ETV Bharat / international

ಭೂಕಂಪಕ್ಕೆ ಜಪಾನ್​ ತತ್ತರ.. ನಾಲ್ವರ ಸಾವು, 90ಕ್ಕೂ ಹೆಚ್ಚು ಜನರಿಗೆ ಗಾಯ: ಭರದಿಂದ ಸಾಗಿದ ರಕ್ಷಣಾ ಕಾರ್ಯ - ಜಪಾನ್​ ಭೂಕಂಪ ಸುದ್ದಿ

ಉತ್ತರ ಜಪಾನ್‌ನಲ್ಲಿ ಸಂಭವಿಸಿದ 7.4 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ 4 ಜನರು ಸಾವನ್ನಪ್ಪಿದ್ದು, 90ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

Powerful quake off north Japan  dies and injures in powerful quake off Japan  japan earthquake  Fukushima earthquake  ಉತ್ತರ ಜಪಾನ್​ನಲ್ಲಿ ಪ್ರಬಲ ಭೂಕಂಪ  ಜಪಾನ್​ನ ಪ್ರಬಲ ಭೂಕಂಪನದಲ್ಲಿ ಸಾವು ನೋವುಗಳು  ಜಪಾನ್​ ಭೂಕಂಪ ಸುದ್ದಿ  ಫುಕುಶಿಮಾ ಭೂಕಂಫ
ಭೂಕಂಪಕ್ಕೆ ಜಪಾನ್​ ಉತ್ತರ ತತ್ತರ
author img

By

Published : Mar 17, 2022, 9:49 AM IST

ಟೊಕಿಯೋ: ಫುಕುಶಿಮಾ ಕರಾವಳಿಯಲ್ಲಿ ನಿನ್ನೆ ರಾತ್ರಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಪೀಠೋಪಕರಣಗಳು, ಮನೆಗಳು ಜಖಂಗೊಂಡಿವೆ. ಅಷ್ಟೇ ಅಲ್ಲದೆ ಇದುವರಿಗೆ ವಿದ್ಯುತ್ ತಗುಲಿ ನಾಲ್ಕು ಜನರು ಸಾವನ್ನಪ್ಪಿದ್ದು, 90 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇನ್ನು ಸಣ್ಣ ಪ್ರಮಾಣದಲ್ಲಿ ಸುನಾಮಿ ಅಪ್ಪಳಿಸಿದ್ದು, ಸುನಾಮಿಯಿಂದ ಹೆಚ್ಚು ಹಾನಿಯಾಗಿಲ್ಲ ಎಂದು ವರದಿಯಾಗಿದೆ.

ಇಂದು ಬೆಳಗ್ಗೆ ಸಂಸತ್ತಿನ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ, ಭೂಕಂಪದ ಸಮಯದಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು ಅವರ ಸಾವಿನ ಕಾರಣವನ್ನು ತನಿಖೆ ಮಾಡಲಾಗುತ್ತಿದೆ. 97 ಜನ ಗಾಯಗೊಂಡಿದ್ದಾರೆ ಎಂದು ಹೇಳಿದರು.

ಓದಿ: ರಷ್ಯಾ - ಉಕ್ರೇನ್​ ಯುದ್ಧ: ಕೀವ್​​ಗೆ ಅಮೆರಿಕ ನೀಡುತ್ತಿರುವ ಮಿಲಿಟರಿ ಉಪಕರಣಗಳ ಸಹಾಯ ಹೇಗಿದೇ ಗೊತ್ತಾ!?

ಸುರಕ್ಷತೆ ಹಿನ್ನೆಲೆ ತನ್ನ ಹೆಚ್ಚಿನ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಪೂರ್ವ ಜಪಾನ್ ರೈಲ್ವೆ ಕಂಪನಿ ಹೇಳಿತ್ತು. ಈಗ ಕೆಲವು ಸ್ಥಳೀಯ ರೈಲುಗಳು ಸೇವೆಯನ್ನು ಪುನರಾರಂಭಿಸಿದ್ದೇವೆ. ಆದರೆ, ಟೊಕಿಯೋದಲ್ಲಿ ರೈಲುಗಳು ಗುರುವಾರ ಬೆಳಗ್ಗೆಯಿಂದ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆ. ಭೂಕಂಪದಿಂದಾಗಿ ಫುಕುಶಿಮಾ ಮತ್ತು ಮಿಯಾಗಿ ನಡುವೆ ಟೊಹೊಕು ಶಿಂಕನ್‌ಸೆನ್ ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿದೆ. ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಪ್ರಧಾನಿ ಫ್ಯೂಮಿಯೊ ಕಿಶಿಡಾ ಹೇಳಿದ್ದಾರೆ.

ಸರ್ಕಾರವು ಹಾನಿಯ ಪ್ರಮಾಣವನ್ನು ಅಂದಾಜು ಮಾಡುತ್ತಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ಸಾಧ್ಯವಾದಷ್ಟು ಮಾಡುವುದಾಗಿ ಭರವಸೆ ನೀಡಿದೆ. ಸೋಮಾ ನಗರದಲ್ಲಿ 60ರ ಹರೆಯದ ವ್ಯಕ್ತಿಯೊಬ್ಬರನ್ನು ಸ್ಥಳಾಂತರಿಸುವ ವೇಳೆ ಎರಡನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಇನ್ನು 70 ರ ಹರೆಯದ ವ್ಯಕ್ತಿಯೊಬ್ಬರು ಗಾಬರಿಗೊಂಡು ಹೃದಯಾಘಾತಕ್ಕೊಳಗಾದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಓದಿ: ಖೇರ್ಸನ್​​ ವಿಮಾನ ನಿಲ್ದಾಣದ ಮೇಲೆ ಉಕ್ರೇನಿಯನ್​ ಪಡೆಗಳ ದಾಳಿ: ಎರಡೂ ಪಡೆಗಳ ನಡುವೆ ಭೀಕರ ಕಾಳಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.