ETV Bharat / international

ಬರೋಬ್ಬರಿ 73 ವರ್ಷಗಳ ಬಳಿಕ ಸಿಖ್ಖರ ಕೈ ಸೇರಿದ 200 ವರ್ಷ ಹಳೆಯ ಗುರುದ್ವಾರ! - ಸಿಖ್ ಸಮುದಾಯ

ಪ್ರಾಚೀನ ಗುರುದ್ವಾರವನ್ನು 73 ವರ್ಷಗಳ ನಂತರ ಪಾಕಿಸ್ತಾನ ಸರ್ಕಾರ ಮತ್ತು ಬಲೂಚಿಸ್ತಾನ್ ಹೈಕೋರ್ಟ್ ನಮಗೆ ಹಸ್ತಾಂತರಿಸಿದೆ ಎಂದು ಪ್ರಾಂತ್ಯದ ಸಿಖ್ ಸಮುದಾಯವು ತುಂಬಾ ಸಂತಸಗೊಂಡಿದೆ.

Quetta gurdwara
ಹಳೆಯ ಗುರುದ್ವಾರ
author img

By

Published : Jul 23, 2020, 2:24 PM IST

ಕ್ವೆಟ್ಟಾ(ಪಾಕಿಸ್ತಾನ): ಪಾಕ್​ನ ಬಲೂಚಿಸ್ತಾನ್ ಪ್ರಾಂತ್ಯದ ಸರ್ಕಾರವು 73 ವರ್ಷಗಳ ಬಳಿಕ 200 ವರ್ಷಗಳಷ್ಟು ಹಳೆಯದಾದ ಗುರುದ್ವಾರವನ್ನು ಸಿಖ್ ಸಮುದಾಯಕ್ಕೆ ಹಸ್ತಾಂತರಿಸಿದೆ, ಎಂದು ಮಾಧ್ಯಮವೊಂದು ವರದಿ ಮಾಡಿದೆ.

ನಗರದ ಮಧ್ಯಭಾಗದಲ್ಲಿರುವ ಮಸೀದಿ ರಸ್ತೆಯಲ್ಲಿರುವ ಸಿರಿ ಗುರು ಸಿಂಗ್ ಗುರುದ್ವಾರವನ್ನು 1947 ರಿಂದ ಎಪಿಡಬ್ಲ್ಯೂಎ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಾಗಿ ಬಳಸಲಾಗುತ್ತಿತ್ತು ಎಂದು ವರದಿ ತಿಳಿಸಿದೆ.

"ಗುರುದ್ವಾರವನ್ನು ಸಿಖ್ ಸಮುದಾಯದ ಪೂಜಾ ಸ್ಥಳವಾಗಿ ಮರುಸ್ಥಾಪಿಸುವುದು ಬಲೂಚಿಸ್ತಾನ್ ಸರ್ಕಾರದ ಐತಿಹಾಸಿಕ ನಿರ್ಧಾರ" ಎಂದು ಪ್ರಾಂತೀಯ ಸಂಸದೀಯ ಕಾರ್ಯದರ್ಶಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಮುಖ್ಯಮಂತ್ರಿಯ ಸಲಹೆಗಾರ ದೇನೇಶ್ ಕುಮಾರ್ ಹೇಳಿದ್ದಾರೆ.

ಇನ್ನು ಎಪಿಡಬ್ಲ್ಯೂಎ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳನ್ನು ಹತ್ತಿರದ ಶಾಲೆಗಳಿಗೆ ತೆರಳಲು ತಿಳಿಸಲಾಗಿದೆ.

ಇನ್ನು ಬಲೂಚಿಸ್ತಾನದ ಸಿಖ್ ಸಮುದಾಯ ಸಮಿತಿಯ ಅಧ್ಯಕ್ಷ ಸರ್ದಾರ್ ಜಸ್ಬೀರ್ ಸಿಂಗ್ ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಇದು ಬಲೂಚಿಸ್ತಾನ್ ಸರ್ಕಾರವು ಈ ಪ್ರಾಂತ್ಯದಲ್ಲಿ ವಾಸಿಸುವ ಸಿಖ್ ಸಮುದಾಯಕ್ಕೆ ನೀಡಿದ ಉಡುಗೊರೆ ಎಂದು ಬಣ್ಣಿಸಿದರು.

"ನಮ್ಮ ಪ್ರಾಚೀನ ಗುರುದ್ವಾರವನ್ನು 73 ವರ್ಷಗಳ ನಂತರ ಪಾಕಿಸ್ತಾನ ಸರ್ಕಾರ ಮತ್ತು ಬಲೂಚಿಸ್ತಾನ್ ಹೈಕೋರ್ಟ್ ನಮಗೆ ಹಸ್ತಾಂತರಿಸಿದೆ ಎಂದು ಪ್ರಾಂತ್ಯದ ಸಿಖ್ ಸಮುದಾಯವು ತುಂಬಾ ಸಂತೋಷವಾಗಿದೆ ಮತ್ತು ಈಗ ನಾವು ಅಲ್ಲಿ ನಮ್ಮ ಧಾರ್ಮಿಕ ಆಚರಣೆಯನ್ನು ಮುಂದುವರಿಸಬಹುದು" ಎಂದು ಸಿಂಗ್​ ಸಂತೋಷ ವ್ಯಕ್ತಪಡಿಸಿದ್ದಾರೆ.

ಬಲೂಚಿಸ್ತಾನದಲ್ಲಿ ಸುಮಾರು 2,000 ಸಿಖ್ ಕುಟುಂಬಗಳು ವಾಸಿಸುತ್ತಿವೆ. ಈ ಫೆಬ್ರವರಿಯಲ್ಲಿ ಬಲೂಚಿಸ್ತಾನ್ ಸರ್ಕಾರವು ಝೋಬ್‌ನಲ್ಲಿ 200 ವರ್ಷಗಳಷ್ಟು ಹಳೆಯದಾದ ದೇವಾಲಯವನ್ನು ಹಿಂದೂ ಸಮುದಾಯಕ್ಕೆ ಹಸ್ತಾಂತರಿಸಿತ್ತು. ಈ ದೇವಾಲಯವನ್ನು ಸರ್ಕಾರಿ ಬಾಲಕಿಯರ ಶಾಲೆಯಾಗಿ ಪರಿವರ್ತಿಸಲಾಗಿತ್ತು, ಅದನ್ನು ಈಗ ಮತ್ತೊಂದು ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.