ದಿದೆ. ನ್ಯೂ ಸೌತ್ ವೇಲ್ಸ್ ರಾಜ್ಯದಲ್ಲಿ ಈವರೆಗೆ ಸುಮಾರು 18,000 ಜನರು ತಮ್ಮ ಮನೆಗಳನ್ನು ತೊರೆದು ಸ್ಥಳಾಂತರಗೊಂಡಿದ್ದಾರೆ.
ನ್ಯೂ ಸೌತ್ ವೇಲ್ಸ್ನಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಉಂಟಾಗಿದೆ. ರಾಜ್ಯದಲ್ಲಿ 'ನೈಸರ್ಗಿಕ ವಿಪತ್ತು' ಘೋಷಿಸಲಾಗಿದೆ. ನೂರಾರು ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 200ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲಾಗಿದೆ. ರಸ್ತೆಗಳು, ಸೇತುವೆಗಳು ಮುಳುಗಡೆಯಾಗಿವೆ.
ಇದನ್ನೂ ಓದಿ: ಕಾಬೂಲ್‌ನಲ್ಲಿ ಬಾಂಬ್ ಸ್ಫೋಟ: 24 ಗಂಟೆಗಳಲ್ಲಿ 7 ಮಂದಿ ಸಾವು
ಸುಮಾರು 60 ವರ್ಷಗಳ ಅಂದರೆ 1961ರ ಬಳಿಕ ನ್ಯೂ ಸೌತ್ ವೇಲ್ಸ್ ರಾಜ್ಯವು ಕಂಡ ಅತಿ ದೊಡ್ಡ ಭೀಕರ ಪ್ರವಾಹ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.