ETV Bharat / international

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಅಳಿಯ ಅರೆಸ್ಟ್​

ಮಿಲಿಟರಿ ವಿರುದ್ಧ ಘೋಷಣೆ ಕೂಗುತ್ತಿದ್ದ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಅವರ ಅಳಿಯನನ್ನು ಪಾಕ್​ ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

author img

By

Published : Oct 19, 2020, 6:02 PM IST

Mohammad Safdar
ಮೊಹಮ್ಮದ್ ಸಫ್ದರ್

ಕರಾಚಿ: ಪಾಕ್ ನಿರ್ಮಾತೃ ಮೊಹಮ್ಮದ್ ಅಲಿ ಜಿನ್ನಾ ಅವರ ಸಮಾಧಿಯ ಬಳಿ, ಪಾಕಿಸ್ತಾನ ಮಿಲಿಟರಿ ವಿರುದ್ಧ ಘೋಷಣೆ ಕೂಗುತ್ತಿದ್ದ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಅವರ ಅಳಿಯನನ್ನು ಪಾಕಿಸ್ತಾನದ ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್ ಸಫ್ದರ್ ಬಂಧಿತನಾಗಿದ್ದು, ಭಾನುವಾರ ಮೊಹಮ್ಮದ್ ಅಲಿ ಜಿಲ್ಲಾ ಅವರ ಸಮಾಧಿಯ ಬಳಿಗೆ ಧಾವಿಸಿ, ಜನರನ್ನು ಗುಂಪುಗೂಡಿಸಿ ಪಾಕ್ ಮಿಲಿಟರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಪಾಕಿಸ್ತಾನದಲ್ಲಿನ ಮಿಲಿಟರಿ ವಿರುದ್ಧವಾಗಿ ಬಳಸುವ ಮತಹಾಕಲು ಗೌರವ ಕೊಡಿ ಎಂದು ಘೋಷಣೆ ಕೂಗುತ್ತಿದ್ದರು.

ಈ ವೇಳೆ ಪೊಲೀಸರು ಅವರನ್ನು ಬಂಧಿಸಿದ್ದು, ಜನ ಸಾಮಾನ್ಯರಿಗೆ ತೊಂದರೆ ಕೊಡುತ್ತಿದ್ದ ಎಂಬ ಆರೋಪದಲ್ಲಿ ಬಂದ ದೂರನ್ನು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ವತಃ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಪಾಕಿಸ್ತಾನ ಮುಸ್ಲಿಂ ಲೀಗ್ ಪಾರ್ಟಿಯ ಸದಸ್ಯನಾಗಿರುವ 70 ವರ್ಷದ ಮೊಹಮ್ಮದ್ ಸಫ್ದರ್ ಆಗಾಗ ಮಿಲಿಟರಿ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದು, ಅವರ ಮಾವ ನವಾಜ್ ಷರೀಫ್ ಮೂರು ಬಾರಿ ಪಾಕಿಸ್ತಾನದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು. ತಮ್ಮ ಆಡಳಿತಾವಧಿಯಲ್ಲಿ ಮಿಲಿಟರಿ ವಿರುದ್ಧವೂ ಕೂಡಾ ಆಕ್ರೋಶ ಹೊರಹಾಕುತ್ತಿದ್ದರು.

2017ರಲ್ಲಿ ನವಾಜ್ ಷರೀಫ್ ಅವರನ್ನು ಭ್ರಷ್ಟಾಚಾರ ಆರೋಪದಲ್ಲಿ ಅಧಿಕಾರದಿಂದ ಕೆಳಗೆ ಇಳಿಸಲಾಯಿತು. ಇದಾದ ನಂತರ ವೈದ್ಯಕೀಯ ಚಿಕಿತ್ಸೆಗೆ ಲಂಡನ್​ಗೆ ತೆರಳಿದ ಅವರು ಅಲ್ಲಿಯೇ ನೆಲೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.