ETV Bharat / international

ಫೈಜರ್​ ಲಸಿಕೆ ಪಡೆದು ನಾರ್ವೆಯಲ್ಲಿ 23 ಮಂದಿ ಸಾವು, ಅನೇಕರಿಗೆ ಅಡ್ಡ ಪರಿಣಾಮ: ತನಿಖೆಗೆ ಆದೇಶ - ನಾರ್ವೆಯಲ್ಲಿ 23 ಮಂದಿ ಸಾವು

ಅಮೆರಿಕದಿಂದ ಅಭಿವೃದ್ದಿಗೊಂಡಿರುವ ಫೈಜರ್ ಲಸಿಕೆ ಸ್ವೀಕರಿಸಿದ 23 ಮಂದಿ ಸಾವನ್ನಪ್ಪಿದ್ದು, ಇದೀಗ ತನಿಖೆ ನಡೆಸಲು ಆದೇಶ ಹೊರಡಿಸಲಾಗಿದೆ.

Pfizer Vaccine
Pfizer Vaccine
author img

By

Published : Jan 16, 2021, 4:38 PM IST

ನಾರ್ವೆ: ಔಷಧ ತಯಾರಿಕಾ ಸಂಸ್ಥೆ ಫೈಜರ್​ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆ ತೆಗೆದುಕೊಂಡಿರುವ 23 ಮಂದಿ ವೃದ್ಧರು ಸಾವನ್ನಪ್ಪಿದ್ದು, ಅನೇಕರ ಮೇಲೆ ಅಡ್ಡಪರಿಣಾಮ ಬೀರಿದೆ ಎಂಬ ಮಹತ್ವದ ಮಾಹಿತಿ ಹೊರಬಿದ್ದಿದೆ.

ನಾರ್ವೆಯಲ್ಲಿ ಫೈಜರ್​ ಬಯೋಟೆಕ್​ ಲಸಿಕೆ ನೀಡಲು ಶುರು ಮಾಡಲಾಗಿದ್ದು, ಇದನ್ನ ಪಡೆದುಕೊಂಡಿರುವ 23 ವೃದ್ಧರು ಸಾವನ್ನಪ್ಪಿದ್ದು, ಅನೇಕರು ಅನಾರೋಗ್ಯಕ್ಕೊಳಗಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ನಾರ್ವೆ ಸರ್ಕಾರ ಆದೇಶ ಹೊರಡಿಸಿದೆ. ಮೃತ ವ್ಯಕ್ತಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಫೈಜರ್​ ವ್ಯಾಕ್ಸಿನ್​ನಿಂದ ಉಂಟಾಗಿರುವ ಅಡ್ಡಪರಿಣಾಮಗಳಿಂದ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಓದಿ: ಕೋವಿಡ್​ ವ್ಯಾಕ್ಸಿನ್​ ನೀಡಿದ ಖುಷಿ: ಡ್ಯಾನ್ಸ್ ಮಾಡಿ ಸಂಭ್ರಮಿಸಿದ ವೈದ್ಯರು!

ಸಾವನ್ನಪ್ಪಿದವರು 80 ವರ್ಷಕ್ಕಿಂತಲೂ ಮೇಲ್ಪಟ್ಟವರು ಎಂದು ತಿಳಿದು ಬಂದಿದ್ದು, ಇವರು ಈಗಾಗಲೇ ಬೇರೆ ಬೇರೆ ತೊಂದರೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಅವರ ಮೇಲೆ ಲಸಿಕೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ. ಸಾವನ್ನಪ್ಪಿರುವ ಅನೇಕರು ಭೇದಿ, ವಾಕರಿಗೆ ಹಾಗೂ ಜ್ವರದಂತಹ ತೊಂದರೆಗಳಿಂದ ಬಳಲುತ್ತಿದ್ದರು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ನಾರ್ವೆ ದೇಶದಲ್ಲಿ ಡಿಸೆಂಬರ್ ತಿಂಗಳಲ್ಲಿ 30 ಸಾವಿರಕ್ಕೂ ಅಧಿಕ ಮಂದಿಗೆ ಫೈಜರ್​ ಲಸಿಕೆ ನೀಡಲಾಗಿದೆ. ಅದರಲ್ಲಿ 23 ಮಂದಿ ಸಾವನ್ನಪ್ಪಿದ್ದಾರೆ. ವಿಶೇಷವೆಂದರೆ ಫೈಜರ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಅನುಮತಿ ನೀಡಿದ್ದು, ಅಮೆರಿಕದಲ್ಲೂ ಈ ಲಸಿಕೆ ಬಳಕೆ ಮಾಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.