ಕಾಬೂಲ್ (ಅಫ್ಘಾನಿಸ್ತಾನ್): ಆಫ್ಘನ್ ನೆಲದಲ್ಲಿ ತಾಲಿಬಾನ್ ಉಗ್ರರ ಹೇಯಕೃತ್ಯಗಳ ಸಾಲು ಮುಂದುವರಿದಿದೆ. ಇದೀಗ ವ್ಯಕ್ತಿಯ ಮೃತದೇಹವನ್ನ ರಸ್ತೆ ಮಧ್ಯದಲ್ಲಿಯೇ ನೇತುಹಾಕಿರುವ ಘಟನೆ ವರದಿಯಾಗಿದೆ.
ಪಶ್ಚಿಮ ಅಫ್ಘಾನಿಸ್ತಾನದ ಹೆರತ್ ಸರ್ಕಲ್ನಲ್ಲಿ ಮೃತದೇಹವನ್ನು ಕ್ರೇನ್ನಲ್ಲಿ ನೇತುಹಾಕಿ ವಿಕೃತಿ ಮೆರೆದಿದ್ದಾರೆ. ಘಟನೆ ಕುರಿತು ಔಷಧ ಅಂಗಡಿ ನಡೆಸುತ್ತಿರುವ ಪ್ರತ್ಯಕ್ಷದರ್ಶಿ ವಾಜಿರ್ ಅಹಮ್ಮದ್ ಸಿದ್ದಿಖಿ ಪ್ರತಿಕ್ರಿಯಿಸಿ, ನಾಲ್ಕು ಮೃತದೇಹಗಳ ತೆಗೆದುಕೊಂಡು ಬಂದಿದ್ದ ತಾಲಿಬಾನಿಗಳು ಒಂದನ್ನು ಈ ಸರ್ಕಲ್ನಲ್ಲಿ ನೇತುಹಾಕಿ ಉಳಿದ ಮೂರು ಮೃತದೇಹಗಳನ್ನು ಬೇರೆಡೆ ಕೊಂಡೊಯ್ದಿದ್ದಾರೆ.
ಬಳಿಕ ಇವರೆಲ್ಲಾ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದವರು, ಪೊಲೀಸರ ನಡುವಿನ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ತಾಲಿಬಾನಿಯೊಬ್ಬ ಘೋಷಣೆ ಕೂಗಿದ್ದಾನೆ ಎಂದಿದ್ದಾನೆ. ಆದರೆ, ಈ ಘಟನೆ ಕುರಿತಂತೆ ತಾಲಿಬಾನ್ ಈವರೆಗೂ ಯಾವುದೇ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ: ಆಫ್ಘನ್ನಲ್ಲಿ ಈ ಹಿಂದಿನ ಕಠಿಣ ಶಿಕ್ಷೆ, ಮರಣದಂಡನೆಗಳ ನಿಯಮ ಜಾರಿ: ತಾಲಿಬಾನ್