ಪಿರ್ಗೋಸ್(ಗ್ರೀಸ್) : ಗ್ರೀಸ್‌ನ ಪಿರ್ಗೋಸ್‌ನ 15 ಕಿ.ಮೀ ದೂರದಲ್ಲಿರುವ ಎಸ್‌ಎಸ್‌ಡಬ್ಲ್ಯೂನಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಬುಧವಾರ 05:08ಕ್ಕೆ ಭೂಮಿ ಕಂಪಿಸಿದ್ದು, 70.62 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ. 34.8666 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 25.1168 ಡಿಗ್ರಿ ಪೂರ್ವ ರೇಖಾಂಶದಲ್ಲಿದೆ ಎಂದು ತಿಳಿದು ಬಂದಿದೆ.
ಭೂಕಂಪನ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ಕಂಪನದಿಂದಾಗಿ ಯಾವುದೇ ಅನಾಹುತ ಸಂಭವಿಸಿದ ಕುರಿತು ವರದಿಯಾಗಿಲ್ಲ.
ಇದನ್ನೂ ಓದಿ: ಎಲ್ಲ ಕೋವಿಡ್ ರೂಪಾಂತರಿಗಳಿಗಿಂತ ಒಮಿಕ್ರಾನ್ 'ಅತಿ ಹೆಚ್ಚು ಅಪಾಯಕಾರಿ': ವಿಶ್ವ ಆರೋಗ್ಯ ಸಂಸ್ಥೆ