ಇಸ್ಲಾಮಾಬಾದ್: ನೊಬೆಲ್ ಪ್ರಶಸ್ತಿ ವಿಜೇತ ಮಲಾಲಾ ಯುಸೂಫ್ಜಾಯ್ ಮತ್ತೊಂದು ಸಾಧನೆ ತಮ್ಮದಾಗಿಸಿಕೊಂಡಿದ್ದಾರೆ. ವಿಶ್ವದ ಅತ್ಯಂತ ಪ್ರಸಿದ್ಧ ಪಡೆದ ಯುವತಿಯಾಗಿ ಮಲಾಲಾಳನ್ನು ವಿಶ್ವಸಂಸ್ಥೆ ಗುರುತಿಸಿದೆ. ‘ಡಿಕೆಡ್ ಇನ್ ರಿವ್ಯೂ’ ವರದಿಯಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾಪಿಸಲಾಗಿದೆ.
ಸಮೀಕ್ಷೆ ಭಾಗವಾಗಿ 2010ರಿಂದ 2013ರವರೆಗೂ ನಡೆದ ಘಟನೆಗಳ ಸಮೀಕ್ಷೆಯನ್ನು ಐರಾಸ ಸ್ವೀಕರಿಸಿದೆ. 2010ರ ಹೈಟಿ ಭೂಕಂಪ, 2011ರ ಆರಂಭದಲ್ಲಿ ಸಿರಿಯಾದಲ್ಲಿ ನಡೆದ ಹೋರಾಟ, 2012 ರಲ್ಲಿ ಚಿಕ್ಕ ಮಕ್ಕಳ ಶಿಕ್ಷಣಕ್ಕೆ ಮಲಾಲಾ ನೀಡಿದ ಕೊಡುಗೆ ಹೆಚ್ಚು ಮಹತ್ವದ್ದಾಗಿದೆ ಎಂದು ಐರಾಸ ಎತ್ತಿಹಿಡಿದಿದೆ. 2014ರಲ್ಲಿ ಮಲಾಲಾ ನೋಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದರು. ಇದಾದ ಬಳಿಕ ಎರಡು ಬಾರಿ ಮಲಾಲಾ ಹತ್ಯೆಗೆ ತಾಲಿಬಾನ್ ಉಗ್ರರು ಯತ್ನಿಸಿದ್ದು, ಅದು ವಿಫಲವಾಗಿತ್ತು.
ತಾಲಿಬಾನ್ ದಾಳಿ ವಿಶ್ವಾದ್ಯಂತ ಕೋಲಾಹಲಕ್ಕೆ ಕಾರಣವಾಯಿತು. ಎಲ್ಲ ದೇಶಗಳು ಇದನ್ನು ತೀವ್ರವಾಗಿ ಖಂಡಿಸಿದವು. ಮಾನವ ಹಕ್ಕುಗಳ ದಿನಾಚರಣೆ ಸಂದರ್ಭ ಮಕ್ಕಳು ಪಾಠಶಾಲೆ ಹೋಗುವುದು ಅವರ ಮೂಲಭೂತ ಹಕ್ಕು ಎಂದು ಪ್ಯಾರಿಸ್‌ನ ಯುನೆಸ್ಕೋ ಕಚೇರಿಯಲ್ಲಿ ಮಲಾಲಾ ಧ್ವನಿಯೆತ್ತಿದ್ದರು.
22 ವರ್ಷದ ಮಲಾಲಾರನ್ನು ಟೀನ್ ವೋಗ್ ಮ್ಯಾಗಜೀನ್ ಕವರ್ ಪರ್ಸನ್ ಆಗಿ ಆಯ್ಕೆ ಮಾಡಿದೆ.