ಸಿಯೋಲ್: ಉತ್ತರ ಕೊರಿಯಾದ ಗಡಿ ಪ್ರದೇಶವಾದ ಕೈಸೊಂಗ್ನಲ್ಲಿ ಶಂಕಿತ ಕೋವಿಡ್-19 ವ್ಯಕ್ತಿಯೋರ್ವ ಪತ್ತೆಯಾಗಿದ್ದು, ಇಡೀ ನಗರವನ್ನೇ ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ. ಅಲ್ಲದೇ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದು ಉತ್ತರ ಕೊರಿಯಾ ಮಾಧ್ಯಮಗಳು ವರದಿ ಮಾಡಿವೆ.
ದಕ್ಷಿಣ ಕೊರಿಯಾದಿಂದ ಅಕ್ರಮವಾಗಿ ಗಡಿ ನುಸುಳಿ ವ್ಯಕ್ತಿಯೋರ್ವ ಕೈಸೊಂಗ್ಗೆ ಪ್ರವೇಶಿದ್ದು, ಆತನಿಗೆ ಕೊರೊನಾ ಲಕ್ಷಣಗಳು ಕಂಡುಬಂದಿವೆ. ಈ ವ್ಯಕ್ತಿಗೇನಾದರೂ ಸೋಂಕು ದೃಢವಾದರೆ ಉತ್ತರ ಕೊರಿಯಾದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾದಂತಾಗುತ್ತದೆ. ಈವರೆಗೆ ಒಂದೂ ಕೇಸ್ ವರದಿಯಾಗಿಲ್ಲವೆಂದು ಇಲ್ಲಿನ ಅಧಿಕಾರಿಗಳು ತಿಳಿಸಿದ್ದರು.
ಶಂಕಿತನ ಕುರಿತು ಮಾಹಿತಿ ಸಿಗುತ್ತಿದ್ದಂತೆಯೇ ತುರ್ತು ಸಭೆ ನಡೆಸಿದ್ದ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್, 'ಕೆಟ್ಟ ವೈರಸ್ ದೇಶವನ್ನು ಪ್ರವೇಶಿಸಿದೆ ಎಂದು ಹೇಳಬಹುದಾದ ನಿರ್ಣಾಯಕ ಪರಿಸ್ಥಿತಿ ಇದಾಗಿದೆ' ಎಂದು ಹೇಳಿ ಕೈಸೊಂಗ್ ನಗರವನ್ನು ಸಂಪೂರ್ಣ ಲಾಕ್ಡೌನ್ ಮಾಡಿ, ತುರ್ತು ಪರಿಸ್ಥಿತಿಯನ್ನು ಘೋಷಿಸಿ ಆದೇಶ ಹೊರಡಿಸಿದ್ದಾರೆ.