ETV Bharat / international

ಪಂಜ್‌ಶೀರ್‌ಗೆ ಲಗ್ಗೆ ಇಡಲು ತಾಲಿಬಾನ್‌ ಸಿದ್ಧತೆ; ಪ್ರತ್ಯುತ್ತರ ನೀಡಲು ಕಾದು ಕುಳಿತಿದೆ ಮಸೂದ್‌ ಪಡೆ

ಅಫ್ಘಾನಿಸ್ತಾನದ ಬಲಾಢ್ಯ ಪ್ರಾಂತ್ಯವೆಂದು ಪರಿಗಣಿಸಲಾದ ಪಂಜ್‌ಶೀರ್‌ನತ್ತ ತಾಲಿಬಾನ್‌ ಉಗ್ರರು ಧಾವಿಸಿ ಬರುತ್ತಿರುವುದನ್ನು ಅರಿತಿರುವ ಅಲ್ಲಿನ ನಾಯಕರು, ಭಯೋತ್ಪಾದಕರಿಗೆ ತೀವ್ರ ಪ್ರತಿರೋಧ ನೀಡಲು ಸಕಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಪಂಜ್‌ಶೀರ್‌ ಕಣಿವೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗ ಸಲಾಂಗ್ ಹೆದ್ದಾರಿಯನ್ನು ಈಗಾಗಲೇ ಸ್ಫೋಟಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Taliban struggle to breach Panjshir 'fortress' as Northern Alliance forces resist
ಪಂಜ್‌ಶೀರ್‌ಗೆ ಲಗ್ಗೆ ಇಡಲು ತಾಲಿಬಾನ್‌ ಸಿದ್ಧತೆ; ತಕ್ಕ ಪ್ರತ್ಯುತ್ತರ ನೀಡಲು ಕಾದು ಕುಳಿತಿರುವ ಅಹ್ಮದ್‌ ಮಸೂದ್‌ ನೇತೃತ್ವದ ಪಡೆ
author img

By

Published : Aug 23, 2021, 12:01 PM IST

Updated : Aug 23, 2021, 12:25 PM IST

ಅಫ್ಘಾನ್‌ ದೇಶವನ್ನು ತಾಲಿಬಾನ್‌ ವಶಕ್ಕೆ ಪಡೆದ ಒಂದು ವಾರದ ಬಳಿಕ ಇದೀಗ ಸಿಂಹಗಳ ನಾಡು ಖ್ಯಾತಿಯ ಪಂಜಶೀರ್ ಪ್ರಾಂತ್ಯದ ಮೇಲೆ ಉಗ್ರರ ಕೆಂಗಣ್ಣು ಬಿದ್ದಿದೆ. ಉಗ್ರರು ತಮ್ಮ ಪ್ರದೇಶದತ್ತ ಬರಲು ಸಿದ್ಧತೆ ನಡೆಸಿರುವ ವಿಚಾರ ಗೊತ್ತಾಗುತ್ತಿದ್ದಂತೆ ಎಚ್ಚೆತ್ತಿರುವ ಇಲ್ಲಿನ ನಾಯಕರು ತಕ್ಕ ಪ್ರತ್ಯುತ್ತರ ನೀಡಲು ಅಣಿಯಾಗಿದ್ದಾರೆ. ಅಹ್ಮದ್‌ ಮಸೂದ್‌ ಹಾಗೂ ಅಮ್ರುಲ್ಲಾ ಸಲೇಹ್‌ ನೇತೃತ್ವದ ಪಂಜ್‌ಶೀರ್ ಶರಣಾಗತಿಗೆ ತಾಲಿಬಾನ್‌ ಶನಿವಾರ ನಾಲ್ಕು ಗಂಟೆಗಳ ಡೆಡ್‌ ಲೈನ್‌ ನೀಡಿತ್ತು ಎಂದು ಮೂಲಗಳು ತಿಳಿಸಿವೆ.

  • Talibs have massed forces near the entrance of Panjshir a day after they got trapped in ambush zones of neighboring Andarab valley & hardly went out in one piece. Meanwhile Salang highway is closed by the forces of the Resistance. "There are terrains to be avoided". See you.

    — Amrullah Saleh (@AmrullahSaleh2) August 22, 2021 " class="align-text-top noRightClick twitterSection" data=" ">

ಪಂಜ್‌ಶೀರ್‌ ಕಣಿವೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾದ ಸಲಾಂಗ್ ಹೆದ್ದಾರಿಯನ್ನು ಬಂದ್‌ ಮಾಡಿರುವ ಅಘ್ಘಾನ್‌ ಉತ್ತರದ ಮೈತ್ರಿಕೂಟ ಪಡೆಗಳು, ತಾಲಿಬಾನಿಗಳು ತಮ್ಮ ಪ್ರದೇಶಕ್ಕೆ ಬಾರದಂತೆ ತಡೆಯೊಡ್ಡಿದ್ದಾರೆ. ಈ ಮಾರ್ಗದಲ್ಲಿ ಸುಧಾರಿತ ಸ್ಫೋಟಕ ಸಾಧನಗಳನ್ನು ವಾಹನಗಳಲ್ಲಿಟ್ಟು ರಸ್ತೆಗಳನ್ನು ಸ್ಫೋಟಿಸಿದ್ದಾರೆ ಎಂದು ನಂಬಲರ್ಹ ಟ್ವಿಟ್ಟರ್‌ನಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಪಂಜಶೀರ್‌ಗೆ ಹೋಗುವ ಮಾರ್ಗದಲ್ಲಿ ಸಿಗುವ ಹಳ್ಳಿ ಜಬಲ್ ಅಲ್-ಸಿರಾಜ್‌ನ ಜನರು ತಾಲಿಬಾನ್ ದಂಗೆಕೋರರನ್ನು ತಡೆಯಲು ಹೊಂಚು ಹಾಕಿ ಕುಳಿತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: 'ತಾಲಿಬಾನ್‌ ಆಕ್ರಮಣದ ಹಿಂದೆ ಪಾಕಿಸ್ತಾನ ಗುಪ್ತಚರ ಸಂಸ್ಥೆಗಳು ಪ್ರಮುಖ ಪಾತ್ರ ನಿರ್ವಹಿಸಿವೆ'

ತಾಲಿಬಾನ್‌ ಭಯದಿಂದ ಅಧ್ಯಕ್ಷ ಅಶ್ರಫ್ ಘನಿ ದೇಶ ಬಿಟ್ಟು ಓಡಿ ಹೋದ ನಂತರ ಅಫ್ಘಾನಿಸ್ತಾನದ 'ಅಧ್ಯಕ್ಷ'ನೆಂದು ಘೋಷಿಸಿಕೊಂಡಿರುವ ಅಮ್ರುಲ್ಲಾ ಸಲೇಹ್‌, ತಾಲಿಬಾನ್ ಪಂಜಶೀರ್‌ಗೆ ಬಂದರೆ ಉತ್ತರ ಒಕ್ಕೂಟವು ಕಠಿಣ ಪ್ರತಿರೋಧ ಒಡ್ಡುತ್ತದೆ ಎಂದು ಟ್ವಿಟರ್‌ನಲ್ಲಿ ಹೇಳಿದ್ದಾರೆ. ಅಫ್ಘಾನಿಸ್ತಾನದ ವಿವಿಧ ಮೂಲೆಗಳಿಂದ ಕನಿಷ್ಠ 1,000 ಜನರು ಅಭಯಾರಣ್ಯದತ್ತ ಹೋಗಿದ್ದು, ಕಣಿವೆಗಳಲ್ಲಿ ಅವಿತಿದ್ದಾರೆ. ಈಗ ತಾಲಿಬಾನ್ ವಿರುದ್ಧ ದಾಳಿಗಾಗಿ ಇವರು ತರಬೇತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ವಿದ್ಯಾರ್ಥಿಯ ಪ್ರತಿಜ್ಞೆ

ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ ವಿವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಬ್ದುಲ್‌ ಅಲಿ ಫಾಯೆಗ್ ಎಂಬ ವಿದ್ಯಾರ್ಥಿ, ತಾಲಿಬಾನ್‌ಗಳ ವಿರುದ್ಧದ ಹೋರಾಟಕ್ಕಾಗಿ ಬ್ರಿಟಿಷ್‌ ವಿವಿಯಲ್ಲಿ 2ನೇ ವರ್ಷದ ವ್ಯಾಸಂಗ ಮಾಡುತ್ತಿರುವ ನಾನು ಅಹಮ್ಮದ್‌ ಅವರ ಗುಂಪಿಗೆ ಸೇರುತ್ತಿದ್ದೇನೆ. ಮುಂದಿನ ದಿನಗಳಲ್ಲಿ ತನ್ನ ಶಿಕ್ಷಣವನ್ನು ಮುಂದುವರಿಸುವುದಾಗಿ ಫಾಯೆಗ್‌ ಹೇಳಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.

7 ಜಿಲ್ಲೆ ಹೊಂದಿರುವ ಪಂಜಶೀರ್‌ನಲ್ಲಿ 1.73 ಲಕ್ಷ ಜನ

ಅಫ್ಘಾನಿಸ್ತಾನದಲ್ಲಿರುವ 34 ಪ್ರಾಂತ್ಯಗಳಲ್ಲಿ ಪಂಜ್‌ಶೀರ್‌ ಕೂಡ ಒಂದಾಗಿದ್ದು, ದೇಶದ ಈಶಾನ್ಯ ಭಾಗದಲ್ಲಿದೆ. ಪ್ರಾಂತ್ಯವನ್ನು 7 ಜಿಲ್ಲೆಗಳಾಗಿ ವಿಂಗಡಿಸಲಾಗಿದ್ದು, 512 ಗ್ರಾಮಗಳನ್ನು ಹೊಂದಿದೆ. 2021ರ ಜನಗಣತಿ ಪ್ರಕಾರ, ಇಲ್ಲಿ 1 ಲಕ್ಷ 73 ಜನ ಸಂಖ್ಯೆಯನ್ನು ಹೊಂದಿದೆ.

ಬಜಾರಕ್‌ ನಗರ ಪಂಜ್‌ಶೀರ್‌ನ ರಾಜಧಾನಿಯಾಗಿದ್ದು, 2004ರಲ್ಲಿ ಪರ್ವಾನ್‌ ಪ್ರಾಂತ್ಯದಿಂದ ಸ್ವತಂತ್ರಗೊಂಡಿದೆ. ಉತ್ತರ ಕಾಬೂಲ್‌ನಿಂದ 150 ಕಿಲೋ ಮೀಟರ್‌ ದೂರದಲ್ಲಿರುವ ಈ ಪ್ರಾಂತ್ಯದಲ್ಲಿ ಸ್ವರಕ್ಷಣೆಯ ಆಯುಧಗಳನ್ನು ಇಲ್ಲಿನ ಜನ ಹೊಂದಿದ್ದಾರೆ. ಜೊತೆಗೆ ಇಲ್ಲಿನ ನಾಯಕ ಅಹ್ಮದ್‌ ಮಸೂದ್‌ ತಮಗೆ ಅಗತ್ಯ ಶಸ್ತ್ರಾಸ್ತ್ರಗಳನ್ನು ಪೂರೈಸುವಂತೆ ಅಮೆರಿಕಗೆ ಮನವಿ ಮಾಡಿದ್ದಾರೆ ಎಂದು ನ್ಯೂಯಾರ್ಕ್‌ ಪೋಸ್ಟ್‌ ವರದಿ ಮಾಡಿದೆ.

Last Updated : Aug 23, 2021, 12:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.