ಕಾಬೂಲ್: ತಾಲಿಬಾನ್ ಉಗ್ರರ ಪಡೆ ಅಫ್ಘಾನ್ ರಾಜಧಾನಿ ಕಾಬೂಲ್ ವಶಕ್ಕೆ ಪಡೆದುಕೊಂಡಿದ್ದು ಅಲ್ಲಿನ ಕಟ್ಟಡಗಳ ಗೋಡೆಗಳಲ್ಲಿದ್ದ ಮಹಿಳೆಯರ ಪೋಸ್ಟರ್ಗಳಿಗೆ ಬಣ್ಣ ಬಳಿಯುತ್ತಿದೆ. ಇದು ಅಲ್ಲಿನ ನಿವಾಸಿಗಳನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಅಶ್ರಫ್ ಘನಿ ಸರ್ಕಾರದ ಅವಧಿಯಲ್ಲಿ ಅಳವಡಿಸಲಾಗಿದ್ದ ಎಲ್ಲಾ ಪೋಸ್ಟರ್ಗಳಿಗೂ ತಾಲಿಬಾನಿಗರು ಬಣ್ಣ ಬಳಿದು ಅಳಿಸಿ ಹಾಕುತ್ತಿದ್ದಾರೆ.
-
Kabul. pic.twitter.com/RyZcA7pktj
— Lotfullah Najafizada (@LNajafizada) August 15, 2021 " class="align-text-top noRightClick twitterSection" data="
">Kabul. pic.twitter.com/RyZcA7pktj
— Lotfullah Najafizada (@LNajafizada) August 15, 2021Kabul. pic.twitter.com/RyZcA7pktj
— Lotfullah Najafizada (@LNajafizada) August 15, 2021
ಮಹಿಳೆಯರ ಮೇಲಿನ ದಬ್ಬಾಳಿಕೆಯ ಮುನ್ಸೂಚನೆ
2001ಕ್ಕಿಂತ ಮೊದಲು ಅಘ್ಘಾನ್ನಲ್ಲಿ ತಾಲಿಬಾನ್ ಆಳ್ವಿಕೆಯಿತ್ತು. ಆ ಸಮಯದಲ್ಲಿ ಮಹಿಳೆಯರು ಏಕಾಂಗಿಯಾಗಿ ಎಲ್ಲಿಯೂ ಓಡಾಡುವಂತಿರಲಿಲ್ಲ. ಎಲ್ಲಾದರೂ ಹೋಗಬೇಕೆಂದರೆ ಪುರುಷರ ನೆರವು ಅವರಿಗೆ ಅನಿವಾರ್ಯವಾಗಿತ್ತು. ಒಂದು ವೇಳೆ ಮಹಿಳೆಯರು ಏಕಾಂಗಿಯಾಗಿ ತಿರುಗಾಡಿದರೆ ಅಂಥವರ ಮೇಲೆ ವ್ಯಭಿಚಾರದ ಆರೋಪ ಹೊರಿಸಿ ಅವರನ್ನು ಥಳಿಸಿ ಕೊಲ್ಲಲಾಗುತ್ತಿತ್ತು. ಇದೀಗ ಅಫ್ಘಾನಿಸ್ತಾನ ಮತ್ತೆ ತಾಲಿಬಾನ್ ಉಗ್ರರ ಕೈವಶವಾಗಿದೆ. ಮುಂದಿನ ದಿನಗಳಲ್ಲಿ ಇಂತಹದ್ದೇ ದುಷ್ಕೃತ್ಯಗಳು ಮರುಕಳಿಸುವ ಮುನ್ಸೂಚನೆ ಸಿಕ್ಕಿದೆ.
ಅಫ್ಘಾನ್ನಲ್ಲಿ ತಾಲಿಬಾನ್ ಆಳ್ವಿಕೆ
ಅಫ್ಘಾನ್ ಸರ್ಕಾರ ಮತ್ತು ತಾಲಿಬಾನ್ ನಾಯಕರ ನಡುವಿನ ಮಾತುಕತೆಯ ನಂತರ, ತಾಲಿಬಾನ್ ಮಧ್ಯಂತರ ಸರ್ಕಾರವನ್ನು ಈಗಾಗಲೇ ಘೋಷಿಸಿದೆ. ಯುದ್ಧಪೀಡಿತ ದೇಶದ ನೂತನ ಅಧ್ಯಕ್ಷರಾಗಿ ತಾಲಿಬಾನ್ ನಾಯಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಹೆಸರನ್ನು ಪ್ರಕಟಿಸಲಾಗಿದೆ.
ಇದನ್ನೂ ಓದಿ: ಕಾಬೂಲ್ ಪ್ರವೇಶಿಸಿದ ತಾಲಿಬಾನ್.. ಇಂದು ರಾತ್ರಿ ದೆಹಲಿಗೆ ಕಾಬೂಲ್‌ನಿಂದ ಅಂತಿಮ ಏರ್ ಇಂಡಿಯಾ ವಿಮಾನ..